Advertisement
ಯಶ್ (Actor Yash) ಗ್ಯಾಂಗ್ ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿರುವ ʼಟಾಕ್ಸಿಕ್ʼ ಗೋವಾದಲ್ಲಿನ ಡ್ರಗ್ ಕಾರ್ಟೆಲ್ ಸುತ್ತಲಿನ ಕಥೆಯನ್ನು ಒಳಗೊಳ್ಳಲಿದೆ. ಕ್ಲಬ್ವೊಂದರಲ್ಲಿ ಪಾರ್ಟಿ ಮೂಡಿನಲ್ಲಿರುವ ಲುಕ್ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಮೋಹಕ ಬೆಡಗಿಯರ ಜತೆಗೆ ಯಶ್ ಕುಣಿದಾಡಿದ್ದಾರೆ.
Related Articles
Advertisement
ವರದಿಗಳ ಪ್ರಕಾರ 300 ಕೋಟಿ ರೂ. ಬಜೆಟ್ನಲ್ಲಿ ʼಟಾಕ್ಸಿಕ್ʼ ನಿರ್ಮಾಣವಾಗಲಿದೆ. ಚಿತ್ರದಲ್ಲಿ ಮಲ್ಟಿಸ್ಟಾರ್ಸ್ ಗಳಿದ್ದಾರೆ. ಯಾವೆಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವುದರ ಬಗೆಗಿನ ಸುದ್ದಿಯೊಂದು ಹೊರಬಿದ್ದಿದೆ.
ಯಶ್ ʼಟಾಕ್ಸಿಕ್ʼನಲ್ಲಿ ನಟಿಸಲು 50 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ. ಇದರ ಜತೆ ಅವರು ಚಿತ್ರದ ಲಾಭಾಂಶವನ್ನು ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ಇನ್ನು ಹಿಂದಿಯ ಜನಪ್ರಿಯ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ತಮ್ಮ ಪಾತ್ರಕ್ಕಾಗಿ 3 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.
ಇನ್ನು ನಟಿ ಸಂಯುಕ್ತಾ ಮೆನನ್ (Samyuktha Menon) ಅವರ ಪಾತ್ರಕ್ಕೆ 1 ಕೋಟಿ ರೂ. ಪಾವತಿಸಲಾಗಿದೆ. ಅವರು ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.