Advertisement
ಲ್ಯಾಪರೊಸ್ಕೋಪಿ ಎಂದರೇನು?
Related Articles
Advertisement
- ಎಂಡೊಮೆಟ್ರಿಯೋಸಿಸ್: ಸಾಮಾನ್ಯವಾಗಿ ಗರ್ಭಕೋಶದ ಒಳಗೆ ಇರಬೇಕಾದ ಎಂಡೊಮೆಟ್ರಿಯಲ್ ಅಂಗಾಂಶಗಳು ಗರ್ಭಕೋಶದಿಂದ ಹೊರಗೆ ಬೆಳೆದಾಗ ಈ ಸಮಸ್ಯೆ ಉಂಟಾಗುತ್ತದೆ. ಎಂಡೊಮೆಟ್ರಿಯೋಸಿಸ್ ದೀರ್ಘಕಾಲೀನ ನೋವು ಮತ್ತು ಸಂತಾನಹೀನತೆಗೆ ಕಾರಣವಾಗಬಹುದು. ಶಸ್ತ್ರಚಿಕಿತ್ಸಾತಜ್ಞರು ಈ ಅಸಹಜ ಬೆಳವಣಿಗೆಗಳನ್ನು ಗುರುತಿಸಿ ನಿವಾರಿಸಲು ಲ್ಯಾಪರೊಸ್ಕೋಪಿಯು ಸಹಾಯ ಮಾಡುತ್ತದೆ, ಆ ಮೂಲಕ ಲಕ್ಷಣಗಳು ನಿವಾರಣೆಗೊಂಡು ಸಂತಾನೋತ್ಪತ್ತಿ ಸಾಧ್ಯತೆ ಹೆಚ್ಚುತ್ತದೆ.
- ಪೆಲ್ವಿಕ್ ಅಡೆಶನ್‌ಗಳು: ಶಸ್ತ್ರಚಿಕಿತ್ಸೆಗಳು, ಸೋಂಕುಗಳು ಅಥವಾ ಎಂಡೊಮೆಟ್ರಿಯೋಸಿಸ್‌ನಂತಹ ಅನಾರೋಗ್ಯಗಳಿಂದಾಗಿ ಅಂಗಾಂಶಗಳು ಗಾಯಗೊಳ್ಳಬಹುದು ಮತ್ತು ಫಾಲೊಪಿಯನ್ ಕೊಳವೆಗಳಲ್ಲಿ ತಡೆಯನ್ನು ಉಂಟು ಮಾಡಬಹುದು. ಹೀಗೆ ಅಂಟಿಕೊಂಡಿರುವ ಅಸಹಜ ಅಂಗಾಂಶಗಳನ್ನು ಕತ್ತರಿಸಿ ತೆಗೆದುಹಾಕುವ ಮೂಲಕ ಸಂತಾನೋತ್ಪತ್ತಿ ಅಂಗಗಳು ಸಹಜ ಸ್ಥಿತಿಗೆ ಮರಳಲು ಮತ್ತು ಅವುಗಳ ಕಾರ್ಯಚಟುವಟಿಕೆ ಪುನರ್‌ಸ್ಥಾಪನೆಗೊಳ್ಳಲು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನೆರವಾಗುತ್ತದೆ.
- ಅಂಡಾಶಯದ ಗಡ್ಡೆಗಳು: ಅಂಡಾಶಯದಲ್ಲಿ ಬೆಳವಣಿಗೆ ಹೊಂದಿರುವ ದ್ರವಾಂಶ ತುಂಬಿದ ಗಡ್ಡೆಗಳು ಅಥವಾ ಗಂಟುಗಳು ಸಂತಾನೋತ್ಪತ್ತಿಗೆ ಅಡ್ಡಿಯಾಗಬಹುದು. ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಆರೋಗ್ಯವಂತ ಅಂಗಾಂಶಗಳನ್ನು ಸಂರಕ್ಷಿಸುವುದರ ಜತೆಗೆ ಇಂತಹ ಗಡ್ಡೆಗಳನ್ನು ತೆಗೆದುಹಾಕಿ ಸ್ತ್ರೀಯ ಗರ್ಭಿಣಿಯಾಗುವ ಸಾಧ್ಯತೆಗಳನ್ನು ಹೆಚ್ಚಿಸಬಹುದು.
- ಗರ್ಭಕೋಶದ ಅಸಹಜ ಸ್ಥಿತಿಗಳು: ಫೈಬ್ರಾಯ್ಡಗಳು ಮತ್ತು ಪಾಲಿಪ್‌ಗ್ಳು ಗರ್ಭಕೋಶದ ಒಳಭಾಗದಲ್ಲಿ ಇದ್ದರೆ ಭ್ರೂಣವು ನೆಲೆಯಾಗುವುದಕ್ಕೆ ಅಡಚಣೆಯಾಗಬಹುದು. ಇಂತಹ ಅಸಹಜ ಬೆಳವಣಿಗೆಗಳನ್ನು ನಿವಾರಿಸಲು ಮತ್ತು ಗರ್ಭ ಕಟ್ಟಲು ಹೆಚ್ಚು ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಲ್ಯಾಪರೊಸ್ಕೋಪಿಯು ಸಹಾಯ ಮಾಡುತ್ತದೆ.
- ಟ್ಯೂಬಲ್ ಫ್ಯಾಕ್ಟರ್ ಇನ್‌ಫರ್ಟಿಲಿಟಿ: ಫಾಲೊಪಿಯನ್ ಕೊಳವೆಗಳಲ್ಲಿ ಇರುವ ಅಡಚಣೆಗಳು ಅಥವಾ ಹಾನಿಯ ಸಹಿತ ಫಾಲೊಪಿಯನ್ ಕೊಳವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಗಮನಾರ್ಹ ತೊಂದರೆ ಉಂಟಾಗಬಹುದು. ಫಾಲೋಪಿಯನ್ ಕೊಳವೆಗಳ ಆರೋಗ್ಯವನ್ನು ವಿಶ್ಲೇಷಿಸಿ, ಯಾವುದೇ ಸಮಸ್ಯೆಗಳಿದ್ದರೆ ಸರಿಪಡಿಸಲು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಸಹಾಯ ಮಾಡುವ ಮೂಲಕ ಸಹಜ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
- ಕಡಿಮೆ ಗಾಯ: ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಗೆ ಮಾಡಬೇಕಾದ ಗಾಯ ತೀರಾ ಸಣ್ಣದಾಗಿದ್ದು, ಇದರಿಂದಾಗಿ ಉಂಟಾಗುವ ನೋವು ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಕಡಿಮೆ ಮತ್ತು ಚೇತರಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಸಾಕು.
- ತತ್‌ಕ್ಷಣ ರೋಗ ಪತ್ತೆ ಮತ್ತು ಚಿಕಿತ್ಸೆ: ಲ್ಯಾಪರೊಸ್ಕೋಪಿ ಮೂಲಕ ಅಂತರ್ಗತವಾಗಿರುವ ಸಮಸ್ಯೆಗಳನ್ನು ಪತ್ತೆಹಚ್ಚುವುದರ ಜತೆಗೆಯೇ ಅಗತ್ಯವಾದ ಚಿಕಿತ್ಸೆಯನ್ನು ಕೂಡ ಕೂಡಲೇ ಒದಗಿಸುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದಾಗಿ ಅನಾರೋಗ್ಯಕ್ಕೆ ಉತ್ತರ ಮತ್ತು ಪರಿಹಾರ ಎರಡೂ ಒಂದೇ ಭೇಟಿಯಲ್ಲಿ ಪಡೆಯಲು ಸಾಧ್ಯವಾಗುತ್ತದೆ.
- ಉತ್ತಮ ಪ್ರಜನನಾತ್ಮಕ ಫಲಿತಾಂಶಗಳು: ಎಂಡೋಮೆಟ್ರಿಯೋಸಿಸ್ ಮತ್ತು ಪೆಲ್ವಿಕ್ ಅಡೆಶನ್‌ಗಳಂತಹ ಅನಾರೋಗ್ಯ ಸ್ಥಿತಿಗಳನ್ನು ಲ್ಯಾಪರೊಸ್ಕೋಪಿಯ ಮೂಲಕ ಚಿಕಿತ್ಸೆಗೆ ಒಳಪಡಿಸುವುದರಿಂದ ಸಹಜವಾಗಿ ಅಥವಾ ಸಹಾಯಿತ ಪ್ರಜನನಾತ್ಮಕ ತಂತ್ರಜ್ಞಾನಗಳ ನೆರವಿನಿಂದ ಗರ್ಭ ಕಟ್ಟುವ ಸಾಧ್ಯತೆಗಳು ಹೆಚ್ಚುತ್ತವೆ ಎಂಬುದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ.
- ಆಸ್ಪತ್ರೆ ವಾಸದ ಅವಧಿ ಅತ್ಯಲ್ಪ: ಲ್ಯಾಪರೊಸ್ಕೋಪಿಗೆ ಒಳಗಾದ ಅನೇಕ ರೋಗಿಗಳು ಕೆಲವೇ ತಾಸುಗ ಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳ ಬಹುದಾಗಿದ್ದು, ಇದರಿಂದ ಅವರ ದೈನಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ವ್ಯತ್ಯಯ ಉಂಟಾಗುವುದಿಲ್ಲ.
- ಗಾಯದ ಗುರುತು ಸಣ್ಣದು: ಲ್ಯಾಪರೊಸ್ಕೋಪಿಯಲ್ಲಿ ಉಂಟಾಗುವ ಗಾಯ ಸಣ್ಣ ಪ್ರಮಾಣದ್ದಾಗಿರುವುದರಿಂದ ಸೌಂದರ್ಯಾತ್ಮಕ ಫಲಿತಾಂಶವು ಉತ್ತಮವಾಗಿರುತ್ತದೆ. ಇದರಿಂದಾಗಿ ದೈಹಿಕವಾಗಿ ಬೇಗನೆ ಗುಣ ಹೊಂದಲು ಸಾಧ್ಯವಾಗುತ್ತದೆಯಲ್ಲದೆ ದೇಹ ಸೌಂದರ್ಯವೂ ಕೆಡುವುದಿಲ್ಲ.