ಮಾಸ್ಕೋ : ರಷ್ಯಾ ಭಾರಿ ಸಂಖ್ಯೆಯ ಸೈನಿಕರೊಂದಿಗೆ ಉಕ್ರೇನ್ ಅನ್ನು ಸುತ್ತುವರೆದಿರುವ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಅಧ್ಯಕ್ಷ ಜೋ ಬಿಡೆನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಶೃಂಗಸಭೆಗೆ ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಕಚೇರಿ ಘೋಷಿಸಿದೆ.
ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಬಾರದು ಎಂಬ ಷರತ್ತಿನ ಅಡಿಯಲ್ಲಿ ಮಾತ್ರ ಈ ಶೃಂಗಸಭೆ ನಡೆಸಬಹುದು ಎಂದು ಹೇಳಲಾಗಿದೆ.
ಉಕ್ರೇನ್ ಮತ್ತು ಯುಎಸ್ ಗುಪ್ತಚರ ಅಧಿಕಾರಿಗಳ ಪ್ರಕಾರ ರಷ್ಯಾದ ಆಕ್ರಮಣ ಮತ್ತು ದಶಕಗಳಲ್ಲಿ ಯುರೋಪಿನಲ್ಲಿ ಅತಿದೊಡ್ಡ ಸಂಘರ್ಷದ ನಿರೀಕ್ಷೆಯನ್ನು ಹೆಚ್ಚಿಸಿರುವ ಬೆನ್ನಲ್ಲೇ ಅಮೆರಿಕಾ ಸೇರಿದಂತೆ ನ್ಯಾಟೋ ರಾಷ್ಟ್ರಗಳು ಉಕ್ರೇನ್ ಮೇಲೆ ದಾಳಿ ನಡೆಸದಂತೆ ಸೋವಿಯತ್ ರಾಷ್ಟ್ರದ ಮೇಲೆ ಭಾರೀ ಒತ್ತಡ ಹೇರುತ್ತಿವೆ.
ಇದನ್ನೂ ಓದಿ : ಕೂಡಲೇ ಉಕ್ರೇನ್ ತೊರೆಯಿರಿ; ಭಾರತೀಯ ವಿದ್ಯಾರ್ಥಿಗಳು, ನಾಗರಿಕರಿಗೆ ಕೇಂದ್ರ ಸಲಹೆ
ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿಗಳಿಂದ ಶೆಲ್ ದಾಳಿ ಹತ್ತು ಪಟ್ಟು ಹೆಚ್ಚಳವಾಗಿದೆ ಎಂದು ಉಕ್ರೇನಿಯನ್ ಮಿಲಿಟರಿ ಅಧಿಕಾರಿಗಳು ವರದಿ ಮಾಡಿದ್ದಾರೆ. ರಷ್ಯಾ ಪರ ಪ್ರತ್ಯೇಕತಾವಾದಿಗಳು ದಾಳಿಯು ಸನ್ನಿಹಿತವಾಗಿದೆ ಎಂದು ಹೇಳಿದ ನಂತರ ಉಕ್ರೇನ್‌ನ ವಿದೇಶಾಂಗ ಸಚಿವಾಲಯವು ಕೈವ್ ಪೂರ್ವ ಪ್ರದೇಶದಲ್ಲಿ ಆಕ್ರಮಣವನ್ನು ಯೋಜಿಸುತ್ತಿಲ್ಲ ಎಂದು ಹೇಳಿದೆ.
ಈಗಾಗಲೇ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪುತಿನ್ ಅವರನ್ನು ಭೇಟಿಯಾಗಲು ಮತ್ತು ಬಿಕ್ಕಟ್ಟಿನ ಪರಿಹಾರವನ್ನು ಪಡೆಯಲು ಕರೆದಿದ್ದಾರೆ.