Advertisement

Byju’s: 15 ಸಾವಿರ ಸಿಬ್ಬಂದಿಗಳಿಗೆ ಸಂಬಳ ಕೊಡಲು ತನ್ನ ಮನೆಯನ್ನೇ ಅಡವಿಟ್ಟ ಬೈಜುಸ್ ಸಂಸ್ಥಾಪಕ

09:22 AM Dec 05, 2023 | Team Udayavani |

ನವದೆಹಲಿ: ಒಂದು ಕಾಲದಲ್ಲಿ ಒಳ್ಳೆಯ ಹೆಸರು ಮಾಡಿದ್ದ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೈಜುಸ್ ಕೂಡ ಒಂದು ಆದರೆ ಇಂದು ಅದೇ ಕಂಪೆನಿ ಆರ್ಥಿಕ ಸಂಕಷ್ಟಕೆ ಸಿಲುಕಿ ತನ್ನ ಸಿಬ್ಬಂದಿಗೆ ವೇತನ ಕೊಡಲು ಪರದಾಡುವ ಪರಿಸ್ಥಿತಿಗೆ ಬಂದಿದೆ ಎಂಬುದು ಮಾಹಿತಿ.

Advertisement

ಇದೀಗ ತನ್ನ ಹದಿನೈದು ಸಾವಿರ ಉದ್ಯೋಗಿಗಳಿಗೆ ವೇತನ ಕೊಡಲು ಕಷ್ಟಸಾಧ್ಯವಾಗಿದ್ದು ಅದಕ್ಕಾಗಿ ಬೈಜುಸ್ ಮಾಲೀಕ ರವೀಂದ್ರನ್ ತನ್ನ ಸಿಬ್ಬಂದಿಗಳಿಗೆ ವೇತನ ನೀಡಲು ಬೆಂಗಳೂರಿನಲ್ಲಿರುವ ತನ್ನ ಐಷಾರಾಮಿ ಬಂಗಲೆಗಳನ್ನು ಅಡವಿಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಕೋವಿಡ್ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬೈಜುಸ್ ಪ್ರಗತಿ ಕಾಣಲು ಹರಸಾಹಸ ಪಡುತ್ತಿದೆ ಅದರ ನಡುವೆ ಇದೀಗ ಅಲ್ಲಿನ ಸಿಬ್ಬಂದಿಗಳಿಗೆ ವೇತನ ನೀಡಲು ಹಣದ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: Cyclone: ಚೆನ್ನೈನಲ್ಲಿ 5 ಮಂದಿ ಮೃತ್ಯು, ಇಂದು ಆಂಧ್ರ ಕರಾವಳಿ ಭಾಗಕ್ಕೆ ಚಂಡಮಾರುತ ಭೀತಿ

Advertisement

Udayavani is now on Telegram. Click here to join our channel and stay updated with the latest news.

Next