ಉಡುಪಿ: ಶ್ರೀ ಪುರಂದರ ದಾಸರ ಒಂದೊಂದು ರಚನೆಯಲ್ಲೂ ದೈವಿಕತೆ, ದೇವರ ಸಾನ್ನಿಧ್ಯವಿದೆ. ಅವುಗಳನ್ನು ಬಹಳ ಭಕ್ತಿಯಿಂದ ಭಾವಪೂರ್ಣವಾಗಿ ರಚಿಸಿದ್ದಾರೆ.
ಅವು ಸುಲಲಿತ ಮತ್ತು ಭಾವಜನಕ ವಾಗಿದ್ದು,ಪ್ರಭಾವ ಬೀರುತ್ತವೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಸಭೆ ಯನ್ನು ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಿರಂತರ ಆಲಿಸುವಂತೆ ಮಾಡುವಶಕ್ತಿಯುಳ್ಳ ಶಾಸ್ತ್ರೀಯ ರಚನೆಗಳು ಪುರಂದರದಾಸರದ್ದು. ಆದುದ ರಿಂದಲೇ ಅವರ ಹಾಡುಗಳು ಎಲ್ಲ ಕಾಲಕ್ಕೂ ಎಲ್ಲರ ಮೇಲೂ ಪ್ರಭಾವ ಬೀರುತ್ತದೆ ಎಂದರು.
ಶ್ರೀಮನ್ ಮಾಧವತೀರ್ಥ ಸಂಸ್ಥಾನದ ಕಿರಿಯ ಪಟ್ಟದ ಯತಿ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರು ಮಾತನಾಡಿ, (ಭ) ಭಕ್ತಿಪೂರ್ವಕವಾಗಿ (ಜ) ಜನಾರ್ದನ ರೂಪಿಯಾದ ಕೃಷ್ಣನನ್ನು ಕೃಷ್ಣರೂಪಿ ಯಾದ ಜನಾರ್ದನನ್ನು (ನೆ) ನಿರಂತರನೆನೆಯುವುದೇ ಭಜನೆ ಎಂದರು. ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ವಿವಿಧ ವಿಭಾಗದ ಗಾಯನ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಇಂದುಮತಿ ಶ್ರೀ ನಿವಾಸನ್ ರಚಿಸಿದ ಶ್ರೀಕೃಷ್ಣನ ಕಲಾಕೃತಿಯನ್ನು ಪುತ್ತಿಗೆ ಶ್ರೀಪಾದರಿಗೆ ಸಮರ್ಪಿಸಿದರು.
ಶ್ರೀ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಪಾದರ ಭಕ್ತರಾದ ಯಜ್ಞಸುಬ್ರಹ್ಮಣ್ಯಂ ನ್ಯೂಜೆರ್ಸಿ, ವಿದ್ವಾಂ ಸ ಡಾ| ವೆಂಕಟನರಸಿಂಹಜೋಷಿ ಹುಬ್ಬಳ್ಳಿ ಉಪಸ್ಥಿತರಿದ್ದರು.ಡಾ| ಬಿ. ವಿ| ಗೋಪಾಲ ಆಚಾರ್ಯ ಸ್ವಾಗತಿಸಿದರು. ಶ್ರೀ ಮಠದ ರಮೇಶ್ ಭಟ್ ಕೆ. ಸಂಯೋಜಿಸಿದ್ದರು. ಮಹಿತೋಷ್ ಆಚಾರ್ಯ ವಂದಿಸಿದರು.