Advertisement
ಪೂರ್ವ ಆಫ್ರಿಕಾ ಖಂಡದ ದೇಶ ಉಗಾಂಡಕ್ಕೆ ಚೀನಾದ ಎಕ್ಸ್‌ಪೋರ್ಟ್ ಇಂಪೋರ್ಟ್ ಬ್ಯಾಂಕ್ 2015ರಲ್ಲಿ 1,553 ಕೋಟಿ ರೂ. (207 ಮಿಲಿಯನ್ ಡಾಲರ್) ಸಾಲ ನೀಡಿತ್ತು. ಅದನ್ನು ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಈಗ ಬ್ಯಾಂಕ್, ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ಜಪ್ತಿ ಮಾಡಿ ದೆ. ಹೀಗಾಗಿ, ಡ್ರ್ಯಾಗನ್‌ನ ಸಾಲ ನೀತಿಗೆ ಬಲಿಯಾದ ರಾಷ್ಟ್ರಗಳ ಸಾಲಿಗೆ ಆಫ್ರಿಕಾ ಖಂಡದ ಬಡ ರಾಷ್ಟ್ರವೂ ಸೇರಿದಂತಾಗಿದೆ.
ನಿಲ್ದಾಣವನ್ನು ಚೀನಾ ಬ್ಯಾಂಕ್ ಕೈವಶ ಮಾಡಿಕೊಂಡಿದೆ. ಉಗಾಂಡ ಅಧ್ಯಕ್ಷ ಯೊವೇರಿ ಮುಸ್ವೇನಿ ಅವರು ಉನ್ನತಮಟ್ಟದ ನಿಯೋಗವನ್ನು ಬೀಜಿಂಗ್‌ಗೆ ಕಳುಹಿಸಿಕೊಟ್ಟಿದ್ದು, ಚೀನಾ ಜತೆಗೆ ಮಾತುಕತೆ ನಡೆಸಿ ವಿಮಾನ ನಿಲ್ದಾಣ ಬಿಡಿಸಿಕೊಳ್ಳುವಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅಲ್ಲಿನ ಹಣಕಾಸು ಸಚಿವರೂ ಇತ್ತೀಚೆಗೆ ಸಾಲದ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿರುವ ಬಗ್ಗೆ ಸಂಸತ್‌ನ ಕ್ಷಮೆಯನ್ನೂ ಕೇಳಿದ್ದಾರೆ.