Advertisement

Ullal ಅಕ್ರಮ ಮರಳುಗಾರಿಕೆ 2 ದೋಣಿಗಳು ವಶಕ್ಕೆ

12:37 AM Dec 14, 2023 | Team Udayavani |

ಉಳ್ಳಾಲ: ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಹರೇಕಳದ ಕಡವಿನ ನೇತ್ರಾವತಿ ನದಿ ತಟಕ್ಕೆ ಕೊಣಾಜೆ ಠಾಣೆ ಪ್ರಭಾರ ಠಾಣಾಧಿಕಾರಿ ಬಾಲಕೃಷ್ಣ ಎಚ್‌.ಎನ್‌. ನೇತೃತ್ವದ ಪೊಲೀಸ್‌ ತಂಡ ಹಾಗೂ ಗಣಿ ಹಾಗೂ ಭೂವಿಜ್ಞಾನ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಎರಡು ನಾಡದೋಣಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ನಾಡ ದೋಣಿಗಳಲ್ಲಿ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಹಾಗೂ ಭೂಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.

ಮರಳು ಮಾಫಿಯಾದವರು ದೋಣಿಗಳ ಮೂಲಕ ನದಿಯಿಂದ ಮರಳು ತೆಗೆದು ಸ್ಥಳೀಯ ಮನೆಗಳಿಗೆ ಪೂರೈಸುತ್ತಿದ್ದರು. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next