Advertisement
ಒಟ್ಟು ಎಲ್ಲಾ 35 ಸ್ಥಾನ (ವಾರ್ಡ್)ಗಳಿಗೆ ಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 10 ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
Related Articles
ಮೂವರು ಡಿವೈಎಸ್‌ಪಿ ಹಾಗೂ 6 ಮಂದಿ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಪೊಲೀಸ್‌ಪಡೆ ಸಿದ್ಧವಾಗಿದೆ. 4 ಕೆಎಸ್‌ಆರ್‌ಪಿ, 6 ಡಿಆರ್ ತುಕಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ. 36 ಮಂದಿ ಪಿಎಸ್‌ಐ/ಎಎಸ್‌ಐಗಳು, 350 ಮಂದಿ ಕಾನ್‌ಸ್ಟೆàಬಲ್‌ಗಳು, 106 ಮಂದಿ ಗೃಹರಕ್ಷಕ ದಳ ಸಿಬಂದಿ ಭದ್ರತಾ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ.
Advertisement
ಮೊದಲ ಬಾರಿಗೆ ವೋಟರ್ ಸ್ಲಿಪ್ ವಿತರಣೆ
ಕಳೆದ ವಿಧಾನಸಭಾ ಚುನಾವಣೆಯಂತೆ ನಗರಸಭಾ ಚುನಾವಣೆ ಯಲ್ಲಿಯೂ ಅಧಿಕಾರಿಗಳು ಮನೆ ಮನೆಗಳಿಗೆ ಭಾವಚಿತ್ರ ಸಹಿತವಾದ ವೋಟರ್ ಸ್ಲಿಪ್‌ನ್ನು ವಿತರಿಸಿದ್ದಾರೆ. ರಾಜಕೀಯ ಪಕ್ಷಗಳು ಕೂಡ ವೋಟರ್ ಸ್ಲಿಪ್ ನೀಡಿವೆ. ಅಧಿಕಾರಿಗಳು ನೀಡಿರುವ ವೋಟರ್ ಸ್ಲಿಪ್‌ನ್ನು ತೆಗೆದುಕೊಂಡು ಹೋದರೆ ಮತದಾನ ಮಾಡಲು ಬೇರೆ ದಾಖಲೆಗಳ ಆವಶ್ಯಕತೆ ಇಲ್ಲ. ರಾಜಕೀಯ ಪಕ್ಷಗಳು ನೀಡಿರುವ ವೋಟರ್ ಸ್ಲಿಪ್ ತೆಗೆದುಕೊಂಡು ಹೋದರೆ ಮತದಾನ ಮಾಡಲು ಬೇರೆ ದಾಖಲೆ ಕೂಡ ಬೇಕಾಗುತ್ತದೆ. ಮತದಾರರ ಗುರುತಿನ ಚೀಟಿ ಇಲ್ಲದಿದ್ದಲ್ಲಿ ಇತರ 21 ದಾಖಲೆಗಳ ಪೈಕಿ ಯಾವುದನ್ನಾದರೂ ತೋರಿಸಿ ಮತ ಚಲಾಯಿಸಬಹುದು. ಈ ಚುನಾವಣೆ ಯಲ್ಲಿ ಎಡಗೈಯ ಉಂಗುರ ಬೆರಳಿಗೆ ಶಾಯಿ ಹಾಕಲಾಗುತ್ತದೆ. ಏರಿದೆ ಕಾವು ನಗರಸಭೆಯ ಗದ್ದುಗೆ ಹಿಡಿಯಲು ಕಾಂಗ್ರೆಸ್, ಬಿಜೆಪಿ ಪಕ್ಷಗಳು ಇನ್ನಿಲ್ಲದ ರೀತಿಯಲ್ಲಿ ಪ್ರಯತ್ನ ಮುಂದುವರಿಸಿದ್ದು ಗುರುವಾರ ಕೂಡ ನಾನಾ ರೀತಿಯ ಕಸರತ್ತುಗಳು ನಡೆದವು. ವೈಯಕ್ತಿಕ ಕರೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮೊದಲಾದವುಗಳ ಮೂಲಕ ಮತ ಸೆಳೆಯುವ ಪ್ರಯತ್ನ ಮುಂದುವರಿದವು. ಪಕ್ಷೇತರ ಅಭ್ಯರ್ಥಿಗಳನ್ನು ಹೊರತು ಪಡಿಸಿದರೆ ಇತರ ಎಲ್ಲಾ ಅಭ್ಯರ್ಥಿಗಳ ಪರವಾಗಿಯೂ ಪಕ್ಷದ ಮುಖಂಡರು ಪ್ರಚಾರ ನಡೆಸಿದ್ದಾರೆ. ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ಮತದಾನಕ್ಕೆ ತಯಾರಿ ನಡೆಸುತ್ತಿರುವುದು.