Advertisement
ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಞಿಮೋನು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರ ಪರವಾಗಿ ಉಳ್ಳಾಲ ನಗರಸಭಾ ಪೌರಾಯುಕ್ತೆ ವಾಣಿ ವಿ. ಆಳ್ವ ಬಜೆಟ್ ಮಂಡಿಸಿದರು.
ಲ.ರೂ., ಉದ್ದಿಮೆ ಪರವಾನಗೆಯಿಂದ 21 ಲಕ್ಷ ರೂ., ಕಟ್ಟಡ ಪರವಾನಗೆಯಿಂದ 60.00ಲ.ರೂ., ಘನತ್ಯಾಜ್ಯ ಶುಲ್ಕದಿಂದ 37.50 ಲಕ್ಷ ರೂ., ಜಾಹೀರಾತು ತೆರಿಗೆಯಿಂದ 6.50 ಲಕ್ಷ ರೂ. ಉಪಕರಣಗಳ ಸಂಗ್ರಹಣ ಶುಲ್ಕ ಮತ್ತು ದಂಡ ವಸೂಲಾತಿಯಿಂದ 33.81ಲಕ್ಷ ರೂ. ನಳ ಜೋಡಣಾ ಶುಲ್ಕದಿಂದ, 7 ಲಕ್ಷ ರೂ. ಖಾತೆ ಬದಲಾವಣೆಯಿಂದ
6 ಲಕ್ಷ ರೂ. ಸೇರಿ ನಗರಸಭೆಯ ಆದಾಯದಿಂದ 516.72 ಲಕ್ಷ ರೂ. ಆದಾಯ ನಿರೀಕ್ಷಿಸಿದೆ. 1.75 ಕೋಟಿ ರೂ. ಎಸ್‌ಎಫ್‌ಸಿ ಮುಕ್ತನಿಧಿ, ವಿಶೇಷ ಅನುದಾನ- 5 ಕೋಟಿ ರೂ., ವೇತನಾನುದಾನ-85 ಲಕ್ಷ
ರೂ., ಬೀದಿ ದೀಪ, ನೀರು ಸರಬರಾಜು ಬಿಲ್ ಪಾವತಿಗೆ-1.85 ಕೋಟಿ ರೂ., ಘನತ್ಯಾಜ್ಯ ವಿಲೇವಾರಿಗೆ ವಿಶೇಷ ಅನುದಾನ- 25 ಲಕ್ಷ ರೂ., ಸ್ವಚ್ಛ ಭಾರತ್ ಮಿಷನ್‌ನಡಿ-30 ಲಕ್ಷ ರೂ., ನೀರು ಸಮಸ್ಯೆ ಪರಿಹಾರಕ್ಕೆ-35 ಲಕ್ಷ ರೂ., ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ-5 ಲಕ್ಷ ರೂ., ಶಾಸಕರ ಪ್ರದೇಶಾಭಿವೃದ್ಧಿ- 7.50 ಲ.ರೂ. ಹಾಗೂ 14ನೇ ಹಣಕಾಸು ಅಯೋಗದ ಸಾಮಾನ್ಯ ಮೂಲ ಅನುದಾನ-1.78 ಕೋ.ರೂ. ಸರಕಾರದಿಂದ ನಿರೀಕ್ಷಿಸಲಾಗಿದೆ.
Related Articles
ಸಾರ್ವಜನಿಕರಿಗೆ ಉತ್ತಮ ನೀರು ಸರಬರಾಜು ಮಾಡುವ ಉದ್ದೇಶದಿಂದ ಕುಡಿಯುವ ನೀರಿನ ಕಾಮಗಾರಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.
Advertisement
ನಗರಸಭಾ ವ್ಯಾಪ್ತಿಯ ಚೆಂಬುಗುಡ್ಡೆ, ಮಾಸ್ತಿಕಟ್ಟೆ ಸೋಮನಾಥ ನಗರ ಬಡಾವಣೆ ಮತ್ತು ಉಳಿಯದಲ್ಲಿ ಓವರ್ಹೆಡ್ ಟ್ಯಾಂಕ್ ನಿರ್ಮಾಣ, ವಾಸುಕಿ ನಗರ, ಉಳ್ಳಾಲಬೈಲು ಗಂಡಿ, ದೊಡ್ಡಿಯ ಹತ್ತಿರ ತೆರೆದ ಬಾವಿ ನಿರ್ಮಾಣಕ್ಕೆ ಹಾಗೂ ನಗರ ವ್ಯಾಪ್ತಿಯಲ್ಲಿರುವ ಎಲ್ಲ ತೆರೆದ ಬಾವಿಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಚೆಂಬುಗುಡ್ಡೆ ಡಾ| ಬಿ.ಆರ್. ಅಂಬೇಡ್ಕರ್ ಕಾಲನಿ ಹತ್ತಿರ, ಪಾಂಡೆಲು ಪಕ್ಕ, ಹೈದರಾಲಿ ನಗರ ಬಾಬು ಕಂಪೌಂಡು,
ಸೇವಂತಿಗುಡ್ಡೆ, ಸುಂದರಿಬಾಗ್, ಉಳ್ಳಾಲಬೈಲು, ಭಟ್ನಗರ ಒಳಪೇಟೆ ಬಳಿ ಪೈಪ್‌ಲೈನ್ ವಿಸ್ತರಣೆ ಕಾಮಗಾರಿಗಳಿಗೆ
ಮತ್ತು ನೀರಿನ ಒರತೆ ಕಡಿಮೆಯಾಗಿರುವ ಕೊಳವೆಬಾವಿಗಳಿಗೆ ಜಲ ಮರುಪೂರಣ ಮಾಡುವ ಪ್ರಯುಕ್ತ ನಗರೋತ್ಥಾನ
ಹಂತ-2, 14ನೇ ಹಣಕಾಸು ಆಯೋಗ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಬರುವ ಅನುದಾನದಲ್ಲಿ
ಹಣವನ್ನು ಮೀಸಲಿರಿಸಲಾಗಿದೆ. ಘನತ್ಯಾಜ್ಯ ವಿಲೇವಾರಿ
ಉಳ್ಳಾಲದ ಘನತ್ಯಾಜ್ಯ ವಸ್ತು ವಿಲೇವಾರಿ ವಿಸ್ಕೃತ ವರದಿಯಲ್ಲಿ ಉಲ್ಲೇಖೀಸಲಾದ ವೀಲ್ಡ್ ಬಿನ್ಸ್ ಖರೀದಿ, ಒಣ ಕಸ ಸಂಗ್ರಹಣೆ ಕೇಂದ್ರ, ಬೈಲಿಂಗ್ ಮಿಷನ್ ಖರೀದಿ, ಮೂಲದಲ್ಲಿಯೇ ಕಸ ಸಂಗ್ರಹಣೆ ಮಾಡಲು ಬಕೆಟ್ ಖರೀದಿ, ಎಲ್ಲ ಸರಕಾರಿ ಹಾಸ್ಟೆಲ್ ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ಸ್ಯಾನಿಟರಿ, ನ್ಯಾಪ್ ಕಿನ್ ಡಿಸ್‌ಪೋಸಲ್ ಯುನಿಟನ್ನು ಹಾಕಲು ಹಾಗೂ 2018ರ ಗಾಂಧಿ ಜಯಂತಿ ಪ್ರಯುಕ್ತ ನಗರಸಭೆಯ 31 ವಾರ್ಡುಗಳಲ್ಲಿ ಸ್ವತ್ಛ ವಾರ್ಡು ಗುರುತಿಸಿ ವಾರ್ಡಿಗೆ ಪ್ರಥಮ ಬಹುಮಾನವಾಗಿ 1ಲಕ್ಷ ರೂ., ದ್ವಿತೀಯ ಬಹುಮಾನವಾಗಿ 75 ಸಾವಿರ ರೂ. ಮತ್ತು ತೃತೀಯ ಬಹುಮಾನವಾಗಿ 50 ಸಾವಿರ ರೂ. ಗಳ ಪ್ರೋತ್ಸಾಹಧನ ನೀಡಲು ಸೇರಿದಂತೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಒಂದು ಸಂಘ ಸಂಸ್ಥೆ ಶಾಲಾ ಕಾಲೇಜು ಮತ್ತು ಒಬ್ಬ ನಾಗರಿಕನನ್ನು ಗುರುತಿಸಿ ಪ್ರೋತ್ಸಾಹಧನದೊಂದಿಗೆ ಸಮ್ಮಾನಿಸಲು ಉದ್ದೇಶಿಸಿದ್ದು ಎರಡೂವರೆ ಲಕ್ಷ ರೂ. ಮೀಸಲಿರಿಸಲಾಗಿದೆ. ಸ್ವಚ್ಛತೆ ಕಾರ್ಯದಲ್ಲಿ ಎಂಎಸ್ ಡಬ್ಲ್ಯೂ ವಿದ್ಯಾರ್ಥಿಗಳು ಏಳು ವಾರ್ಡ್ ಗಳಲ್ಲಿ ಕಾರ್ಯಾಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ 27 ವಾರ್ಡ್‌ಗಳಲ್ಲೂ ಕಾರ್ಯಾಚರಿಸಲಿದ್ದಾರೆ. ಪ್ರತೀ ಮನೆಗಳಲ್ಲೂ ಹಸಿ, ಒಣಕಸ ವಿಂಗಡಿಸುವ ನಿಟ್ಟಿನಲ್ಲಿ ತಲಾ ಎರಡು ಬಕೆಟ್‌ನಂತೆ 10,804 ಮನೆಗಳಿಗೆ ವಿತರಿಸುವ ಗುರಿ ಹೊಂದಲಾಗಿದ್ದು, ಪ್ರತೀ ಬಕೆಟ್‌ಗೆ 150 ರೂಪಾಯಿಯಂತೆ 3,24,100 ರೂ. ಮೀಸಲಿರಿಸಲಾಗಿದೆ. ಇದಕ್ಕಾಗಿ ಪ್ರತೀ ವಾರ್ಡ್‌ನಲ್ಲೂ 15 ಮಂದಿಯ ಸಮಿತಿ ರಚಿಸುವಂತೆ ವಾಣಿ ಆಳ್ವ ಸೂಚಿಸಿದರು. ಕೌನ್ಸೆಲರ್‌ಗಳು ಬಜೆಟ್ ಮೇಲೆ ಚರ್ಚೆ ಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಚಿತ್ರಕಲಾ ಹಾಗೂ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು ಉಪಸ್ಥಿತರಿದ್ದರು. ಸೌಂದರ್ಯಕ್ಕೆ ವಿಶೇಷ ಗಮನ
ನಗರಸಭಾ ವ್ಯಾಪ್ತಿ ಸೌಂದರ್ಯಗೊಳಿಸಲು ವಿಶೇಷ ಗಮನ ನೀಡಲಾಗಿದೆ. ಆದಾಯ ಹೆಚ್ಚಳ ನಿಟ್ಟಿನಲ್ಲಿ 15 ಕಡೆ ಹೋರ್ಡಿಂಗ್ಸ್ ಅಳವಡಿಕೆಗೆ ಯೋಚಿಸಲಾಗಿದ್ದು, ಇದರಿಂದ 21.60 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಸೌಂದರ್ಯದ ನಿಟ್ಟಿನಲ್ಲಿ ಮೂರು ಕಡೆ ಹೆ„ಮಾಸ್ಟ್ ದೀಪ ಅಳವಡಿಕೆ, ದಾರಿದೀಪ ವಿಸ್ತರಣೆ, ಎಲ್‌ಇಡಿ, ಸೋಡಿಯಂ ಟ್ಯೂಬ್‌ಲೈಟ್ ಖರೀದಿಗಾಗಿ 75 ಲಕ್ಷ ರೂ. ಮೀಡಲಿರಿಸಲಾಗಿದೆ. ಇಂದಿರಾ ಕ್ಯಾಂಟೀನ್‌ಗೆ ತಗಲುವ ಖರ್ಚು ಎಸ್‌ಎಫ್‌ಸಿ ಮುಕ್ತನಿಧಿ ಹಾಗೂ ನಗರಸಭಾ ನಿಧಿಯಿಂದ ಭರಿಸಲಾಗುತ್ತಿದೆ. ಮೂರು ಕಡೆಗಳಲ್ಲಿ ಉದ್ಯಾನವನ ಅಭಿವೃದ್ಧಿ ಹಾಗೂ ಸದಸ್ಯರ ಅನುದಾನ 8ರಿಂದ 10 ಲಕ್ಷ ರೂ. ಗಳಿಗೆ ಏರಿಸಲಾಗಿದೆ.