Advertisement

Udupi: ಬೆಡ್‌ಶೀಟ್‌ ಮಾರುವ ನೆಪ; ಮನೆಗೆ ಅಕ್ರಮ ಪ್ರವೇಶ

08:40 PM Sep 15, 2024 | Team Udayavani |

ಉಡುಪಿ: ಬೆಡ್‌ಶೀಟ್‌ ಮಾರಾಟ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರು ಮನೆಯೊಳಗೆ ಅಕ್ರಮ ಪ್ರವೇಶಗೈದ ಘಟನೆ ನಡೆದಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅಂಬಲಪಾಡಿಯ ಬಳಿಯಲ್ಲಿ ವಿನೋದಿನಿ (82) ಅವರು ಒಬ್ಬರೇ ವಾಸಮಾಡಿಕೊಂಡಿದ್ದರು. ಸೆ. 14ರಂದು ಸಂಜೆ ಯಾರೋ ಅಪರಿಚಿತ ವ್ಯಕ್ತಿ ಬೆಡ್‌ಶೀಟ್‌ ಮಾರುವ ನೆಪದಲ್ಲಿ ವಿನೋದಿನಿ ಅವರ ಮನೆಯ ಒಳಗೆ ಅಕ್ರಮವಾಗಿ ಪ್ರವೇಶಿಸಿ ಬೆಡ್‌ಶೀಟ್‌ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ. ಇದನ್ನು ಗಮನಿಸಿದ ಮನೆಯ ಕೇರ್‌ಟೇಕರ್‌ ತುಳಜಾ ಅವರು ಪ್ಲಂಬಿಂಗ್‌ ಕೆಲಸಕ್ಕೆ ಬಂದಿದ್ದ ಪ್ರಶಾಂತ್‌ ಅವರನ್ನು ಕರೆದು ವಾಪಸು ಬರುವಷ್ಟರಲ್ಲಿ ಅಪರಿಚಿತ ವ್ಯಕ್ತಿ ಮನೆಯಿಂದ ಪರಾರಿಯಾಗಿ ಕಾರಿನಲ್ಲಿ ವೇಗವಾಗಿ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next