Advertisement

ಇಂಗ್ಲೆಂಡ್‌, ವೇಲ್ಸ್‌ನಲ್ಲಿ ಕ್ರೈಸ್ತರೇ ಅಲ್ಪಸಂಖ್ಯಾತರು!

08:27 PM Nov 29, 2022 | Team Udayavani |

ಲಂಡನ್‌: ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಕ್ರೈಸ್ತ ಸಮುದಾಯದವರು ಅಲ್ಪಸಂಖ್ಯಾತರಾಗಿದ್ದಾರೆ. ಜತೆಗೆ ಐರೋಪ್ಯ ಒಕ್ಕೂಟದ ಲೀಸ್ಟರ್‌ ಮತ್ತು ಬರ್ಮಿಂಗ್ಯಾಮ್‌ ನಗರಗಳಲ್ಲಿ ಅಲ್ಪಸಂಖ್ಯಾತರೇ ಈಗ ಬಹುಸಂಖ್ಯಾತರಾಗಿದ್ದಾರೆ. 2021ರಲ್ಲಿ ನಡೆದಿದ್ದ ಜನಗಣತಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ.

Advertisement

2011ರ ಜನಗಣತಿಗೆ ಹೋಲಿಸಿದರೆ 2021ರಲ್ಲಿ ಕ್ರೈಸ್ಥ ಧರ್ಮೀಯರ ಸಂಖ್ಯೆ 5.5 ಮಿಲಿಯನ್‌ ತಗ್ಗಿದೆ. ಅಂದರೆ ಜನಸಂಖ್ಯೆಯಲ್ಲಿ ಶೇ.17ರಷ್ಟು ಕುಸಿದಿದೆ. ಮುಸ್ಲಿಮರ ಜನಸಂಖ್ಯೆ ಶೇ.44ರಷ್ಟು ಏರಿಕೆಯಾಗಿದ್ದು, ಒಟ್ಟು 3.9 ಮಿಲಿಯನ್‌ ಮಂದಿ ಇದ್ದಾರೆ. ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಕಡಿಮೆ ಸಂಖ್ಯೆಯ ಜನರು ಕ್ರೈಸ್ಥ ಸಮುದಾಯದವರು.

2ನೇ ಸ್ಥಾನ:
ಮತ್ತೂಂದು ಪ್ರಧಾನ ಅಂಶವೆಂದರೆ ಯಾವುದೇ ಧರ್ಮಕ್ಕೆ ಸೇರಿದವರು ಅಲ್ಲ ಎಂದು ಹೇಳಿಕೊಂಡವರು ಶೇ.32 ಮಂದಿ ಇದ್ದಾರೆ. ಸಂಖ್ಯಾ ವ್ಯಾಪ್ತಿಯಲ್ಲಿ 22.2 ಮಿಲಿಯನ್‌ ಮಂದಿ ಇದ್ದಾರೆ. ಕ್ರೈಸ್ತ ಸಮುದಾಯದವರ ಬಳಿಕ 2ನೇ ಸ್ಥಾನದಲ್ಲಿ ಅವರು ಇದ್ದಾರೆ. ಶೇ.1.7 ಮಂದಿ ಹಿಂದೂಗಳಿದ್ದು 62,434 ಮಂದಿ ಇದ್ದಾರೆ. ಇನ್ನೊಂದೆಡೆ, ಸಿಖ್‌ ಸಮುದಾಯದವರು ಶೇ.0.9ರಷ್ಟು ಇದ್ದಾರೆ.

ಜನಗಣತಿ ಪ್ರಕಾರ ಜನಸಂಖ್ಯೆಯಲ್ಲಿ ಕ್ರಮವಾಗಿ ಕ್ರಿಶ್ಚಿಯನ್‌, ಯಾವುದೇ ಧರ್ಮವಿಲ್ಲ, ಮುಸ್ಲಿಮರು, ಧರ್ಮ ನಮೂದಿಸಿಲ್ಲ, ಹಿಂದೂ, ಸಿಖ್‌, ಇತರೆ ಧರ್ಮಗಳಿಗೆ ಸೇರಿದ ಜನರು ಬರುತ್ತಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ಎರಡನೇ ಮಹಾಯುದ್ಧದ ಬಳಿಕ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಈ ಪೈಕಿ ಗುಜರಾತ್‌ ಮೂಲದವರ ಸಂಖ್ಯೆ ಹೆಚ್ಚಾಗಿದೆ.

Advertisement

ಶೇ.17 ಇಳಿಕೆ- ಕ್ರೈಸ್ತ ಸಮುದಾಯ
ಶೇ.44 ಏರಿಕೆ- ಮುಸ್ಲಿಂ ಸಮುದಾಯ
ಶೇ.32- ಯಾವುದೇ ಧರ್ಮಕ್ಕೆ ಸೇರದವರು
ಶೇ.1.7- ಹಿಂದೂ ಸಮುದಾಯ
ಶೇ.0.9- ಸಿಖ್‌ ಸಮುದಾಯ

Advertisement

Udayavani is now on Telegram. Click here to join our channel and stay updated with the latest news.

Next