ಬೆಂಗಳೂರು : ಸಕಲೇಶಪುರ ಹಾಗೂ ಆಲೂರು ತಾಲೂಕಿನಲ್ಲಿ ಆನೇಗಳ ಹಾವಳಿ ಮಿತಿ ಮಿರಿದ್ದು, ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹಾಗೂ ಆ ಭಾಗದ ಜನರಿಗೆ ದೊಡ್ಡ ಸಮಸ್ಯೆ ಆಗಿರುವ ಹಿನ್ನೆಲೆ, ಹಾಸನ ಭಾಗದ ಅಧಿಕಾರಿಗಳ ಜೊತೆ ಈಗಾಗಲೇ ಸಭೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದೆನೆ ಎಂದು ಸಚಿವ ಉಮೇಶ್ ಕತ್ತಿಯವರು ತಿಳಿಸಿದರು.
ಆನೆ ಹಾವಳಿ ಇರುವ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವಾಂಶ ಅರಿತು, ಯಾವುದೇ ರೀತಿಯ ಸಂಘರ್ಷ ಆಗದೆ ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಯನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಖಡಕ್ ಆಗಿ ಸೂಚನೆ ನೀಡಿದ್ದೆನೆ.
ಒಂದು ವಾರದಲ್ಲಿ ಆನೆಗಳ ಹಾವಳಿ ಕಡಿಮೆ ಆಗದೆ ಇದ್ರೆ, ಅಧಿಕಾರಿಗಳ ಜೊತೆ ಇನ್ನೊಂದು ಸುತ್ತಿನ ಸಭೆ ಕರೆದು, ಮಾಹಿತಿ ಪಡೆಯುತ್ತೇನೆ. ಆನೆಗಳ ಹಾವಳಿ ಮಿತಿ ಮಿರಿದ್ರೆ ನಾನೇ ಸ್ಥಳಕ್ಕೆ ಭೇಟಿ ಕೊಟ್ಟು ಸೂಕ್ತ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ನಿರ್ಣಿಯಿಸುತ್ತೇನೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದರು.
ಪದೆ ಪದೆ ಆಗುತ್ತಿರುವ ಆನೆಗಳ ಹಾವಳಿ ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಆಗಿದೆ, ಆನೆಗಳ ಹಾವಳಿಯಿಂದ ಮುಕ್ತ ಮಾಡುವ ಕುರಿತು ಸ್ಥಳಿಯರೊಡನೆ ಚರ್ಚಿಸಲಾಗುವುದು ಎಂದು ಅರಣ್ಯ ಸಚಿವ ಉಮೇಶ್ ಕತ್ತಿಯವರು ತಿಳಿಸಿದರು.
ಇದನ್ನೂ ಓದಿ :ಜೀವಕ್ಕೆ ಕುತ್ತು ತಂದ ಅನೈತಿಕ ಸಂಬಂಧ : ಕೊರಟಗೆರೆಯಲ್ಲಿ ವಿವಾಹಿತ ಪ್ರೇಮಿಗಳಿಬ್ಬರ ಆತ್ಮಹತ್ಯೆ