Advertisement

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

08:43 AM Nov 27, 2024 | Team Udayavani |

ಬೈರುತ್: ಲೆಬನಾನ್‌ನಲ್ಲಿ ಕದನ ವಿರಾಮಕ್ಕೆ ಇಸ್ರೇಲ್ ಮತ್ತು ಹೆಜ್ಬುಲ್ಲಾ ಬುಧವಾರ(ನ27)ಸ್ಥಳೀಯ ಕಾಲಮಾನ 4 ಗಂಟೆಗೆ ಒಪ್ಪಿಗೆ ಸೂಚಿಸಿವೆ. ಇದೆ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಯಾವುದೇ ಉಲ್ಲಂಘನೆಯಾಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಕದನ ವಿರಾಮ ಉಲ್ಲಂಘಿಸಿದರೆ ಮತ್ತು ದಾಳಿಗೆ ಹೆಜ್ಬುಲ್ಲಾ ಮರುಸಜ್ಜುಗೊಳಿಸಲು ಪ್ರಯತ್ನಿಸಿದರೆ, ನಾವು ಬಲವಾದ ತಿರುಗೇಟು ನೀಡುತ್ತೇವೆ ಎಂದು ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.

ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಕದನ ವಿರಾಮವನ್ನು ಸ್ವಾಗತಿಸಿದ್ದಾರೆ. ಇಸ್ರೇಲ್ ಮತ್ತು ಲೆಬನಾನ್‌ನ ಹೆಜ್ಬುಲ್ಲಾ ನಡುವಿನ ಕದನ ವಿರಾಮದ ಒಪ್ಪಂದದ ಸಂಭಾವ್ಯ ಉಲ್ಲಂಘನೆಯನ್ನು ತಡೆಯಲು ಅಮೆರಿಕ ಲೆಬನಾನಿನ ಸೇನೆಯೊಂದಿಗೆ ಸಮನ್ವಯ ಸಾಧಿಸುತ್ತದೆ, ಆದರೆ ಈ ಪ್ರದೇಶದಲ್ಲಿ ಯುಎಸ್ ಪಡೆಗಳು ಇರುವುದಿಲ್ಲ ಎಂದು ಸುದ್ದಿ ವರದಿಯೊಂದು “ಹಿರಿಯ ಯುಎಸ್ ಅಧಿಕಾರಿ” ಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಬ್ರಿಟನ್ ಪ್ರಧಾನ ಮಂತ್ರಿ ಕಿಯರ್ ಸ್ಟಾರ್ಮರ್ ಪ್ರತಿಕ್ರಿಯಿಸಿ ‘ಕದನ ವಿರಾಮವು ನಾಗರಿಕರಿಗೆ ಸ್ವಲ್ಪ ಮಟ್ಟಿಗೆ ಪರಿಹಾರವನ್ನು ನೀಡುತ್ತದೆ’ ಎಂದು ಹೇಳಿದ್ದಾರೆ.

ಗಾಜಾದಲ್ಲಿ ಮುಂದುವರಿದ ದಾಳಿ
ಇನ್ನೊಂದೆಡೆ ಗಾಜಾದಲ್ಲಿ, ಇಸ್ರೇಲಿ ಪಡೆಗಳು ಪಟ್ಟುಬಿಡದೆ ದಾಳಿಯ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಝೈಟೂನ್ ನೆರೆಹೊರೆಯಲ್ಲಿ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುವ ಶಾಲೆಯ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ.

Advertisement

2023 ಅಕ್ಟೋಬರ್ ನಿಂದ ಇಸ್ರೇಲ್ ಲೆಬನಾನ್‌ನಲ್ಲಿ 1.2 ಮಿಲಿಯನ್ ಜನರ ಸ್ಥಳಾಂತರಕ್ಕೆ ಕಾರಣವಾಗಿದೆ.ದಾಳಿಯಲ್ಲಿ 3,768 ಜನರ ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಕಳೆದ ಎರಡು ತಿಂಗಳುಗಳಲ್ಲೇ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

ಹೆಜ್ಬುಲ್ಲಾ ಮತ್ತು ಅದರ ಲೆಬನಾನಿನ ಮಿತ್ರರಾಷ್ಟ್ರಗಳು ಯುದ್ಧದ ಅಂತ್ಯವನ್ನು ಯಾವ ಮಟ್ಟದಲ್ಲಿ ಬೆಂಬಲಿಸುತ್ತಾರೆ, ಕದನ ವಿರಾಮದ ನಿಯಮಗಳು ಎಷ್ಟರ ಮಟ್ಟಿಗೆ ಕಾರ್ಯಗತವಾಗುತ್ತದೆ ಕಾಡು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next