Advertisement
ಅನೇಕ ವರ್ಷಗಳಿಂದ ಘೋಷಣೆಯಾಗಿ, ನೆನೆಗುದಿಗೆ ಬಿದ್ದಿದ್ದ ಬಹು ಬೇಡಿಕೆಯ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೌಡ-ಶಂಕರನಾರಾಯಣ ಸೇತುವೆ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಈಗ ಕಾಮಗಾರಿಯೂ ಬಿರುಸಿನಿಂದ ನಡೆಯುತ್ತಿದೆ.
ಮಂಜೂರಾಗಿತ್ತು. ಹಿಂದೆ ಶಾಸಕರಾಗಿದ್ದ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯರಾಗಿದ್ದ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಶಿಫಾರಸು ಮಾಡಿ, ಸೇತುವೆಗಾಗಿ ಪ್ರಯತ್ನಿಸಿದ್ದಾರೆ. ಸೌಡ ಭಾಗದ ಜನರು, ಈ ಭಾಗದ ಸಂಘಟನೆಗಳು, ಶಂಕರನಾರಾಯಣ ತಾಲೂಕು ಹೋರಾಟ ಸಮಿತಿಯವರು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. 8-10 ಕಿ.ಮೀ. ಹತ್ತಿರ
ಸೌಡ ಸೇತುವೆಯಾದರೆ ಪ್ರಮುಖವಾಗಿ ಉಪ ನೋಂದಣಿ ಕಚೇರಿ ಸಹಿತ ಹತ್ತು ಹಲವು ಸರಕಾರಿ ಕಚೇರಿಗಳನ್ನು ಹೊಂದಿರುವ ಶಂಕರನಾರಾಯಣಕ್ಕೆ ಬರಲು ಹಾರ್ದಳ್ಳಿ-ಮಂಡಳ್ಳಿ, ಮೊಳಹಳ್ಳಿ, ಹೊಂಬಾಡಿ – ಮಂಡಾಡಿ, ಯಡಾಡಿ – ಮತ್ಯಾಡಿ, ಕೊರ್ಗಿ, ಜಪ್ತಿ, ಹೆಸ್ಕತ್ತೂರು ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಇನ್ನು ಸೌಡ ಭಾಗದ ಜನರು ಕುಂದಾಪುರ ಹಾಗೂ ಉಡುಪಿಗೆ ಬರಲು 10 ರಿಂದ 12 ಕಿ.ಮೀ. ಹತ್ತಿರವಾಗಲಿದೆ. ಮಚ್ಚಟ್ಟು, ಸಿದ್ದಾಪುರ, ಹೊಸಂಗಡಿ, ಉಳ್ಳೂರು-74 ಭಾಗದ ಜನರಿಗೆ ಮಣಿಪಾಲ, ಉಡುಪಿಗೆ ತೆರಳಲು ಸಹ ಪ್ರಯೋಜನವಾಗಲಿದೆ.
Related Articles
ಸೇತುವೆಯು ಒಟ್ಟು 153 ಮೀ. ಉದ್ದವಿರಲಿದ್ದು, 12.5 ಮೀ. ಅಗಲವಾಗಿರಲಿದೆ. 2 ಅಬ್ಯುಸ್ ಮೆಂಟ್ ಹಾಗೂ 5 ಪಿಲ್ಲರ್‌ಗಳು ಇರಲಿದೆ. ಕಾಮಗಾರಿ ಗುತ್ತಿಗೆಯನ್ನು ಸೈಂಟ್ ಅಂತೋನಿ ಕನ್‌ಸ್ಟ್ರಕ್ಷನ್ ಕಂಪೆನಿ ನಿರ್ವಹಿಸುತ್ತಿದ್ದು, 2024 ನವೆಂಬರ್‌ವರೆಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.
– ಕೆ. ಶಿವಮೂರ್ತಿ, ಸಹಾಯಕ
ಎಂಜಿನಿಯರ್, ಲೋಕೋಪಯೋಗಿ ಇಲಾಖೆ
Advertisement
ಸುದಿನ ವರದಿಸೌಡ – ಶಂಕರನಾರಾಯಣ ಸೇತುವೆ ಬೇಡಿಕೆ ಬಗ್ಗೆ, ಒಮ್ಮೆ ಘೋಷಣೆಯಾಗಿ ಬಳಿಕ ನನೆಗುದಿಗೆ ಬಿದ್ದ ಕುರಿತು, ವಿಳಂಬದ ಬಗ್ಗೆಯೂ “ಉದಯವಾಣಿ ಸುದಿನ’ವು ನಿರಂತರವಾಗಿ ವಿಶೇಷ ವರದಿಗಳನ್ನು ಪ್ರಕಟಿಸಿ, ಗಮನಸೆಳೆದಿತ್ತು.