ಉಡುಪಿ: ಪುತ್ತಿಗೆ ಶ್ರೀ ಪರ್ಯಾಯೋತ್ಸವ ಪ್ರಯುಕ್ತ ರಥ ಬೀದಿ ಆನಂದತೀರ್ಥ ಮಂಟಪದಲ್ಲಿ ಜ. 9ರಿಂದ 17ರ ವರೆಗೆ ಸಂವಾದ ಮತ್ತು ಚಿಂತನ ಸರಣಿ ನಡೆಯಲಿದೆ.
ಜ. 9ರಂದು ಸಂಜೆ 5ರಿಂದ “ಔಷಧವಿಲ್ಲದೆ ಬದುಕೋಣ’ ಸಂವಾದ ನಡೆಯಲಿದೆ. ಪಾಕತಜ್ಞ ಮಿಲೆಟ್ ರಾಂಬಾಬು, ಆಯುರ್ವೇದ ತಜ್ಞ ಡಾ| ಶ್ರೀಧರ ಬಾಯರಿ ಭಾಗವಹಿಸಲಿದ್ದಾರೆ.
ಜ. 10ರ ಸಂಜೆ 5ರಿಂದ ಪ್ರತಿಮೆ ಪ್ರಾಂಗಣಗಳ ಯೋಜನೆ ಅನಿವಾರ್ಯವೆ? ಸಂವಾದದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಸುಮನಾ ಭಟ್ ಕುತ್ಪಾಡಿ ಭಾಗವಹಿಸಲಿದ್ದಾರೆ.
ಜ. 11ರ ಸಂಜೆ 5ರಿಂದ ಶ್ರೀಲಕ್ಷ್ಮೀ ರಾಜ್‌ಕುಮಾರ್ ಅವರಿಂದ ಕ್ಷಾತ್ರ ಮತ್ತು ಅಧ್ಯಾತ್ಮ ಉಪನ್ಯಾಸ, ಜ. 12ರ ಸಂಜೆ 5ರಿಂದ “ಗೋಕುಟುಂಬ’ ಸಂವಾದ ಗೋತಜ್ಞ ಶೈಲೇಶ್ ಹೊಳ್ಳ, ಪ್ರೊ| ಪವನ್ ಕಿರಣ್‌ಕೆರೆ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಜ. 13ರ ಸಂಜೆ 5ಕ್ಕೆ ಕರಾವಳಿ ರಾಜವಂಶ ಮತ್ತು ಕೊಡುಗೆ ವಿಷಯಲ್ಲಿ ವಾಗ್ಮಿ ಆದರ್ಶ ಗೋಖಲೆ ಭಾಷಣ, ಜ. 15ರಂದು ಕೃಷ್ಣರಾಜ ಭಟ್ ಕುತ್ಪಾಡಿ, ಅರುಂಧತಿ ವಸಿಷ್ಠ ಅವರಿಂದ ಹರಿಕಥಾಮೃತಂ, ಜ. 16ರಂದು ಸಂಜೆ 5ಕ್ಕೆ “ಹಮೇಶಾ ದೇಶ್ ಕ ಅಸ್ತಿತ್ವ ಗಾಯ್ ಮೇ ಹೀ ಹೋತಾ ಹೈ’ ವಿಷಯದಲ್ಲಿ ದಿಲ್ಲಿ ಗೋ ಚಳವಳಿಗಾರ ಮೊಹಮ್ಮದ್ ಫೈಜ್‌ಖಾನ್ ಭಾಷಣ ಮಾಡಲಿದ್ದಾರೆ.
ಜ. 17ಕ್ಕೆ “ರಾಮಾಯಣದ ಪ್ರಸ್ತುತತೆ ಮತ್ತು ರಾಮರಾಜ್ಯ’ಸಂವಾದದಲ್ಲಿ ರೋಹಿತ್ ಚಕ್ರತೀರ್ಥ, ಷಣ್ಮುಖ ಹೆಬ್ಬಾರ್, ರಘುಪತಿ ಭಟ್ ನಡೆಸಿಕೊಡಲಿದ್ದಾರೆ.