Advertisement

CM office ನವೀಕರಣ: ಮತ್ತೊಂದು ವಿವಾದ

01:20 AM Nov 17, 2024 | Team Udayavani |

ಬೆಂಗಳೂರು: ಉಪ ಚುನಾವಣೆ ಕದನದ ಮಧ್ಯೆಯೇ ವಿಧಾನ ಸೌಧದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ನವೀಕರಣ ಹಾಗೂ ಹೊಸ ಪೀಠೊಪಕರಣ ಖರೀದಿ ವಿಚಾರ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿವೆ. ಭ್ರಷ್ಟ ಸಿದ್ದರಾಮಯ್ಯನವರ ಅರಾಜಕ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿಗೆ ನೀಡಲು ನಯಾಪೈಸೆ ಇಲ್ಲ. ಎಂದು ಬಿಜೆಪಿ ಟೀಕಿಸಿದೆ.

Advertisement

ಗುಂಡಿಬಿದ್ದಿರುವ ರಸ್ತೆಗಳನ್ನು ಮುಚ್ಚುವ ಯೋಗ್ಯತೆ ಇಲ್ಲದ ಮಜಾವಾದಿಗಳ ಐಷಾರಾಮಿ ದರ್ಬಾರ್‌ ಅಸಹ್ಯ ಹುಟ್ಟಿಸುತ್ತಿದೆ ಎಂದು ಜೆಡಿಎಸ್‌ ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next