Advertisement
ಮೇಕೆ ಮೇವು ಹುಡುಕುತ್ತ ದೂರದ ಹುಲ್ಲುಗಾವಲಿಗೆ ಹೋಯಿತು. ಅಲ್ಲಿ ಒಂದು ತೋಳ ಅದನ್ನು ಕಂಡು ಬಾಯಲ್ಲಿ ನೀರೂರಿಸಿತು. “ಮೇಕೆಯಕ್ಕಾ ಹೇಗಿದ್ದೀಯೇ?’ ಎಂದು ಕೇಳಿತು. “ಹೇಗಪ್ಪ ಇರುವುದು, ಬರಗಾಲದಿಂದಾಗಿ ಹೊಟ್ಟೆಗೆ ಊಟ ಇಲ್ಲ. ನನ್ನ ಮರಿಗಳಿಗೆ ಹಾಲು ಕೊಡಬೇಕಲ್ಲವೆ, ಅದಕ್ಕಾಗಿ ಮೇವು ಹುಡುಕಿಕೊಂಡು ಹೊರಟಿದ್ದೇನೆ’ ಎಂದು ಹೇಳಿತು ಮೇಕೆ. “ಅಯ್ಯೋ ಪಾಪ, ಮರಿಗಳು ಉಪವಾಸವಿದ್ದಾವೆಯೆ? ಎಲ್ಲಮ್ಮ ನಿನ್ನ ಮನೆ? ನಾನೇ ಹೋಗಿ ಹಸಿದ ಮರಿಗಳಿಗೆ ತಾಜಾ ಹಾಲು ಕೊಟ್ಟು ಬರುತ್ತೇನೆ. ನನ್ನ ಒಡೆತನದಲ್ಲಿ ಯಾರೂ ಉಪವಾಸವಿರುವುದು ನನಗೆ ಇಷ್ಟವಿಲ್ಲ. ನೀನು ಒಳ್ಳೆಯ ಮೇವು ತಿಂದು ನಿಧಾನವಾಗಿ ಮನೆಗೆ ಹೋಗುವೆಯಂತೆ. ನಿನಗೆ ಮಕ್ಕಳ ಕುರಿತು ಒಂದಿಷ್ಟೂ ಕಳವಳ ಬೇಡ’ ಎಂದು ಸಿಹಿಸಿಹಿಯಾಗಿ ತೋಳ ಹೇಳಿತು.
Related Articles
Advertisement
ಇದೊಳ್ಳೆಯ ಪೇಚಾಟವಾಯಿತಲ್ಲ ಎಂದು ತೋಳ ಚಿಂತೆ ಮಾಡಿತು. ಸನಿಹದಲ್ಲೇ ಜಾಣ ನರಿಯ ಮನೆ ಇತ್ತು. ಇಕ್ಕಟ್ಟಿನ ಸಮಯದಲ್ಲಿ ಅದು ಒಳ್ಳೆಯ ಸಲಹೆಗಳನ್ನು ಕೊಡುತ್ತದೆ ಎಂಬುದು ಅದಕ್ಕೆ ಗೊತ್ತಿತ್ತು. ನರಿಯ ಮನೆಗೆ ಹೋಗಿ ಕದ ತಟ್ಟಿತು. ಒಳಗಿದ್ದ ನರಿ, “ಯಾರದು ಕದ ಬಡಿಯುತ್ತಿರುವುದು? ಉಚಿತ ಸಲಹೆಗೆ ಬಂದವರಾದರೆ ಹಾಗೆಯೇ ಮುಂದೆ ಹೋಗಿ. ಒಂದು ಹೆಬ್ಟಾತನ್ನೋ ಹುಂಜವನ್ನೋ ನನ್ನ ಸಲಹೆಯ ಪ್ರತಿಫಲವೆಂದು ತಂದರೆ ಮಾತ್ರ ಮನೆಯೊಳಗೆ ಅಡಿಯಿಡಬಹುದು’ ಎಂದು ಸ್ಪ$ಷ್ಟವಾಗಿ ಹೇಳಿತು. ತೋಳ ಒಂದು ಕೆರೆಯ ಬಳಿಗೆ ಹೋಗಿ ಹೊಂಚು ಹಾಕಿತು. ಹೇಗೋ ಕಷ್ಟದಲ್ಲಿ ಒಂದು ಹೆಬ್ಟಾತನ್ನು ಹಿಡಿದುಕೊಂಡು ನರಿಯ ಮನೆಗೆ ತಲುಪಿತು. “ತಾತಯ್ಯ, ನಿನಗೆ ಇಷ್ಟವಾದ ಹೆಬ್ಟಾತನ್ನು ಹಿಡಿದು ತಂದಿದ್ದೇನೆ. ಬಾಗಿಲು ತೆರೆದು ನನ್ನನ್ನು ಒಳಗೆ ಕರೆಸಿಕೋ. ನನಗೆ ನಿನ್ನಿಂದ ಒಂದು ಸಲಹೆ ಬೇಕಾಗಿದೆ’ ಎಂದು ಕೂಗಿತು.
ನರಿ ಬಾಗಿಲು ತೆರೆಯಿತು. ಹೆಬ್ಟಾತನ್ನು ಕಂಡು ಭರ್ಜರಿ ಊಟ ಎಂದುಕೊಂಡಿತು. ನಿಧಾನವಾಗಿ ಅದನ್ನು ತಿಂದು ಮುಗಿಸಿ, “ಈಗ ಹೇಳು, ನಿನಗೆ ಯಾವ ಸಲಹೆ ಬೇಕು?’ ಎಂದು ವಿಚಾರಿಸಿತು. ತೋಳ ಮೇಕೆಯ ಮರಿಗಳ ವಿಷಯ ತಿಳಿಸಿ, “ನನಗೀಗ ಮೇಕೆಯಂತೆ ಮಾತನಾಡುವ ಶಕ್ತಿ ಬರಬೇಕು. ಹೊರಗಿನಿಂದ ನಾನು ಕರೆದರೆ ತಾಯಿ ಬಂದಿದ್ದಾಳೆಂದು ಭಾವಿಸಿ ಮರಿಗಳು ಬಾಗಿಲು ತೆರೆದರೆ ಸಾಕು. ಇದಕ್ಕೇನಾದರೂ ಉಪಾಯವಿದ್ದರೆ ಹೇಳು ತಾತಾ’ ಎಂದು ಕೋರಿತು ತೋಳ.
ಮೇಕೆಯ ಹಾಗೆ ಧ್ವನಿ ಬದಲಾಯಿಸುವ ದಾರಿ ಏನೆಂಬುದು ನರಿಗೆ ಗೊತ್ತಿರಲಿಲ್ಲ. ಆದರೆ ಹಾಗೆ ಹೇಳಿದರೆ ತೋಳಕ್ಕೆ ಹೆಬ್ಟಾತನ್ನು ಮರಳಿ ಕೊಡಬೇಕಾಗುತ್ತದೆ. ಇದನ್ನು ಹೇಗಾದರೂ ತೊಲಗಿಸಬೇಕೆಂದು ಒಂದು ಉಪಾಯ ಹುಡುಕಿತು. “ನನಗೂ ಒಮ್ಮೆ ಇಂತಹದೇ ಸಮಸ್ಯೆ ಎದುರಾಗಿತ್ತು. ಕೋಳಿಮರಿಗಳನ್ನು ಹಿಡಿಯಲು ಹೇಂಟೆಯ ಹಾಗೆ ಕೂಗಬೇಕಿತ್ತು. ಹಳ್ಳಿಯಲ್ಲಿರುವ ಕಮ್ಮಾರ ಯಾವ ರೀತಿಯ ಧ್ವನಿ ಬೇಕಿದ್ದರೂ ಬರುವ ಹಾಗೆ ಮಾಡುತ್ತಾನೆ. ಅವನೇ ಅದನ್ನು ಮಾಡಿಕೊಟ್ಟ. ಅಲ್ಲಿಗೆ ಹೋಗು’ ಎಂದಿತು ನರಿ.
ತೋಳ ಕಮ್ಮಾರನ ಬಳಿಗೆ ಹೋಗಿ ತನ್ನ ಧ್ವನಿ ಬದಲಾಯಿಸಲು ಹೇಳಿತು. ತಪ್ಪಿ$ದರೆ ಕೊಂದು ಬಿಡುವುದಾಗಿ ಎಚ್ಚರಿಸಿತು. ಅವನು ಒಂದು ಕಬ್ಬಿಣದ ಗುಳವನ್ನು ಕಾಯಿಸಿ ಕೆಂಪು ಮಾಡಿ ಗುದ್ದಲು ಸಿದ್ಧನಾಗಿದ್ದ. “ಸರಿ, ಕಣ್ಮುಚ್ಚು, ಬಾಯಿ ತೆರೆ. ನಿನಗೆ ಮೇಕೆಯ ಧ್ವನಿ ಬರುವಂತೆ ಮಾಡುತ್ತೇನೆ’ ಎಂದು ಹೇಳಿದ. ತೋಳ ಬಾಯೆ¤ರೆದು ಕುಳಿತ ಕೂಡಲೇ ಕಾದ ಗುಳವನ್ನು ಅದರ ಬಾಯೊಳಗೆ ತೂರಿಸಿಬಿಟ್ಟ. ಉರಿ ತಾಳಲಾಗದೆ ವಿಕಾರ ಧ್ವನಿಯಿಂದ ಕೂಗುತ್ತ ತೋಳವು ಊರು ಬಿಟ್ಟು ಓಡಿತು.
ಹೊಟ್ಟೆ ತುಂಬ ಮೇದು ಮೇಕೆ ಮನೆಗೆ ಮರಳಿತು. ಮಕ್ಕಳನ್ನು ಕೂಗಿ ಕರೆಯಿತು. ಮರಿಗಳು ಬಾಗಿಲು ತೆರೆದವು. ಒಳಗೆ ಬಂದ ತಾಯಿಯೊಂದಿಗೆ ತೋಳವು ಬಂದು ಕರೆದ ಕತೆಯನ್ನು ಹೇಳಿದವು. ಮೇಕೆ ತುಂಬ ಸಂತಸಪಟ್ಟಿತು. “ಮಕ್ಕಳೇ, ಈಗ ನಾನು ಬಂದು ಕರೆದ ಕೂಡಲೇ ನೀವು ಬಾಗಿಲು ತೆರೆದಿರಲ್ಲವೆ? ನಿಮಗೆ ನಾನೇ ಬಂದಿರುವುದು ಹೇಗೆ ಅರಿವಾಯಿತು?’ ಎಂದು ಕೇಳಿತು. ಮಕ್ಕಳು ಪ್ರೀತಿಯಿಂದ ಅಮ್ಮನನ್ನು ತಬ್ಬಿಕೊಂಡವು. “ಅಮ್ಮಾ, ನಿನ್ನ ದನಿಯಲ್ಲಿರುವ ಪ್ರೀತಿಯ ಸಿಹಿ, ನಿನ್ನ ಮೈಯಲ್ಲಿರುವ ಪರಿಮಳ ಇದೆಲ್ಲವೂ ನಮ್ಮ ಕರುಳಿಗೆ ಅರ್ಥವಾಗುತ್ತದೆ. ಇದನ್ನು ಅನುಕರಣೆ ಮಾಡಿ ಮೋಸ ಮಾಡಲು ಯಾರಿಗೂ ಸಾಧ್ಯವಿಲ್ಲ. ಅಮ್ಮ ಎಂದರೆ ಅಮ್ಮನೇ’ ಎಂದವು.
ಪ. ರಾಮಕೃಷ್ಣ ಶಾಸ್ತ್ರಿ