Advertisement
ಹೆಬ್ರಿಯಿಂದ ಬ್ರಹ್ಮಾವರಕ್ಕೆ ನರ್ಮ್ ಕೊಡಿ ಅಭಿಯಾನಕ್ಕೆ ಪತ್ರ ಬರೆದವರೊಬ್ಬರು ಹೇಳುವಂತೆ, ಕೊರೊನಾ ಪೂರ್ವದಲ್ಲಿ ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದು, ಬ್ರಹ್ಮಾವರ ಮತ್ತು ಹೆಬ್ರಿ ನಡುವೆ ಮೂರು ನರ್ಮ್ ಬಸ್ ಗಳನ್ನು ಬಿಡಲಾಗಿತ್ತು. ಆದರೆ, ಖಾಸಗಿಯವರು ಅದರ ಹಿಂದೆ ಮುಂದೆಲ್ಲ ಬಸ್ ಓಡಿಸಿ ಅದಕ್ಕೆ ಕಲೆಕ್ಷನ್ ಇಲ್ಲದಂತೆ ಮಾಡಿ ಸಂಕಷ್ಟಕ್ಕೆ ತಳ್ಳಿದರು. ಈ ನಡುವೆ ಕೊರೊನಾದ ಹಿನ್ನೆಲೆಯಲ್ಲಿ ಕೆಲವೊಂದು ಖಾಸಗಿ ಬಸ್ ಗಳ ಸಂಚಾರವೂ ನಿಂತಿದೆ. ಇದರಿಂದ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ, ಖಾಸಗಿ-ಸರಕಾರಿ ಕೆಲಸ, ಬ್ಯಾಂಕ್, ಆಸ್ಪತ್ರೆಗೆ ಹೋಗುವವರಿಗೆ ಭಾರಿ ತೊಂದರೆಯಾಗಿದೆ. ವಿದ್ಯಾರ್ಥಿಗಳ ಪರಿಸ್ಥಿತಿ ಹೇಗಾಗಿದೆ ಎಂದರೆ, ಹೆತ್ತವರು ತಮ್ಮ ಮಕ್ಕಳು ಹೇಗಾದರೂ ಕಾಲೇಜಿಗೆ ಹೋಗಲಿ ಎಂದು ಸಾಲ ಮಾಡಿ ಬೈಕ್ ಕೊಡಿಸಬೇಕಾದ ಅನಿ
ವಾರ್ಯತೆ ಉಂಟಾಗಿದೆ. ಹೆಣ್ಮಕ್ಕಳ ಶಿಕ್ಷಣಕ್ಕೂ ಕಲ್ಲು ಬಿದ್ದಿದೆ.
ಬಸ್ ಸಂಚಾರ ಮತ್ತೆ ಆರಂಭ ವಾಗಿದೆಯಂತೆ. ಹೀಗಾಗಿ ಹೆಬ್ರಿ- ಕರ್ಜೆ -ಬ್ರಹ್ಮಾವರ ನಡುವೆ ಕೂಡ ನರ್ಮ್ ಬಸ್ ಮತ್ತೆ ಆರಂಭವಾಗಲಿ ಎಂದು ಅವರು ಆಗ್ರಹಿಸಿದ್ದಾರೆ. ನೀಲಾವರ, ಕೂರಾಡಿ ಭಾಗದವರ ಬೇಡಿಕೆ: ಬ್ರಹ್ಮಾವರ-ಮಟಪಾಡಿ- ನೀಲಾವರ, ಮಣಿಪಾಲ- ನೀಲಾವರ-ಕೂರಾಡಿ ಮಾರ್ಗವಾಗಿ ಮಂದಾರ್ತಿ, ಉಡುಪಿ-ಬಾರ್ಕೂರು-ಕುರಾಡಿ ಮಾರ್ಗವಾಗಿ ಕೊಕ್ಕರ್ಣೆಗೆ ಹೋಗುವುದಕ್ಕೆ ಖಾಸಗಿ ಬಸ್ ಗಳನ್ನೇ ಅವಲಂಬಿಸಬೇಕಾಗಿದೆ. ಈ ಮಾರ್ಗಗಳಲ್ಲಿ ನರ್ಮ್ ಬಸ್ ಗಳು ಬರಲಿ ಎನ್ನುವುದು ಸಂದೀಪ್ ಪೂಜಾರಿ ಕುರಾಡಿ ಎಂಬವರ ಆಗ್ರಹ.
Related Articles
Advertisement
ಬೆಳ್ಳರ್ಪಡಿಗೆ 1 ಬಸ್,100 ವಿದ್ಯಾರ್ಥಿಗಳುಹಿರಿಯಡಕ-ಹರಿಖಂಡಿಗೆ ನಡುವಿನ ಬೆಳ್ಳರ್ಪಾಡಿ ಮತ್ತು ಇತರ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ತೀವ್ರವಾಗಿದೆ. ಇಲ್ಲಿಂದ ಮಣಿಪಾಲ, ಉಡುಪಿಯ ವಿವಿಧ ಶಾಲೆ, ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳಿದ್ದಾರೆ. ಸದ್ಯಕ್ಕೆ ನಮ್ಮ ಊರಿಗೆ ಕೇವಲ ಒಂದು ಖಾಸಗಿ ಬಸ್ಸು ಮಾತ್ರ ದಿನಕ್ಕೆ ಎರಡು ಬಾರಿ ಬಂದು ಹೋಗುತ್ತದೆ. ಬೆಳಗ್ಗೆ ಮತ್ತು ಸಂಜೆ ಶಾಲೆ-ಕಾಲೇಜು ಸಮಯದಲ್ಲಿ ಈ ಬಸ್ಸಿನಲ್ಲಿ ವಿದ್ಯಾರ್ಥಿಗಳು ಹೋಗಲು ಭಾರಿ ಕಷ್ಟ ಪಡ ಬೇಕಾಗಿದೆ. ಅನೇಕ ಮಕ್ಕಳು ಮತ್ತು ವಿದ್ಯಾರ್ಥಿನಿಯರು ಅತಿ ಭಾರದ ಬ್ಯಾಗನ್ನು ಹೊತ್ತು ಆ ಬಸ್ಸನ್ನು ಹತ್ತಲಾಗದೆ ಬೇರೆಯವರ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಬೇಕಾಗಿದೆ. ಮಳೆಗಾಲದಲ್ಲಂತೂ ಯಮಯಾತನೆ. ಹೀಗಾಗಿ ನರ್ಮ್ ಬಸ್ ಹಾಕುವ ವ್ಯವಸ್ಥೆ ಮಾಡಲು
ಮನವಿ.
– ಬೆಳ್ಳರ್ಪಾಡಿ ಮತ್ತು ಪರಿಸರದ ಗ್ರಾಮಸ್ಥರು. ಲೋಕಾಯುಕ್ತರೇ ಸೂಚಿಸಿದ್ದಾರೆ
ಉಡುಪಿಯ ದೊಡ್ಡಣಗುಡ್ಡೆ, ಪೆರಂಪಳ್ಳಿ ಭಾಗ ಕ್ಕೆ ನರ್ಮ್ ಬಸ್ ಒದಗಿಸುವಂತೆ ಲೋಕಾಯುಕ್ತರೇ ಸೂಚಿಸಿದ್ದಾರೆ. ಆವರ ಆದೇಶದ ಮೇರೆಗೆ ಜಿಲ್ಲಾಧಿಕಾರಿಗಳು ಆರ್‌ಟಿಒ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಈ ಪ್ರಕ್ರಿಯೆ ಮುಗಿದು ಆರು ತಿಂಗಳಾಗುತ್ತಾ ಬಂದರೂ ಫಲವಿಲ್ಲ. ಇಲ್ಲಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇನ್ನಾದರೂ ಈ ರೂಟಿನಲ್ಲಿ ನರ್ಮ್ ಬಸ್ ಒದಗಿಸಿ.
-ಎನ್. ರಾಮ ಭಟ್, ಕಾರ್ಯದರ್ಶಿ,
ಕೆಎಚ್‌ಬಿ ನಿವಾಸಿಗಳ ಸಂಘ, ದೊಡ್ಡಣಗುಡ್ಡೆ ನಮ್ಮ ಊರಿಗೆ ಸಂಜೆ ಬಸ್ ಬೇಕು
ನಾನು 10ನೇ ತರಗತಿ ವಿದ್ಯಾರ್ಥಿ. ಅಪರಾಹ್ನ 3.00ರಿಂದ ಸಂಜೆ 6ರ ವರೆಗೆ ಶಿರ್ವ- ಸೂಡ -ಪಳ್ಳಿ ಮಾರ್ಗವಾಗಿ ಯಾವುದೇ ಬಸ್ ಸಂಚಾರವಿಲ್ಲ. ಈ ಕಾರಣದಿಂದಾಗಿ ವಿದ್ಯಾರ್ಥಿಗಳು ತುಂಬಾ ಸಂಕಟವನ್ನು ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ, ಈ ಮಾರ್ಗದಲ್ಲಿ ಸಂಜೆಯ ಹೊತ್ತಿಗೆ ಬಸ್ ಓಡಾಟಕ್ಕೆ ಅನುವು ಮಾಡಿಕೊಡಬೇಕಾಗಿ ವಿನಂತಿ.
*ಶಶಾಂಕ್, ವಿದ್ಯಾರ್ಥಿ ನಮ್ಮ ಊರಿಗೆ ಹಗಲು ಬಸ್ ಬೇಕು
ನಮ್ಮೂರು ಸಂಪಿಗೆ ನಗರ ಮತ್ತು ಪಿತ್ರೋಡಿ ನಡು ವಿನ ಕಲಾಯಿಬೈಲ್. ಇಲ್ಲಿ ಬೆಳಗ್ಗೆ 4 ಟ್ರಿಪ್ ಬಸ್ ಓಡಾಡುತ್ತವೆ. 10 ಗಂಟೆ ಬಳಿಕ ಬಸ್ಸೇ ಇಲ್ಲ. ಮತ್ತೆ ಸಂಜೆ 6.45ಕ್ಕೆ ಒಂದು ಟ್ರಿಪ್ ಇದೆ. ಮದ್ಯದಲ್ಲಿ ಓಡಾಡಲು ಆಟೋವೇ ಗತಿ. ವಿದ್ಯಾ ರ್ಥಿಗಳಿಗೆ ಮರಳಿ ಬರಲು ಭಾರಿ ಸಮಸ್ಯೆ. ನಮ್ಮೂರಿನ ಗೋಳು ಯಾರಿಗೂ ಅರ್ಥವೇ ಆಗಲ್ಲ. ಗಂಟೆಗೊಂದು ಬಸ್ ಇದ್ದರೆ
ಎಷ್ಟು ಒಳ್ಳೆದಿತ್ತು.
– ಕಲಾಯಿ ಬೈಲ್ ನಿವಾಸಿಗಳು. *ಪುನೀತ್ ಸಾಲ್ಯಾನ್