Advertisement

ದ.ಕ., ಉಡುಪಿ ವಿದ್ಯಾರ್ಥಿಗಳು ಜಗವನ್ನಾಳಲು ಸಮರ್ಥರು: ಸಚಿವ ಪ್ರಮೋದ್‌

07:30 AM Aug 22, 2017 | Team Udayavani |

ಮಂಗಳೂರು: ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿರುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿದ್ಯಾರ್ಥಿಗಳು ಜಗತ್ತಿಗೆ ನಾಯಕರಾಗುವ ಶಕ್ತಿಯನ್ನು ಹೊಂದಿದ್ದಾರೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ಹೊರಬಂದು ತಮ್ಮ ಭವಿಷ್ಯ ರೂಪಿಸುವತ್ತ ಆಲೋಚಿಸಬೇಕಿದೆ ಎಂದು ರಾಜ್ಯ ಮೀನುಗಾರಿಕೆ ಹಾಗೂ ಯುವ ಸಬಲೀಕರಣ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ನಗರದ ರಥಬೀದಿ ಸರಕಾರಿ ಕಾಲೇಜಿನಲ್ಲಿ ಯುವ ಸಬಲೀಕರಣ ಇಲಾಖೆಯ 35 ಲಕ್ಷ ರೂ. ಅನುದಾನ
ದಲ್ಲಿ ನಿರ್ಮಾಣಗೊಂಡ ನೂತನ ಜಿಮ್‌ ಉದ್ಘಾಟಿಸಿ ಮಾತನಾಡಿದರು.

ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಯುವ ಜನರ ಸಂಖ್ಯೆ ಕಡಿಮೆ ಇದ್ದರೆ ಭಾರತದ ಜನಸಂಖ್ಯೆ ಶೇ. 70 ಯುವಜನರೇ ಇದ್ದಾರೆ. ಹೀಗಾಗಿ ಮುಂದಿನ 20 ವರ್ಷಗಳಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಭಾರತದಿಂದಲೇ ದುಡಿಯುವ ಕೈಗಳು ತೆರಳಬೇಕಿದೆ ಎಂದರು.

ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ರಾಜ್ಯ ಸರಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ವಿದ್ಯಾರ್ಥಿಗಳು ಅದರ ಪೂರ್ಣ ಪ್ರಯೋಜನ ಪಡೆಯಬೇಕೆಂದರು. ಈಜುಕೊಳಕ್ಕೆ 5 ಕೋ.ರೂ. ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಆರ್‌. ಲೋಬೊ ಮಾತನಾಡಿ, ಯುವಸಬಲೀಕರಣ ಇಲಾಖೆಯು ರಥಬೀದಿ ಕಾಲೇಜಿಗೆ ಜಿಮ್‌ ನೀಡಿರುವ ಜತೆಗೆ ನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳ ನಿರ್ಮಾಣಕ್ಕೆ 5 ಕೋ.ರೂ. ಅನುದಾನ ನೀಡಿದೆ. ಮುಂದೆ ಇಲಾಖೆಯು ನಗರದಲ್ಲಿ 2 ಕ್ರೀಡಾಂಗಣ ನಿರ್ಮಾಣಕ್ಕೆ ಸಹಕರಿಸಲಿದೆ. ನಬಾರ್ಡ್‌ನ 5 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಜೆಟ್ಟಿ ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿದೆ ಎಂದರು.

ಆ್ಯತ್ಲೆಟಿಕ್‌ಗೆ 2 ಲ.ರೂ.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಶೈಕ್ಷಣಿಕ ಸಮಿತಿ, ನೂತನ ಸ್ನಾತಕ/ಸ್ನಾತಕೋತ್ತರ ಕೋರ್ಸ್‌ಗಳನ್ನು ಉದ್ಘಾ
ಟಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಕಾಲೇಜಿನ ಆಯೋಜನೆಯಲ್ಲಿ ನಡೆಯಲಿರುವ ಮಂಗಳೂರು ವಿ.ವಿ. ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ಗೆ 2 ಲಕ್ಷ ರೂ. ಅನುದಾನ ನೀಡಿದರು.
ವೇದಿಕೆಯಲ್ಲಿ ಕಾರ್ಪೊರೇಟರ್‌ ರಮೀಝಾ ಬಾನು, ಯುವ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ಪ್ರದೀಪ್‌ ಡಿ’ಸೋಜಾ, ಅಭಿವೃದ್ಧಿ ಸಮಿತಿ ಸದಸ್ಯ ಕಿಶನ್‌ ಕಿಶೋರ್‌, ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಪಾಂಡುರಂಗ ನಾಯಕ್‌, ಮುಖ್ಯ ಶೈಕ್ಷಣಿಕ ಸಲಹೆಗಾರ ಡಾ| ಶಿವರಾಮ ಪಿ., ಪ್ರಾಧ್ಯಾಪಕರಾದ ಪ್ರೊ| ರವಿಕುಮಾರ, ಪ್ರೊ| ಶೇಸಪ್ಪ ಕೆ., ವಿದ್ಯಾರ್ಥಿ ನಾಯಕರಾದ ಅಕ್ಷತಾ ಟಿ., ಜಯಲಕ್ಷ್ಮೀ ಉಪಸ್ಥಿತರಿದ್ದರು.ಪ್ರಾಂಶುಪಾಲ ಪ್ರೊ| ರಾಜಶೇಖರ ಹೆಬ್ಟಾರ್‌ ಸಿ. ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next