Advertisement
ಹೊಸ ವಾಹನ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯ ಎಂಬ ನಿಯಮವಿದೆ. ಒಂದು ವೇಳೆ ಆಧಾರ್ ಕಾರ್ಡ್ ಬೇರೆ ಜಿಲ್ಲೆಯ ಅಥವಾ ಬೇರೆ ರಾಜ್ಯದ ವಿಳಾಸದಲ್ಲಿದ್ದರೆ ಅದ ರೊಂದಿಗೆ ಸ್ಥಳೀಯ ವಿಳಾಸದ ಬೇರೊಂದು ದಾಖಲೆ ಕೊಡ ಬೇಕು.
ಕೆಲವು ಆರ್‌ಟಿಒ ಅಧಿಕಾರಿಗಳು ಹೇಳುವಂತೆ, ಆಧಾರ್ ಕಾರ್ಡ್ ಕಡ್ಡಾಯವಿಲ್ಲ, ಇನ್ನು ಕೆಲವು ಅಧಿ ಕಾರಿಗಳ ಪ್ರಕಾರ ಕಡ್ಡಾಯ. ಒಂದುವೇಳೆ ಆಧಾರ್ ಇಲ್ಲದಿದ್ದರೆ ಸ್ಥಳೀಯ ವಿಳಾಸ ಮತ್ತು ನಾಗರಿಕತ್ವ ರುಜು ಪಡಿಸುವ ದಾಖಲೆಗಳನ್ನು ನೀಡಬೇಕು. ಪೂರಕ ದಾಖಲೆಗಳ ಕೊರತೆ ಇದ್ದರೆ ವಿಳಾಸ ದೃಢೀಕರಿಸುವುದಕ್ಕೆ ಸಂಬಂಧಿಸಿ ಅಫಿದವಿಟ್ ಸಲ್ಲಿಸಬಹುದು. ಅವೆಲ್ಲವೂ ವಾಹನ ನೋಂದಣಿಗೆ ಮಾನ್ಯ ಎನ್ನುತ್ತದೆ ಪ್ರಸ್ತುತ ನಿಯಮ. ಆದರೆ ಅಧಿಕಾರಿಗಳು ಇದನ್ನು ಒಪ್ಪುವುದೇ ಇಲ್ಲ. ಬದಲಾಗಿ ನಿಗದಿತ ಹಣ ಕೊಡದಿದ್ದರೆ ನೋಂದಣಿ ಕಷ್ಟ ಎಂದು ಮಧ್ಯವರ್ತಿಗಳಿಂದ ಹೇಳಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.
Related Articles
Advertisement
ಹಣ ಕೊಡದಿದ್ದರೆ ಯಾವುದಿದ್ದರೂ ಆಗದು ಎಂಬ ಸ್ಥಿತಿ ಇರುವುದು ಕಂಡುಬಂತು.ಈ ಸಂಬಂಧ ಕೆಲವು ಹಿರಿಯ ಆರ್‌ಟಿಒ ಅಧಿಕಾರಿಗಳನ್ನು ಕೇಳಿದರೆ, “ಆಧಾರ್ ಕಡ್ಡಾಯವೆಂಬ ನಿಯಮವಿಲ್ಲ. ಒಂದುವೇಳೆ ಆಧಾರ್ ಕಾರ್ಡ್ ಇದ್ದರೆ ಬೇರೆ ಯಾವ ದಾಖಲೆಯೂ ಬೇಡ. ಅದೇ ಶ್ರೇಷ್ಠ. ಹಾಗೆಂದು ವಿಳಾಸ ದೃಢೀಕರಣ ಸಂಬಂಧ ಬೇರೆ ದಾಖಲೆಗಳಿದ್ದರೆ ಮಾಡಬಾರದು ಎಂದು ಎಲ್ಲೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ವಿಳಾಸದ ಆಧಾರ್ ಕಾರ್ಡ್ ಕೊಡಲೇ ಬೇಕೇ ಎಂಬ ಪ್ರಶ್ನೆಗೆ, “ಆಧಾರ್ ಕಾರ್ಡ್ ಈ ದೇಶದ್ದು. ಯಾವ ಜಿಲ್ಲೆ, ರಾಜ್ಯವಾದರೂ ಪರವಾಗಿಲ್ಲ. ಆಧಾರ್ ಕಾರ್ಡ್ ಆಗಿದ್ದರೆ ಸಾಕು. ಅದಕ್ಕಾಗಿ ಬೇರೆ ಹಣ ತೆರಬೇಕಿಲ್ಲ’ ಎನ್ನುತ್ತಾರೆ ಅಧಿಕಾರಿಗಳು.
ಈ ಅಲಿಖೀತ ನಿಯಮ ಅಧಿಕಾರಿಗಳು ಹಾಗೂ ಅವರ ಮಧ್ಯವರ್ತಿಗಳಿಗೆ ನಿತ್ಯವೂ ಸಾವಿರಾರು ರೂ. ಗಳ ಅಕ್ರಮ ಆದಾಯಕ್ಕೆ ಅನುಕೂಲ ಮಾಡಿಕೊಟ್ಟಿದೆ. ಅಧಿಕಾರಿಗಳಿಗೆ ಮಧ್ಯವರ್ತಿಗಳು ಸಲ್ಲಿಸುವ ಕಡತಗಳ ಆಧಾರದಲ್ಲಿ ಹಣ ಪಾವತಿಸಬೇಕು. ಒಂದುವೇಳೆ ವಾಹನ ಮಾಲಕರೇ ನೇರವಾಗಿ ನೋಂದಣಿಗೆ ಬಂದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂಚಿತವಾಗಿ ತಿಳಿಸುವ ವ್ಯವಸ್ಥೆಯೂ ಇದೆ ಎಂಬುದೂ ಬೆಳಕಿಗೆ ಬಂದಿದೆ. ಎರಡು ಸಾವಿರ ರೂಪಾಯಿ!
ಇದಾವುದಕ್ಕೂ ರಶೀದಿ ಇಲ್ಲ. ಹಾಗಾಗಿ ಅಕ್ರಮ ವ್ಯವಹಾರ ಎಂದು ಪರಿಗಣಿತವಾಗಿದೆ. ವಾಹನ ನೋಂದಣಿದಾರರು ರಾಜ್ಯದ ಬೇರೆ ಜಿಲ್ಲೆ ಯವರಾಗಿದ್ದರೆ 1 ಸಾವಿರ ರೂ. ನೀಡಬೇಕು. ಬೇರೆ ರಾಜ್ಯ ದವರಾಗಿದ್ದರೆ ಸ್ಥಳೀಯ ವಿಳಾಸದೊಂದಿಗೆ 2 ಸಾವಿರ ರೂ. ಪಾವತಿಸಬೇಕು. ಇಲ್ಲವಾದರೆ ದಾಖಲೆ ಗಳು ಮಾನ್ಯವಾಗುವುದಿಲ್ಲ. ವಾಹನ ನೋಂದಣಿದಾರರು ಮತ್ತು ವಾಹನ ನೋಂದಣಿ ಮಾಡಿಸುವ ವಾಹನ ಶೋರೂಂ ಇತ್ಯಾದಿ ಸಂಸ್ಥೆಗಳು ಗತ್ಯಂತರವಿಲ್ಲದೆ ಹಣ ಪಾವತಿಸಿ ನೋಂದಣಿ ಮಾಡಿಸಬೇಕಾದ ಸ್ಥಿತಿ ಉದ್ಭವಿಸಿದೆ. ತಕರಾರು ಮಾಡಿ ದರೆ ತಿಂಗಳುಗಟ್ಟಲೆ ಕಾಯ ಬೇಕಾಗು ತ್ತದೆ. ಹತ್ತಾರು ನೆವ ಹೇಳಿ ಹತ್ತಾರು ಬಾರಿ ಇಲಾಖೆ ಕಚೇರಿಯ ಕಂಬಗಳನ್ನು ಸುತ್ತುವಂತೆ ಅಧಿ ಕಾರಿ ಗಳು ಮಾಡುತ್ತಾರೆ ಎಂಬ ಭಯದಿಂದ ಎಲ್ಲರೂ ತಣ್ಣಗೆ ಹಣ ಕೊಟ್ಟು ಕೆಲಸ ಮಾಡಿಸಿ ಕೊಳ್ಳುತ್ತಿದ್ದಾರೆ ಎಂಬುದು ಇಲಾಖೆಗೆ ಹೋದಾಗ ಪತ್ರಿಕೆ ಪ್ರತಿನಿಧಿಗೆ ಸಿಕ್ಕ ಮಾಹಿತಿ. ವಾಹನ ನೋಂದಣಿಗೆ ಆಧಾರ್ ಬೇಕೇ ಬೇಕು. ಯಾವುದೇ ಜಿಲ್ಲೆಯ ದ್ದಾದರೂ ಪರವಾಗಿಲ್ಲ. ಅದಕ್ಕೆ ಯಾವುದೇ ಸಮಸ್ಯೆಯಿಲ್ಲ. ಅದಕ್ಕಾಗಿ ಹಣ ಪಾವತಿಸಬೇಕಿಲ್ಲ. – ಗಂಗಾಧರ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ