Advertisement

ತಪ್ಪಿದ ಹ್ಯಾಟ್ರಿಕ್ ನಲ್ಲೂ ಉಮೇಶ್ ಯಾದವ್ ವಿಶಿಷ್ಠ ಸಾಧನೆ

12:51 PM Oct 14, 2018 | Team Udayavani |

ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ರವಿವಾರ ಭಾರತದ ವೇಗಿ ಉಮೇಶ್ ಯಾದವ್ ವಿಶಿಷ್ಠ ಸಾಧನೆ ಮಾಡಿದ್ದಾರೆ. 

Advertisement

ಕೆರಿಬಿಯನ್ನರ ಮೊದಲ ಇನ್ನಿಂಗ್ಸ್ ನ ಕೊನೆಯ ಎರಡು ವಿಕೆಟ್ ಗಳನ್ನು ಸತತ ಎಸೆತಗಳಲ್ಲಿ ಪಡೆದಿದ್ದ ಉಮೇಶ್ ಎರಡನೇ ಇನ್ನಿಂಗ್ಸ್ ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದರೆ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದಂತಾಗುತ್ತಿತ್ತು. 

ಉಮೇಶ್ ಯಾದವ್ ಮೊದಲ ಎಸೆತವನ್ನು ಕ್ರೇಗ್ ಬ್ರಾಥ್ ವೇಟ್ ಸಮರ್ಥವಾಗಿ ಎದುರಿಸಿದರು. ಈ ಮೂಲಕ ಉಮೇಶ್ ಹ್ಯಾಟ್ರಿಕ್ ಆಸೆಗೆ ತಣ್ಣೀರೆರಚಿದರು. ಆದರೆ ಎರಡನೇ ಎಸೆತದಲ್ಲಿ ಬ್ರಾಥ್ ವೇಟ್ ವಿಕೆಟ್ ಪಡೆದ ಉಮೇಶ್ ಹೊಸತೊಂದು ದಾಖಲೆಗೆ ತನ್ನ ಹೆಸರು ಸೇರಿಸಿಕೊಂಡರು. 

ಈ ಮೂಲಕ ಸತತ 4 ಎಸೆತಗಳಲ್ಲಿ ಮೂರು ವಿಕೆಟ್ ಪಡೆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆ ವಿದರ್ಭ ಬೌಲರ್ ಪಾಲಾಯಿತು. ಈ ಹಿಂದೆ 1980 ರ ನ್ಯೂಜಿಲ್ಯಾಂಡ್ ವಿರುದ್ದದ ಸರಣಿಯಲ್ಲಿ ರವಿ ಶಾಸ್ತ್ರೀ  ಈ ಸಾಧನೆ ಮಾಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next