Advertisement
ಯುಜಿನೀಟ್-2023ರ 2ನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಗಳು ಹಂಚಿಕೆಯಾಗಿ ಶುಲ್ಕ ಪಾವತಿಸದ ಕಾರಣ ಸುಮಾರು “37 ಜಿ’ ವೈದ್ಯಕೀಯ ಸೀಟುಗಳು ಹಾಗೂ “482 ಪಿ’ ಸೀಟುಗಳು ಭರ್ತಿಯಾಗದೆ ಉಳಿದಿರುವ ಹಿನ್ನೆಲೆಯಲ್ಲಿ ಈಗಾಗಲೇ ಯುಜಿನೀಟ್ 2023ರ 2 ಸುತ್ತುಗಳಲ್ಲಿ ವೈದ್ಯಕೀಯ ಸೀಟುಗಳು ಹಂಚಿಕೆಯಾಗಿ ಕಾಲೇಜುಗಳಲ್ಲಿ ವರದಿ ಮಾಡಿಕೊಂಡಿರುವ ಅಭ್ಯರ್ಥಿಗಳು ಹಾಗೂ ಶುಲ್ಕ ಪಾವತಿಸದೆ ಮತ್ತು ಕಾಲೇಜಿಗೆ ವರದಿ ಮಾಡಿಕೊಳ್ಳದಿರುವವರೂ ಮಾಪ್‌ಅಪ್ ಸುತ್ತಿನಲ್ಲಿ ಭಾಗವಹಿಸ ಬಹುದು. ಆಸಕ್ತರು ಕೋಷನ್ ಡೆಪೋಸಿಟ್ ಪಾವತಿಸಬೇಕು ಹಾಗೂ ಎಲ್ಲರೂ ಹೊಸದಾಗಿ ಆಪ್ಷನ್‌ಗಳನ್ನು ದಾಖಲಿಸಬೇಕು. ಈ ಮೊದಲು ದಾಖಲಿಸಿದ್ದ ಆಪ್ಷನ್‌ಗಳನ್ನು ಪರಿಗಣಿಸುವುದಿಲ್ಲ. ಒಂದು ವೇಳೆ ಈ ಮಾಪ್‌ಅಪ್ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ ಹಿಂದಿನ ಸುತ್ತುಗಳಲ್ಲಿ ಹಂಚಿಕೆಯಾಗಿದ್ದ ಸೀಟು ರದ್ದುಗೊಳ್ಳುತ್ತದೆ. ಈ ಸುತ್ತಿನಲ್ಲಿ ಹಂಚಿಕೆಯಾಗುವ ಕಾಲೇಜಿಗೆ ಕಡ್ಡಾಯವಾಗಿ ಪ್ರವೇಶ ಪಡೆಯಬೇಕು. Advertisement
UG NEET ; ವೈದ್ಯ ಅಭ್ಯರ್ಥಿಗಳಿಗೆ ಮಾಪ್‌ಅಪ್ ಸುತ್ತಿನಲ್ಲಿ ಅವಕಾಶ
11:33 PM Sep 14, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.