Advertisement

New York ವರ್ಲ್ಡ್ ಸೈನ್ಸ್‌ ಸ್ಕಾಲರ್‌ ಫೆಸ್ಟಿವಲ್‌ಗೆ ಉಳ್ಳಾಲದ ಸಿಂಧೂರ ಆಯ್ಕೆ

12:33 AM Apr 03, 2024 | Team Udayavani |

ಉಳ್ಳಾಲ: ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮೇ 29ರಿಂದ ಜೂ. 2ರ ವರೆಗೆ ಜರಗುವ “ವರ್ಲ್ಡ್ ಸೈನ್ಸ್‌ ಸ್ಕಾಲರ್‌’ ಫೆಸ್ಟಿವಲ್‌ಗೆ ಉಳ್ಳಾಲ ಮೊಗವೀರ ಪಟ್ಣದ ಸಿಂಧೂರ (15) ಆಯ್ಕೆಯಾಗಿದ್ದಾರೆ.

Advertisement

ಇಪ್ಪತ್ತೆರಡು ದೇಶಗಳ 52 ಯುವ ವಿಜ್ಞಾನಿಗಳು ಉತ್ಸವದಲ್ಲಿ ಪಾಲ್ಗೊಳ್ಳ ಲಿದ್ದು, ಸಿಂಧೂರ ಭಾರತವನ್ನು ಪ್ರತಿನಿಧಿ ಸುವರು.

ಅಂತಾರಾಷ್ಟ್ರೀಯ ಸ್ಪರ್ಧೆಯುಲ್ಲಿ 19 ದೇಶಗಳ 33 ಯುವ ವಿಜ್ಞಾನಿಗಳ ಆವಿಷ್ಕಾರಕ್ಕೆ ಮಾನ್ಯತೆ ದೊರೆತಿದೆ. ಇದರಲ್ಲಿ ಸಿಂಧೂರರ “ಆರ್ಟಿಫಿಶಿಯಲ್‌ ಇಂಟೆ ಲಿಜೆಂಟ್ಸ್‌ ಮಾಡೆಲ್‌ ಸಿ ಬಿ ಫ್ಲೋ’ ಆಯ್ಕೆಯಾಗಿದೆ. ಇದು ಮನುಷ್ಯನ ಮೆದುಳಿನ ಪ್ರಾಯವನ್ನು ಲೆಕ್ಕ ಹಾಕಿ ಡಿಮೆನ್ಸಿಯಾ, ಆಮರ್‌ ಮುಂತಾದ ನ್ಯೂರೋ ಡಿ ಜನರೇಟಿವ್‌ ಕಾಯಿಲೆಗಳು ಬರುವ ಸಾಧ್ಯತೆಯನ್ನು ಅಂದಾಜಿಸಲಿದೆ.

ಎಸೆಸೆಲ್ಸಿ ವಿದ್ಯಾರ್ಥಿನಿ ಸಿಂಧೂರ, ವಿಜ್ಞಾನಿಯಾಗಿ ನನ್ನೂರು ಉಳ್ಳಾಲವನ್ನು ಮರೆಯದೇ ತಾಂತ್ರಿಕತೆ ಹಾಗೂ ವೈಜ್ಞಾನಿಕತೆಯ ಸವಾಲುಗಳಿಗೆ ಉತ್ತರ ಹುಡುಕುವೆ ಎನ್ನುತ್ತಾರೆ. “ನ್ಯೂಚರ್‌ ಪೋರ್ಟ್‌ ಯೂತ್‌-2023 ಪ್ರೇಗ್‌ ಜೆಕ್‌ ರಿಪಬ್ಲಿಕ್‌’ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, “ಯುರೋಪಿಯನ್‌ ಮೆಥಮ್ಯಾಟಿಕಲ್‌ ಸೊಸೈಟಿ’ ಹಾಗೂ “ಕ್ಯಾಂಪ್‌ಲ್ಲೊ ಅವರಮೆಥಮ್ಯಾಟಿಕ್ಸ್‌ ಚಾಂಪಿಯನ್‌ ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next