ಉಡುಪಿ: ಕರಾವಳಿ, ಬಯ ಲುಸೀಮೆ, ಮಲೆನಾಡಿನ ಸಮಸ್ಯೆಗಳೇ ಬೇರೆ. ಹಿಂದೆ ಸಂಸದನಾಗಿ 20 ತಿಂಗಳಷ್ಟೇ ಅವಕಾಶ ಸಿಕ್ಕಿದ್ದು, ಹಲವು ಅಭಿವೃದ್ಧಿ ಕಾರ್ಯ ಮಾಡಿರುವೆ. ಈಗ ಅವಕಾಶ ಸಿಕ್ಕರೆ ಇನ್ನಷ್ಟು ಕೆಲಸ ಮಾಡುವೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಬುಧವಾರ ಜಿಲ್ಲಾ ಕಾಂಗ್ರೆಸ್ ಭವನದ ಎದುರು ನಡೆದ ಕಾರ್ಯಕರ್ತರ ಸಮಾ ವೇಶದಲ್ಲಿ ಅವರು ಮಾತನಾಡಿದರು.
ಸಂಸದನಾದರೆ ಮೀನುಗಾರರ ಸಮಸ್ಯೆಗಳು, ಕರಾವಳಿಯ ಹೆದ್ದಾರಿ, ಮಲೆನಾಡು, ಬಯಲು ಸೀಮೆ, ಅಡಿಕೆ ಧಾರಣೆ, ಕಾಫಿ ಬೆಳೆಗಾರರ ಸಮಸ್ಯೆಗೆ ಪರಿಹಾರ ಹುಡುಕುವೆ. ಪ್ರವಾ ಸೋದ್ಯಮ, ಮೀನುಗಾರಿಕೆ ಅಭಿವೃದ್ಧಿ, ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು ಸ್ಥಾಪನೆ ಅಗತ್ಯವಿದೆ ಎಂದರು.
ಕ್ಷೇತ್ರದ ಉಸ್ತುವಾರಿ, ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಕಾಂಗ್ರೆಸ್ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಇಂದಿಗೂ ಪ್ರಭಾವಶಾಲಿ. ಕಾರಣಾಂತರಗಳಿಂದ ಸೋತಿರಬಹುದು. ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉತ್ತಮ ಅಭ್ಯರ್ಥಿಗಳನ್ನೇ ಕಣಕ್ಕಿಳಿ ಸಿದೆ. ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳಂತೆ ಕೆಲಸ ನಿರ್ವಹಿಸಬೇಕು ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಹೆಗ್ಡೆ ಸಚಿವರಾಗಿದ್ದಾಗ ಮಲ್ಪೆ-ಮಣಿಪಾಲ ರಸ್ತೆ ಅಭಿವೃದ್ಧಿ, ಕುಂದಾಪುರ ಫ್ಲೈ ಓವರ್ ಸಹಿತ ಹಲವು ಕೊಡುಗೆ ನೀಡಿದ್ದರು. 10 ವರ್ಷ ಸಂಸದರಾಗಿದ್ದ ಶೋಭಾ ಕರಂದ್ಲಾಜೆಯವರ ಕೊಡುಗೆ ಸಂತೆಕಟ್ಟೆ ಬಳಿಯ ಸುರಂಗ ಮಾತ್ರ ಎಂದರು.
ಮಾಜಿ ಸಚಿವೆ ಮೋಟಮ್ಮ ಮಾತ ನಾಡಿ, ಯಾವುದೇ ಧರ್ಮ, ದೇವಸ್ಥಾನಗಳನ್ನು ಏಜೆನ್ಸಿಯವರಿಗೆ ನೀಡಿಲ್ಲ. ಪ್ರಧಾನಿ ಮೋದಿಯವರು ಹೊಸ ಹೊಸ ವೇಷ ಹಾಕಿ ಜನರನ್ನು ಮಂಕು ಮಾಡು ತ್ತಿದ್ದಾರೆ. ಬಿಜೆಪಿ ಒಂದು ನಾಟಕ ಕಂಪೆನಿ ಎಂದರು.
ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಡಾ| ಅಂಶುಮಂತ್, ಎಐಸಿಸಿ ಕಾರ್ಯದರ್ಶಿ ಸಂದೀಪ್, ಶಾಸಕರಾದ ರಾಜೇಗೌಡ, ಜಿ.ಎಚ್. ಶ್ರೀನಿವಾಸ್, ಎಚ್.ಡಿ. ತಮ್ಮಯ್ಯ, ನಯನಾ ಮೋಟಮ್ಮ, ಮಾಜಿ ಶಾಸಕ ರಾದ ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ, ಸುಧೀರ್ ಕುಮಾರ್ ಮರೋಳಿ, ಎಂ.ಎ. ಗಫೂರ್, ಪ್ರಸಾದ್‌ರಾಜ್ ಕಾಂಚನ್, ಉದಯ ಶೆಟ್ಟಿ ಮುನಿಯಾಲು ಮತ್ತಿರರು ಉಪಸ್ಥಿತರಿದ್ದರು.