Advertisement
“ವಿಸ್ಮಯ’ ಒಂದು ಪಕ್ಕಾ ಥ್ರಿಲ್ಲರ್ ಮತ್ತು ಮರ್ಡರ್ ಮಿಸ್ಟ್ರಿ ಚಿತ್ರ. ಇಲ್ಲಿ ಒಬ್ಟಾತ ಕೊಲೆಗಳನ್ನು ಮಾಡುವುದಷ್ಟೇ ಅಲ್ಲ, ಪ್ರತಿ ಬಾರಿಯೂ ಚಿತ್ರ ಹಿಂಸೆ ಕೊಟ್ಟು ಬರ್ಬರವಾಗಿ ಕೊಲೆ ಮಾಡುತ್ತಿರುತ್ತಾನೆ. ಕೊಲೆಯಾದವನ ಮುಖಕ್ಕೊಂದು ಮುಖವಾಡ ಹಾಕುವುದರ ಜೊತೆಗೆ ಬೆನ್ನಿನ ಮೇಲೆ ಒಂದು ಕೋಡ್ ನಂಬರ್ ಸಹ ಬರೆದಿರುತ್ತಾನೆ. ಇದೆಲ್ಲಾ ಆದ ಮೇಲೆ ಬುಲೆಟ್ ಹೊಡೆಯುತ್ತಿರುತ್ತಾನೆ. ಈ ಮೂಲಕ ಕ್ಲೂ ಕೊಡುತ್ತಿರುತ್ತಾನೆ. ಅಷ್ಟೇ ಅಲ್ಲ, ಮುಂದಿನ ಕೊಲೆಗೂ ಮುಂಚಿತವಾಗಿ ಒಂದು ಕ್ಲೂ ಕೊಟ್ಟು ಹೋಗುತ್ತಿರುತ್ತಾನೆ.
Related Articles
Advertisement
ಇಡೀ ದೇಶವನ್ನು ಬೆಚ್ಚಿಬೀಳಿಸಿದ ಆ ಘಟನೆಯನ್ನಿಟ್ಟುಕೊಂಡು ಈಗಾಗಲೇ ಕೆಲವು ಚಿತ್ರಗಳು ಬಂದಿವೆ. ಆ ಚಿತ್ರಗಳೆಲ್ಲಾ ಬರೀ ಆ ಘಟನೆ ಮತ್ತು ಆ ನಂತರ ಏನಾಗಿತ್ತು ಎನ್ನುವುದರ ಕುರಿತು ಹೇಳಿದ್ದವು. ಅರುಣ್ ಆ ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು, ಒಂದು ಕಾಲ್ಪನಿಕ ಮರ್ಡರ್ ಮಿಸ್ಟ್ರಿ ಹೆಣೆದಿದ್ದಾರೆ. ಒಂದು ಘಟನೆಯನ್ನು ಕಾಲ್ಪನಿಕವಾಗಿ ಹಾಗೂ ಮುಂದುವರೆಸಬಹುದು ಎಂದು ತೋರಿಸಿದ್ದಾರೆ.
ಒಂದು ಮರ್ಡರ್ ಮಿಸ್ಟ್ರಿಗೆ ಬೇಕಾದಂತಹ ಗಾಂಭೀರ್ಯ ಚಿತ್ರದಲ್ಲಿದೆ. ಇಲ್ಲಿ ಅರುಣ್ ಕಥೆ ಬಿಟ್ಟು ಹೋಗುವುದಿಲ್ಲ. ಹೇಳುವುದನ್ನು ನೇರವಾಗಿ ಹೇಳಿದ್ದಾರೆ. ಆದರೂ ರಂಜಿತ್ ಕಾಳಿದಾಸನ ಫ್ಯಾಮಿಲಿ ಲೈಫು ಬೋರು ಹೊಡೆಸುತ್ತದೆ. ಇನ್ನು ಚಿತ್ರದ ದೊಡ್ಡ ಸಮಸ್ಯೆಯೆಂದರೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಗದಿರುವುದು. ಪ್ರಮುಖವಾಗಿ ಮೂರನೆಯ ಕೊಲೆ ನಡೆಯುವ ಹೊತ್ತಿಗೆ, ರಂಜಿತ್‌ಗೆ ಹಲವು ವಿಷಯಗಳು ಜ್ಞಾನೋದಯವಾಗುತ್ತದೆ.
ಒಬ್ಬ ಪುಟ್ಟ ಹುಡುಗನನ್ನು ನೋಡಿ, ಆತನ ಹೆಸರು ಕೇಳುತ್ತಿದ್ದಂತೆಯೇ ಏನೋ ಹೊಳೆಯುತ್ತದೆ ಮತ್ತು ಅದರಿಂದ ಕೊಲೆಗಳಿಗೊಂದು ಲೀಡ್ ಸಿಗುತ್ತದೆ. ಅದೆಲ್ಲಾ ಹೇಗೆ ಸಾಧ್ಯವಾಗುತ್ತದೆ ಎಂಬುದಕ್ಕೆ ಯಾವುದೇ ಉತ್ತರ ಅಥವಾ ಸಮಜಾಯಿಷಿಗಳಿಲ್ಲ. ಇಂತಹ ಕೆಲವು ವಿಷಯಗಳನ್ನು ಸ್ಪಷ್ಟಪಡಿಸುವ ಅಗತ್ಯವಿತ್ತು. ಅದು ಬಿಟ್ಟರೆ, ಮಿಕ್ಕಂತೆ ಚಿತ್ರದ ಬಗ್ಗೆ ಹೆಚ್ಚು ತಪ್ಪುಗಳನ್ನು ಹುಡುಕುವುದು ಕಷ್ಟ.
ಅರ್ಜುನ್ ಸರ್ಜಾ ಅವರಿಗೆ ಹೇಳಿ ಮಾಡಿಸಿದಂತಹ ಪಾತ್ರವಿದೆ ಮತ್ತು ಅವರು ಬಹಳ ಚೆನ್ನಾಗಿ ಅದನ್ನು ಬಳಸಿಕೊಂಡಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿಯ ಚುರುಕುತನ ಮತ್ತು ಹತಾಶೆಗಳನ್ನು ಬಹಳ ಚೆನ್ನಾಗಿ ತಮ್ಮ ಪಾತ್ರದಲ್ಲಿ ಹಿಡಿದಿಟ್ಟಿದ್ದಾರೆ. ಶ್ರುತಿ ಹರಿಹರನ್‌ಗೆ ಹೆಚ್ಚು ಕೆಲಸವಿಲ್ಲ. ಪ್ರಸನ್ನ, ವರಲಕ್ಷ್ಮೀ, ಸುಹಾಸಿನಿ, ಸುಮನ್, ಸುಧಾರಾಣಿ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಎಲ್ಲರೂ ತಮ್ಮ ಕೆಲಸವನ್ನು ನೀಟ್ ಆಗಿ ಮಾಡಿದ್ದಾರೆ.
ಅರ್ಜುನ್ ಬಿಟ್ಟರೆ, ಗಮನಸೆಳೆಯುವ ಮತ್ತೂಬ್ಬ ವ್ಯಕ್ತಿ ಎಂದರೆ ಅದು ಜೆಕೆ. ಬಹಳ ದಿನಗಳ ನಂತರ ಚಿತ್ರವೊಂದರಲ್ಲಿ ನಟಿಸಿರುವ ಜೆಕೆ, ಒಂದೊಳ್ಳೆಯ ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ನವೀನ್ ಅವರ ಹಾಡುಗಳಿಗಿಂಥ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಅರವಿಂದ್ ಕೃಷ್ಣ ಬಹಳ ಚೆನ್ನಾಗಿ ಚಿತ್ರದ ಮೂಡ್ ಕಟ್ಟಿಕೊಟ್ಟಿದ್ದಾರೆ.
ಚಿತ್ರ: ವಿಸ್ಮಯನಿರ್ದೇಶನ: ಅರುಣ್ ವೈದ್ಯನಾಥನ್
ನಿರ್ಮಾಣ: ಉಮೇಶ್, ಸುಧನ್ ಸುಂದರಂ, ಜಯರಾಮ್ ಮತ್ತು ಅರುಣ್ ವೈದ್ಯನಾಥನ್
ತಾರಾಗಣ: ಅರ್ಜುನ್ ಸರ್ಜಾ, ಶ್ರುತಿ ಹರಿಹರನ್, ಪ್ರಸನ್ನ, ವರಲಕ್ಷ್ಮೀ ಶರತ್ ಕುಮಾರ್, ಜೆಕೆ ಮುಂತಾದವರು * ಚೇತನ್ ನಾಡಿಗೇರ್