Advertisement

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

05:54 PM Dec 19, 2024 | Team Udayavani |

ಉಡುಪಿ: ಪರ್ಯಾಯ ಪುತ್ತಿಗೆ ಮಠ ಶ್ರೀ ಕೃಷ್ಣಮಠದ ವತಿಯಿಂದ ರಾಜಾಂಗಣದಲ್ಲಿ ಬೃಹತ್‌ ಗೀತೋತ್ಸವದ ಅಂಗವಾಗಿ ಗಂಗಾವತಿ ಪ್ರಾಣೇಶ್ ತಂಡದಿಂದ ಹಾಸ್ಯೋತ್ಸವ ಕಾರ್ಯಕ್ರಮ ನಡೆಯಿತು.

Advertisement

ಗಂಗಾವತಿ ಪ್ರಾಣೇಶ್ , ನರಸಿಂಹ ಜೋಶಿ, ಬಸವರಾಜ ಮಹಾಮನಿಯವರು ಕಿಕ್ಕಿರಿದ ಸಭೆಯನ್ನು ನಗೆಗಡದಲ್ಲಿ ತೇಲಿಸಿದರು.

ಈ ಮುನ್ನ ನಡೆದ ಸಭೆಯಲ್ಲಿ ಪೂಜ್ಯ ಪರ್ಯಾಯ ಶ್ರೀಪಾದರು ಭಗವದ್ಗೀತೆಯಲ್ಲೂ ಶ್ರೀಕೃಷ್ಣ ನಗುನಗುತ್ತಲೇ ಅರ್ಜುನನ ದುಗುಡ ದುಮ್ಮಾನಗಳಿಗೆ ಉತ್ತರಿಸಲು ಶುರು ಮಾಡಿದ.

ಹೀಗೆ ಯಾವುದೇ ಸಮಸ್ಯೆಗಳಿಗೆ ನಗುವೂ ಪರಿಹಾರದ ಉತ್ತರ ವಾಗಬಲ್ಲುದು ಎಂದು ತೋರಿಸಿಕೊಟ್ಟ.ಯಾವ ಪ್ರಾಣಿಗೂ ನೀಡದ ಈ ವರವನ್ನು ಮನುಜನಿಗೆ ಭಗವಂತ ಕರುಣಿಸಿದ. ಇಂತಹ ನಗುವಿನ ಹಾಸ್ಯೋತ್ಸವ ಈ ಗೀತೋತ್ಸವದಲ್ಲಿ ಸಕಾಲಿಕವಾಗಿದೆ. ನಮ್ಮೆಲ್ಲಾ ಜೀವನದ ಸಮಸ್ಯೆಗಳು ನಗುವಿನಿಂದ ಪರಿಹಾರವಾಗಬಲ್ಲುದು ಎಂದು ಪರ್ಯಾಯ ಶ್ರೀಪಾದರು ನುಡಿದು ಪ್ರಾಣೇಶ್ ತಂಡ ದವರನ್ನು ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಭಗವದ್ಗೀತೆಗಾಗಿಯೇ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಗೀತಾ ಮಾತೆಯರೆಂದು ಮಾನ್ಯೆಯರಾದ, ಶ್ರೀಮತಿ ಲಕ್ಷ್ಮಿ ಶಾನಭಾಗ್, ಮೀರಾ ಜಿ ಪೈ,ಕೆ.ಪ್ರೇಮಾ ಮತ್ತು ಕುಶಾಲನಗರದ ಪದ್ಮಾ ಪುರುಷೋತ್ತಮ್, ಪಿರಿಯಾ ಪಟ್ಟಣದ ರಮಾ ವಿಜಯೇಂದ್ರ ರವರನ್ನು ಸನ್ಮಾನಿಸಲಾಯಿತು.

Advertisement

ಈ ಬೃಹತ್ ಗೀತೋತ್ಸವದಲ್ಲಿ ಬಹು ಜನರ ಬೇಡಿಕೆಯಂತೆ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಇಂದಿನಿಂದ ಪ್ರಾರಂಭಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next