Advertisement

ಮಲೇಷ್ಯಾದಲ್ಲಿ ಉಜಿರೆ ತಂಡದ ನೃತ್ಯ-ಸಂಗೀತ ಸಂಭ್ರಮ

06:00 AM Jul 13, 2018 | Team Udayavani |

ಉಜಿರೆಯ ಶ್ರೀ ವಾಣಿ ನೃತ್ಯ ಕಲಾಕೇಂದ್ರದ ನೃತ್ಯ ಶಿಕ್ಷಕಿ ಶಾಂತಾ ಪಡ್ವೆಟ್ನಾಯರು ತಮ್ಮ ಶಿಷ್ಯ ವೃಂದದವರೊಂದಿಗೆ ಮಲೇಷ್ಯಾದ ಮಿಡ್‌ಲ್ಯಾಂಡ್‌ನ‌ ಶ್ರೀ ಮಹಾಮಾರಿಯಮ್ಮನ್‌ ದೇವಸ್ಥಾನದ ತಿರುವಿಲ್ಲಾ ಸಮಾರಂಭದ ಜಾತ್ರೋತ್ಸವದಲ್ಲಿ ನೃತ್ಯ-ಸಂಗೀತ ಕಾರ್ಯಕ್ರಮಗಳ ಮೂಲಕ ಭಾರತೀಯ ಸಾಂಸ್ಕೃತಿಕ ಕಲಾವೈಭವವನ್ನು ಅಲ್ಲಿಯ ಶ್ರೋತೃಗಳಿಗೆ ಉಣಬಡಿಸಿದರು.

Advertisement

ಉಜಿರೆಯ ಯುವ ಪ್ರತಿಭೆ ದೂರದರ್ಶನ ಖ್ಯಾತಿಯ ರಜತ ಮಯ್ಯ ಸುಮಧುರ ಕಂಠದಲ್ಲಿ ಭಕ್ತಿ-ಭಾವ-ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿ ಮನಸೂರೆಗೊಂಡರು. ಶ್ರೀ ವಾಣಿ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಈ ತಂಡದಲ್ಲಿ ವಿಂದ್ಯಾ ಲಕ್ಷ್ಮೀಶ್‌, ಸೌಜನ್ಯಾ ಪಡ್ವೆಟ್ನಾಯ, ಬೇಬಿ ತನ್ವಿ, ಶಿಷ್ಯೆಯರಾದ ಪ್ರತೀಕಾ ಗುರುರಾಜ್‌, ಸಮೃದ್ಧಿ ಜೈನ್‌, ಸುಮನಾ ಭಟ್‌, ದಿಶಾ ರಾಘ…, ದೀನಾ ಮಂಜು, ವಿಸ್ಮಿತಾ ಮತ್ತಿತರ ಬಾಲ ಕಲಾವಿದರು ಭಾಗವಹಿಸಿದ್ದರು. ದೇಗುಲದ ವ್ಯವಸ್ಥಾಪಕ ತಾರಾನಾಥ್‌ ಅವರ ವಿಶೇಷ ಆಮಂತ್ರಣದ ಮೇರೆಗೆ ಶಾಂತಾ ಪಡ್ವೆಟ್ನಾಯರು ತಮ್ಮ ತಂಡ, ಅಭಿಮಾನಿ ಬಳಗದೊಂದಿಗೆ ಮಲೇಷ್ಯಾದಲ್ಲಿ ನೃತ್ಯ ಕಾರ್ಯಕ್ರಮ ನೀಡಿ ಮರಳಿದ್ದಾರೆ.     

ಸಾಂತೂರು ಶ್ರೀನಿವಾಸ ತಂತ್ರಿ  

Advertisement

Udayavani is now on Telegram. Click here to join our channel and stay updated with the latest news.

Next