Advertisement

Brahmavar: ಗೋವುಗಳಿಗೂ ಬದುಕು ನೀಡುವುದು ಕರ್ತವ್ಯ: ವಿಶ್ವಪ್ರಸನ್ನತೀರ್ಥ ಶ್ರೀ

11:47 PM Nov 03, 2024 | Team Udayavani |

ಬ್ರಹ್ಮಾವರ: ಗೋವುಗಳು ತಂದೆ ತಾಯಿಗೆ ಸಮಾನ. ನಮಗೆ ಬದುಕಿನುದ್ದಕ್ಕೂ ಅಗತ್ಯವಾದ ಉತ್ಪನ್ನಗಳನ್ನು ನೀಡುವ ಗೋವುಗಳಿಗೂ ಬದುಕು ನೀಡುವುದು ನಮ್ಮ ಕರ್ತವ್ಯ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

Advertisement

ಅವರು ಶನಿವಾರ ಪ್ರಸಿದ್ಧ ಪಶು ಆಹಾರ ತಯಾರಿಕಾ ಸಂಸ್ಥೆ ಮಂದಾರ್ತಿಯ ಲಕ್ಷ್ಮೀ ಫೀಡ್ಸ್‌ ಮತ್ತು ಫಾಮ್ಸ್‌ìನಿಂದ ನೂತನ ಉತ್ಪನ್ನ ವಿಸ್ಮಯ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ನಮ್ಮ ಮನೆಯಲ್ಲಿ ಗೋವುಗಳನ್ನು ಸಾಕಲಾಗದಿದ್ದರೆ ಗೋಶಾಲೆಗಾದರೂ ನೆರವಾಗಬಹುದು. ಒಬ್ಬೊಬ್ಬರು ಒಂದೊಂದು ಗೋವನ್ನು ದತ್ತು ಪಡೆದರೂ ಪುಣ್ಯದ ಜತೆಗೆ ಸಮಾಜದಲ್ಲಿ ಪರಿವರ್ತನೆಯಾಗುತ್ತದೆ ಎಂದರು. ವಿಭಿನ್ನ ಉತ್ಪನ್ನಗಳ ಜತೆಗೆ ಔಷಧ ರೂಪದಲ್ಲೂ ಪಶು ಆಹಾರ ನೀಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಶಾಸಕ ಎ. ಕಿರಣ್‌ ಕುಮಾರ್‌ ಕೊಡ್ಗಿ ಅಧ್ಯಕ್ಷತೆ ವಹಿಸಿ, ಹೈನುಗಾರಿಕೆ ಹೆಚ್ಚು ಶ್ರಮದಾಯಕ, ಕಡಿಮೆ ಲಾಭದಾಯದ ಉದ್ಯಮ. ಸ್ವಂತ ದುಡಿಮೆ ಇದ್ದರೆ ತೃಪ್ತಿದಾಯಕ ಜೀವನ ನಡೆಸಬಹುದು ಎಂದರು.

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರ. ಅರ್ಚಕ ವೇ|ಎಂ. ಶ್ರೀಪತಿ ಅಡಿಗ, ಆನುವಂಶಿಕ ಆಡಳಿತ ಮೊಕ್ತೇಸರ ಎಚ್‌. ಧನಂಜಯ ಶೆಟ್ಟಿ, ಮಂದಾರ್ತಿ ಹಾಲು ಉ.ಸ. ಸಂಘದ ಅಧ್ಯಕ್ಷ ಎಚ್‌. ವಿಠಲ ಶೆಟ್ಟಿ, ಪಶು ಪಾಲನಾ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ| ಸರ್ವೋತ್ತಮ ಉಡುಪ, ಕೆ. ಮೋಹನ ಉಡುಪ ಮೊದಲಾದವರು ಉಪಸ್ಥಿತರಿದ್ದರು.

Advertisement

ಬಂಜೆತನ ದೊಡ್ಡ ಸಮಸ್ಯೆ
ಜಾನುವಾರುಗಳಲ್ಲಿ ಬಂಜೆತನ ಬಹುದೊಡ್ಡ ಸಮಸ್ಯೆಯಾಗಿದ್ದು, ರೈತರಿಗೆ ಸಂಕಷ್ಟ ತರಿಸುತ್ತಿದೆ. ಈ ನಿಟ್ಟಿನಲ್ಲಿ ಲಕ್ಷ್ಮೀ ಫೀಡ್ಸ್‌ನಿಂದ ನುರಿತ ತಜ್ಞರ ಮೂಲಕ ಯಶಸ್ವೀ ಪ್ರಯೋಗ ನಡೆಸಿ ಹೊಸ ವಿಸ್ಮಯ ಉತ್ಪನ್ನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸಂಸ್ಥೆಯ ಆಡಳಿತ ಪಾಲುದಾರ ಕೆ. ಮಹೇಶ್‌ ಉಡುಪ ಪ್ರಸ್ತಾವನೆಯಲ್ಲಿ ತಿಳಿಸಿದರು. 20 ವರ್ಷಗಳ ಹಿಂದೆ ತಿಂಗಳಿಗೆ 3 ಮೆಟ್ರಿಕ್‌ ಟನ್‌ ಉತ್ಪಾದನೆಯೊಂದಿಗೆ ಪ್ರಾರಂಭವಾದ ಲಕ್ಷ್ಮೀ ಫೀಡ್ಸ್‌ ಇಂದು ದಿನವೊಂದಕ್ಕೆ 120 ಟನ್‌ ಉತ್ಪಾದಿಸಿ ರಾಜ್ಯದಲ್ಲೇ ಉತ್ತಮ ಸ್ಥಾನದಲ್ಲಿದೆ ಎಂದರು.

ಕೆ. ಮಹೇಶ್‌ ಉಡುಪ ಸ್ವಾಗತಿಸಿದರು. ಕೆ. ಮಲ್ಲಿಕಾ ಉಡುಪ, ವಿವೇಕ್‌ ಐತಾಳ್‌, ಕೆ. ಸಂಜಯ ಉಡುಪ, ಅಂಜಲಿ ಎಸ್‌. ಉಡುಪ ಅತಿಥಿಗಳನ್ನು ಗೌರವಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next