ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಪ್ರಯುಕ್ತ ಸಾರ್ವಜನಿಕರಿಗಾಗಿ ಏರ್ಪಡಿಸಿದ್ದ ಗೂಡುದೀಪ ಸ್ಪರ್ಧೆಯ ಬಹುಮಾನ ವಿತರಣ ಸಮಾರಂಭವು ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಅ.29ರಂದು ನೆರವೇರಿತು.
ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಶ್ರೀಪಾದರು ಅಶೀರ್ವಚನ ನೀಡಿ, ಸಾಂಸ್ಕೃತಿಕ ಪರಂಪರೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ಮನೆ ಮಾತಾಗಿರುವ ಇದೀಗ ಮೂಲೆ ಗುಂಪಾಗಿರುವ ಗೂಡುದೀಪಗಳು, ಅವುಗಳ ನಿರ್ಮಾಣದ ಬಗ್ಗೆ ಪರ್ಯಾಯ ಶ್ರೀಪುತ್ತಿಗೆ ಮಠವು ವಿಶೇಷ ಗಮನ ಹರಿಸಿ ಈ ಸ್ಪರ್ಧೆಯನ್ನು ಏರ್ಪಡಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ, ವಿಜೇತರಾದ ಎಲ್ಲರಿಗೂ ಶ್ರೀಕೃಷ್ಣ ಮುಖ್ಯಪ್ರಾಣ ದೇವರು ವಿಶೇಷವಾಗಿ ಅನುಗ್ರಹಿಸಿಲಿ ಎಂದರು.
ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಹಿತೋಷ್ ಆಚಾರ್ಯ, ರತೀಶ ತಂತ್ರಿ, ಸಂತೋಷ್ ಶೆಟ್ಟಿ ತೆಂಕರಗುತ್ತು, ಗೂಡುದೀಪ ಸ್ಪರ್ಧಾ ಸಮಿತಿಯ ಸಂಘಟಕರಾದ ಈಶ್ವರ ಚಿಟಾ³ಡಿ, ಕೇಶವ ಆಚಾರ್ಯ, ಸುಮಿತ್ರಾ ಕೆರೆಮಠ, ಭಾರತೀ ಕೃಷ್ಣಮೂರ್ತಿ, ಅಮಿತ, ಉಮೇಶ್ ಭಟ್, ರವೀಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಬಹುಮಾನ ವಿಜೇತರು
ಸಾಂಪ್ರದಾಯಿಕ ವಿಭಾಗ: ಮಂಗಳೂರಿನ ರಕ್ಷಿತ್ ಕುಮಾರ್ (ಪ್ರ), ಕೋಟದ ನಾಗೇಂದ್ರ (ದ್ವಿ), ಉಡುಪಿಯ ವಿದ್ಯಾ ಅದಿತಿ (ತೃ), ಕೌಶಿಕ್ ಉಡುಪಿ, ಶೋಭಿತ್ ತೆಕ್ಕಟ್ಟೆ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಅಧುನಿಕ ವಿಭಾಗ: ಜಗದೀಶ್ ಅಮೀನ್ ಬಜಪೆ (ಪ್ರ), ಗೀತಾಮಲ್ಯ ಮಂಗಳೂರು (ದ್ವಿ), ವೈಶಾಲ್ ಅಂಚನ್ ಕಟೀಲು (ತೃ), ಪಂಚಮಿ ಪ್ರೀತಂ ಪರ್ಕಳ, ನಾಗಶ್ರೀ ರಾವ್ ಮಾರ್ಪಳ್ಳಿ, ಸಿಂಧೂರ ಬೈಲಕೆರೆ ಸಮಾಧಾನಕರ ಬಹುಮಾನ ಗಳಿಸಿದ್ದಾರೆ.