Advertisement
ಸಂಖ್ಯೆ ಇದ್ದ ಮಾತ್ರಕ್ಕೆ ಹ್ಯಾಕ್ ಮಾಡಲಾಗದು: ‘ಈಗ ನಾವು ನೀಡುವ ಚೆಕ್‌ನಲ್ಲಿ ನಮ್ಮ ಬ್ಯಾಂಕ್ ಖಾತೆ ಸಂಖ್ಯೆ ಇರುತ್ತದೆ. ಅಂದ ಮಾತ್ರಕ್ಕೆ ನಮ್ಮಿಂದ ಚೆಕ್ ಪಡೆದ ವ್ಯಕ್ತಿ ನಮ್ಮ ಖಾತೆ ಹ್ಯಾಕ್ ಮಾಡಲು ಸಾಧ್ಯವೇ? ಇಲ್ಲ. ಹಾಗೆಯೇ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗಳು ಬಹಿರಂಗಗೊಂಡರೂ ಅವುಗಳಿಗೆ ಪಿನ್, ಒಟಿಪಿ ಸುರಕ್ಷತೆ ಇರುವುದರಿಂದ, ಈ ಸಂಖ್ಯೆಗಳನ್ನು ಬಳಸಿ ಹ್ಯಾಕ್ ಮಾಡಲಾಗದು’ ಎಂಬುದು ಪಾಂಡೆ ಅವರ ಅಭಿಪ್ರಾಯ.
ನಕಲಿ ಆಧಾರ್ ಸಂಖ್ಯೆ, ಕಾರ್ಡ್ ಬಳಸಿ ಬ್ಯಾಂಕ್‌ನವರಿಗೆ ಮೋಸ ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಆದರೆ ಬ್ಯಾಂಕ್ ಖಾತೆ ತೆರೆಯುವಾಗ ಆಧಾರ್ ಸಂಖ್ಯೆಯೊಂದೇ ಅಂತಿಮ ದಾಖಲೆ ಆಗಬಾರದು. ಬ್ಯಾಂಕ್‌ನವರು ಆಧಾರ್ ಹೊರತಾಗಿ, ವ್ಯಕ್ತಿಯ ಮತದಾನ ಗುರುತಿನ ಚೀಟಿ, ಪಡಿತರ ಚೀಟಿ ಸೇರಿ ಬೇರಾವುದೇ ದಾಖಲೆ ಪಡೆದು ಪರಿಶೀಲಿಸಬಹುದು. ಹೀಗೆ ಮಾಡುವುದರಿಂದ ಹಣದ ಅಕ್ರಮ ವ್ಯವಹಾರಗಳನ್ನು ತಡೆಯಬಹುದು.ಸರಕಾರದ ಸಹಾಯಧನ ಮತ್ತಿತರ ಪ್ರಯೋಜನ ಪಡೆಯಲು ಆಧಾರ್ ಅಗತ್ಯ. ಆದರೆ ಕಡ್ಡಾಯವಲ್ಲ. ಆಧಾರ್ ಹೊಂದಿರದ ವ್ಯಕ್ತಿ, ಬೇರಾವುದೇ ಗುರುತಿನ ದಾಖಲೆ ನೀಡಲು ಆಧಾರ್ ಕಾಯ್ದೆಯ ವಿಭಾಗ 7 ಅವಕಾಶ ಕಲ್ಪಿಸುತ್ತದೆ. ಆದರೆ, ಇದೇ ವೇಳೆ ಆತ ಆಧಾರ್ ಸಂಖ್ಯೆಗೆ ನೋಂದಣಿಯಾಗಬೇಕಾಗುತ್ತದೆ’ ಎಂದೂ ಅಜಯ್ ಭೂಷಣ್ ಪಾಂಡೆ ಮಾಹಿತಿ ನೀಡಿದ್ದಾರೆ.