Advertisement
ದರ್ಬಾರ್ ಆರಂಭದಲ್ಲಿ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ವೇದಘೋಷ ಜರಗಿತು. ದರ್ಬಾರ್ ಕಾರ್ಯಕ್ರಮಕ್ಕೂ ಮೊದಲು ವಿ| ಎ. ಚಂದನ್ ಕುಮಾರ್ ಮತ್ತು ಬಳದಿಂದ ಕೊಳಲು ವಾದನ, ಪಟ್ಲ ಸತೀಶ್ ಶೆಟ್ಟಿ, ರತ್ನಕರ ಶೆಣೈ ಭಾಗವತಿಕೆಯಲ್ಲಿ ಬಡಗು, ತೆಂಕುತಿಟ್ಟು ಹಾಗೂ ಭರತನಾಟ್ಯ ಒಳಗೊಂಡ ಶ್ರೀಕೃಷ್ಣಗೀತಾ ರೂಪಕ ಪ್ರಸ್ತುತಗೊಂಡಿತು. ಅನಂತರ ಅಮೆರಿಕದ ಭಕ್ತನಿಂದ ಭಕ್ತಿಗೀತೆ, ನೃತ್ಯ ಗೋಪಾಲ (ಕಾಳಿಂಗ ಮರ್ದನ) ಗುಂಪುನೃತ್ಯ ನೆರವೇರಿತು.
ವಿದೇಶಗಳ ಅತಿಥಿಗಳನ್ನುದ್ದೇಶಿಸಿ ಮಾತನಾಡುವಾಗ ಪುತ್ತಿಗೆ ಶ್ರೀಗಳು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಿದರು. ಇವರು
ಅಧಿಕೃತವಾಗಿ ಓದಿದ್ದು ಕಾಪು ತಾಲೂಕಿನ ಕೆಮುಂಡೇಲು ಹಿ.ಪ್ರಾ. ಶಾಲೆಯಲ್ಲಿ ಏಳನೆಯ ತರಗತಿವರೆಗೆ. ಅನಂತರ ಖಾಸಗಿಯಾಗಿ ಇಂಗ್ಲಿಷ್ ಕಲಿತು ವಿದೇಶಗಳಲ್ಲಿ ಇಂಗ್ಲಿಷ್ ಉಪನ್ಯಾಸ ಮಾಡುವುದನ್ನು ಕರಗತ ಮಾಡಿಕೊಂಡರು. ಶ್ರೀಕೃಷ್ಣನ ಸೇವೆ ಜೀವನದ ಅಪೂರ್ವ ಅವಕಾಶ: ಪುತ್ತಿಗೆ ಶ್ರೀ
ಉಡುಪಿ: ಶ್ರೀಕೃಷ್ಣನ ಸೇವೆಯೇ ಜೀವನದ ಅಪೂರ್ವ ಅವಕಾಶ. ಗೀತೆಯಲ್ಲಿ ಹೇಳುವಂತೆ ಭಗವತ್ ಕೇಂದ್ರಿತ ಜೀವನವೇ ಮುಖ್ಯ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ನುಡಿದರು. ಗುರುವಾರ ಬೆಳಗ್ಗೆ ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಮಗೆ ಭಗವದ್ಗೀತೆಯೇ ಸ್ಫೂರ್ತಿ. ಭಗವಂತನನ್ನು ಸರ್ವಸ್ವ ಎಂದು ತಿಳಿದರೆ ಪಶ್ಚಾತ್ತಾಪ ಪಡುವಂತಿಲ್ಲ. ಭಗವಂತನ ಸಂಬಂಧವೇ ಶಾಶ್ವತ. ಉಳಿದ ಸಂಬಂಧಗಳು ಹೆಚ್ಚೆಂದರೆ ನೂರು ವರ್ಷ ಇರಬಹುದು ಎಂದರು.
Related Articles
Advertisement