Advertisement
ಆಂಧ್ರಪ್ರದೇಶ ಮೂಲದ “ಧರ್ತಿ’ ಕಂಪೆನಿಗೆ ಸೇರಿದ ಬಾರ್ಜ್ ಜೂ. 3ರಂದು ಮೊಗವೀರಪಟ್ಣದ ಸಮುದ್ರ ದಡದಿಂದ ಸುಮಾರು 700 ಮೀ. ದೂರದಲ್ಲಿ ಶಾಶ್ವತ ಕಾಮಗಾರಿಯ ರೀಫ್ ಕಾಮಗಾರಿಗೆ ಸಿಲುಕಿ ಮುಳುಗತೊಡಗಿತ್ತು. ಅದೇ ದಿನ ಸಂಜೆ ವೇಳೆಗೆ ಬಾರ್ಜ್‌ನ ಒಂದು ಕಂಪಾರ್ಟ್‌ಮೆಂಟ್ ಹೋಳಾಗಿ ನೀರು ಒಳ ಬರಲು ಪ್ರಾರಂಭವಾಗಿತ್ತು. ಬಳಿಕ ನಿಧಾನಕ್ಕೆ ಬಾರ್ಜ್ ಸಮುದ್ರದ ಆಳಕ್ಕೆ ಇಳಿಯುತ್ತಿದೆ.
ಸೋಮವಾರ ಸಂಜೆಯಿಂದ ಬಾರ್ಜ್ ನೊಳ ಗಿದ್ದ ಸಾಮಗ್ರಿಗಳು ಸಮುದ್ರ ತೀರಕ್ಕೆ ಬರ ಲಾರಂಭಿಸಿವೆ. ದೊಡ್ಡ ದೊಡ್ಡ ಟ್ಯಾಂಕ್‌ಗಳು, ಲೈಫ್ ಜಾಕೆಟ್, ಪಾತ್ರೆಗಳು ಮೊಗವೀರಪಟ್ಣ, ಕೋಟೆಪುರ, ಕಿಲೇರಿಯಾನಗರ, ಬೆಂಗ್ರೆ ಮತ್ತು ಕೇರಳದ ಕಡೆಗೆ ಸಮುದ್ರದಲ್ಲಿ ತೇಲಿ ಹೋಗುತ್ತಿವೆ. ಮೊಗವೀರಪಟ್ಣ ಬಳಿ ಭಾರೀ ಗಾತ್ರದ ನೀರಿನ ಟ್ಯಾಂಕ್ ಸಹಿತ ದೊಡ್ಡ ಕಬ್ಬಿಣದ ಬಾಕ್ಸ್ ದಡಕ್ಕೆ ಬಂದಿದೆ. ಬಾರ್ಜ್‌ನಲ್ಲಿದ್ದ ಸಣ್ಣ ಲೈಫ್ ಬೋಟ್ ಮೊಗವೀರಪಟ್ಣ ಬಳಿ ಕಲ್ಲಿಗೆ ಅಪ್ಪಳಿಸಿ ಛಿದ್ರಗೊಂಡಿದೆ.
Related Articles
ಮೊಗವೀರಪಟ್ಣ ಸೇರಿದಂತೆ ಉಳ್ಳಾಲದ ಸಮುದ್ರ ತಟದಲ್ಲಿ ಮೀನಿನ ಸಂತತಿ ಜಾಸ್ತಿ ಇರು ತ್ತದೆ. ಜೂನ್ ತಿಂಗಳು ಮೀನು ಮರಿ ಹಾಕುವ ಅವಧಿಯಾಗಿರುವುದರಿಂದ ಬಾರ್ಜ್ ನಲ್ಲಿರುವ ತೈಲ ಸೋರಿಕೆಯಿಂದ ಮೀನು ವಲಸೆ ಹೋಗುವ ಸಾಧ್ಯತೆಯಿದ್ದು , ಬಾರ್ಜ್ ಶಾಶ್ವತವಾಗಿ ಸಮುದ್ರ ದಲ್ಲಿ ಮುಳುಗಿದರೆ 3 ತಿಂಗಳ ಬಳಿಕ ನಾಡದೋಣಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ತೊಂದರೆಯಾಗಲಿದೆ ಎಂದು ಸ್ಥಳೀಯ ಮೀನುಗಾರ ಶರತ್ ಮೊಗವೀರಪಟ್ಣ ಆತಂಕ ವ್ಯಕ್ತಪಡಿಸಿದ್ದಾರೆ.
Advertisement
ನಾಳೆ ತಜ್ಞರ ತಂಡ – ಜಿಲ್ಲಾಧಿಕಾರಿ ಭೇಟಿಬಾರ್ಜ್ನ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ವನ್ನು ಸಂಬಂಧಿತ ಸಂಸ್ಥೆಯಾಗಲಿ, ಜಿಲ್ಲಾಡ ಳಿತ ವಾಗಲಿ ಕೈಗೊಂಡಿಲ್ಲ. ತೆರವಿಗೆ ಸಂಬಂಧಿಸಿ ದಂತೆ ಮುಂಬಯಿಯ ತಂಡವೊಂದು 2 ದಿನಗಳಿಂದ ಸುರತ್ಕಲ್‌ನಲ್ಲಿ ಬೀಡು ಬಿಟ್ಟಿದೆ. ಸಂಸ್ಥೆಯ ಮುಖ್ಯಸ್ಥರೊಂದಿಗೆ ಬಂದರು ಇಲಾಖೆ ಯೊಂದಿಗೆ ಚರ್ಚೆ ನಡೆಸುತ್ತಿದ್ದು, ಮಂಗಳವಾರ ರಾತ್ರಿಯೊಳಗೆ ಸ್ಪಷ್ಟ ನಿರ್ಧಾರ ಕೈಗೊಂಡ ಬಳಿಕ ಬುಧವಾರ ಡಿಸಿ ಭೇಟಿ ಮಾಡಿ ಬಳಿಕ ಬಾರ್ಜ್ ತೆರವಿನ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ತಡೆಗೋಡೆಯೇ ಆಧಾರ !
ಬಾರ್ಜ್‌ನ ಎಡಭಾಗದ ಹಿಂಬದಿ ಇನ್ನೂ ತಡೆಗೋಡೆ(ರೀಫ್)ಯ ಬಂಡೆಗಳಿಗೆ ಸಿಲುಕಿ ಕೊಂಡಿದ್ದು, ದಕ್ಷಿಣದಿಂದ ಅಥವಾ ಪಶ್ಚಿಮದಿಂದ ಬಲವಾದ ಗಾಳಿ ಬೀಸಿದರೆ ಬಾರ್ಜ್ ತಡೆಗೋಡೆ ಕಾಮಗಾರಿಯಿಂದ ಬೇರ್ಪಟ್ಟು ಮುಳುಗಲಿದೆ. ಕಳೆದ ನಾಲ್ಕು ದಿನಗಳಿಂದ ಬಾರ್ಜ್ ರೀಫ್‌ನ ಬಂಡೆಗಳಿಗೆ ಸಿಲುಕಿಕೊಂಡಿದ್ದು ಈವರೆಗೂ ಬೇರ್ಪಟ್ಟಿಲ್ಲ. ಪಶ್ಚಿಮದಿಂದ ಬರುವ ಅಲೆಗಳನ್ನು ರೀಫ್‌ನ ಬಂಡೆಗಳು ತಡೆಯುವುದರಿಂದ ಬಾರ್ಜ್‌ಗೆ ದೊಡ್ಡ ಅಲೆಗಳು ಅಪ್ಪಳಿಸುತ್ತಿಲ್ಲ ಎಂದು ಸ್ಥಳೀಯ ಮೀನುಗಾರರೋರ್ವರು ತಿಳಿಸಿದ್ದಾರೆ. ಬೆಳದಿಂಗಳ ಸಂದರ್ಭದಲ್ಲಿ ಸಮುದ್ರ ಹೆಚ್ಚು ರೌದ್ರಾವತಾರ ತೋರುವುದರಿಂದ ಈ ಸಂದರ್ಭದಲ್ಲಿ ರೀಫ್‌ನಿಂದ ಬೇರ್ಪಡೆಯಾಗುವ ಸಂಭವವಿದೆ ಎಂದು ಅವರು ಹೇಳಿದ್ದಾರೆ.