ಲಂಡನ್: ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಸರಳ ಸಮಾರಂಭವೊಂದರಲ್ಲಿ ತನ್ನ ಪ್ರೇಯಸಿ ಕ್ಯಾರಿ ಸೈಮಂಡ್ಸ್ ಜೊತೆಗೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಶನಿವಾರ ವೆಸ್ಟ್ ಮಿನಿಸ್ಟರ್ ಕೆಥೆಡ್ರಾಲ್ ನಲ್ಲಿ ಮದುವೆ ಸಮಾರಂಭ ನೆರವೇರಿದ್ದು, ಕೆಲವೇ ಕೆಲವು ಮಂದಿಗಷ್ಟೇ ಆಹ್ವಾನ ನೀಡಲಾಗಿತ್ತು. ಆದರೇ ಜಾನ್ಸನ್ ಅವರ ಡೌನಿಂಗ್ ಸ್ಟ್ರೀಟ್ ಕಚೇರಿಯ ವಕ್ತಾರರು ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಸಮಾರಂಭಕ್ಕೆ ಕೊನೆಯ ಕ್ಷಣದಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿದೆ ಎಂದು ವರದಿಯಾಗಿದ್ದು, ಜಾನ್ಸನ್ ಕಚೇರಿಯ ಸದಸ್ಯರಿಗೆ ಕೂಡ ವಿವಾಹದ ಯೋಜನೆಗಳ ಬಗ್ಗೆ ತಿಳಿದಿಲ್ಲ. ಕೋವಿಡ್ ಕಾರಣದಿಂದ ಇಂಗ್ಲೇಂಡ್ ನಲ್ಲಿ ಕೇವಲ 30 ಮಂದಿಗಷ್ಟೇ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶವಿದೆ.
ಇದನ್ನೂ ಓದಿ: ಸರಕಾರಕ್ಕೆ ಸಂಪರ್ಕಿತರ ಪತ್ತೆ, ನಿಗಾ ತಲೆನೋವು: ಗ್ರಾಮಗಳಲ್ಲಿ ಸೋಂಕು ಪೀಡಿತರ ಸಂಪರ್ಕ ಹೆಚ್ಚು
56 ವರ್ಷದ ಬೋರಿಸ್ ಜಾನ್ಸನ್ ಹಾಗೂ, 33ರ ಹರೆಯದ ಕ್ಯಾರಿ ಸೈಮಂಡ್ಸ್ 2019ರಿಂದಲೂ ಲಿವಿಂಗ್ ಟುಗೇದರ್ ನಲ್ಲಿದ್ದರು. ಕಳೆದ ವರ್ಷ ನಿಶ್ಚಿತಾರ್ಥವಾಗಿದ್ದು, ಏಪ್ರಿಲ್ ನಲ್ಲಿ ಈ ಜೋಡಿಗೆ ಗಂಡು ಮಗು ಜನಿಸಿತ್ತು. ಇದೀಗ ಮದುವೆಯಾಗಿದ್ದಾರೆ.