Advertisement

Arrested: ಡ್ರಗ್ಸ್‌ ಮಾರುತ್ತಿದ್ದ ಇಬ್ಬರ ಸೆರೆ, 16 ಲಕ್ಷ ರೂ. ಮಾದಕ ವಸ್ತು ವಶ

09:48 AM Apr 03, 2024 | Team Udayavani |

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೇರಳ ಮೂಲದ ಆರೋಪಿ ಸೇರಿ ಇಬ್ಬರನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

Advertisement

ಕೇರಳ ಮೂಲದ ಶಿವಕೃಷ್ಣ (32) ಮತ್ತು ರೋಷನ್‌(28) ಬಂಧಿತರು ಆರೋಪಿಗಳಿಂದ 16.5 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಮಾ.26ರಂದು ಮೈಕೋ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಗುಜರಿ ಅಂಗಡಿಯಲ್ಲಿ ಮಾದಕ ವಸ್ತು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ರೋಷನ್‌ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ 6 ಲಕ್ಷ ರೂ. ಮೌಲ್ಯದ 200 ಕೆ.ಜಿ.ಗಾಂಜಾ ಮತ್ತು 2 ಮೊಬೈಲ್‌, 1 ಬೈಕ್‌ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಕೇರಳ ಮೂಲದ ಯುವಕ ಬಂಧನ: ಮತ್ತೂಂದು ಪ್ರಕರಣದಲ್ಲಿ ಮಾ.27ರಂದು ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ಕೇರಳ ಮೂಲದ ಶಿವ ಕೃಷ್ಣ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ 10.50 ಲಕ್ಷ ರೂ.ಮೌಲ್ಯದ 5 ಕೆ.ಜಿ. 180 ಗ್ರಾಂ ಗಾಂಜಾ  ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next