ಉಡುಪಿ: ಅಪಾರವಾದ ಕಣ್ಣು ನೋವಿನಿಂದ ಪ್ರಸಾದ್ ನೇತ್ರಾಲಯಕ್ಕೆ ಬಂದ ಮಲ್ಪೆಯ 70 ವರ್ಷದ ವೃದ್ಧೆಯ ಬಲ ಕಣ್ಣಿನಿಂದ ಸುಮಾರು 9 ಸೆ. ಮೀ . ಉದ್ದದಜೀವಂತ ಹುಳವನ್ನು ಯಶಸ್ವಿಯಾಗಿ ಹೊರತೆಗೆದು ನೆಮ್ಮದಿ ನೀಡಿದ ಘಟನೆ ನಡೆದಿದೆ.
ಪ್ರಸಾದ ನೇತ್ರಾಲಯದ ಮುಖ್ಯ ವೈದ್ಯ ಕರ್ನಾಟಕ ರಾಜ್ಯೋತ್ಸವ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ ಡಾ . ಕೃಷ್ಣ ಪ್ರಸಾದ್ ಮತ್ತು ಅವರ ತಂಡ ಭಾನುವಾರ ರಾತ್ರಿತುರ್ತು ಶಸ್ತ್ರ ಚಿಕಿತ್ಸೆ ನಡೆಸಿ ಈ ಹುಳದಿಂದ ವೃದ್ಧೆಗೆ ಮುಕ್ತಿನೀಡಿದ್ದಾರೆ .
ನೇತ್ರದಲ್ಲಿನ ಹುಳಬಾಧೆ ಇಂದ ಪೀಡಿತರಾಗಿದ್ದ ವೃದ್ಧೆ , ಜೂ . 1 ರಂದು ಮಂಗಳವಾರ ಬೆಳಗ್ಗೆ ಪ್ರಸಾದ ನೇತ್ರಾಲಯಕ್ಕೆ ಭೇಟಿ ನೀಡಿದ್ದರು. ವಿಪರೀತ ಎಡ ಕಣ್ಣುನೋವಿನ ಬಗ್ಗೆ ವೈದ್ಯರ ಬಳಿ ಸಮಾಲೋಚಿಸಿದ್ದರು. ತುರ್ತಾಗಿ ಪರೀಕ್ಷಿಸಿದ ಡಾ. ಕೃಷ್ಣಾಪ್ರಸಾದ್ ಜೀವಂತ ಹುಳು ಅಕ್ಷಿಪಟಲದ ಸುತ್ತು ತಿರುಗುತ್ತಲೇ ಇರುವುದನ್ನು ಗಮನಿಸಿ ತುರ್ತು ಚಿಕಿತ್ಸೆಗೆಸಿದ್ಧರಾದರು. ತಡಮಾಡಿದರೆ ಈ ಹುಳು ಮೆದುಳು ಪ್ರವೇಶಿಸಿದರೇ ಮತ್ತಷ್ಟು ಅಪಾಯವೆಂದು ಅರಿತ ಡಾ . ಕೃಷ್ಣಪ್ರಸಾದ್ ಅವರ ಸಹ ವೈದ್ಯರಾದ ಡಾ .ಅಪರ್ಣಾ ನಾಯಕ್ಇ ವರನ್ನೊಳಗೊಂಡ ತಂಡ ನೇತ್ರ ಚಿಕಿತ್ಸೆಗೆ ಸಿದ್ಧತೆ ನಡೆಸಿತು. ಹುಳವನ್ನು ತತ್ ಕ್ಷಣ ನಿಷ್ಕ್ರಿಯಗೊಳಿಸಲು ಔಷಧಿಯನ್ನು ನೀಡಲಾಯಿತು. ಇದರ ಪರಿಣಾಮವೋ ಏನೋ ಎಡಗಣ್ಣಿನಲ್ಲಿದ್ದ ಹುಳು ಕಾಣದಾಯಿತು. ಅದೇ ಭಾಗದಲ್ಲಿ ಹುಳು ಸತ್ತಿರಬಹುದು ಎಂದು ಅಂದಾಜಿಸಲಾಯಿತು. ಕಣ್ಣು ನೋವು ಮಾಯವಾಯಿತು. ಇದರಿಂದ ತುಸು ನೆಮ್ಮದಿಪಡೆದ ವೃದ್ಧೆ ಮನೆಗೆ ತೆರಳಿದರು .
ಆದರೆ ಭಾನುವಾರ ಬಲಗಣ್ಣಿನಲ್ಲಿ ಮತ್ತೆ ನೋವು ಕಾಣಿಸಿಕೊಂಡಿತು. ವಿಪರೀತ ಕಣ್ಣು ಉರಿ ಮತ್ತು ಕಣ್ಣು ಕೆಂಪಾಯಿತು. ಈ ತನ್ಮಧ್ಯೆ ಮನೆಯವರಿಗೆ ಹುಳವೂ ಹರಿದು ಬರುವುದು ಖಂಡಿತ್.ಇದರಿಂದ ಭಯ ಭೀತರಾದ ಕುಟುಂಬದವರು ವೃದ್ಧೆಯನ್ನು ಪ್ರಸಾದ ನೇತ್ರಾಲಯಕ್ಕೆ ಮತ್ತೆ ಕರೆದುಕೊಂಡು ಬಂದರು. ಕರೆಗೆ ತುರ್ತಾಗಿ ಸ್ಪಂದಿಸಿದ ಡಾ. ಕೃಷ್ಣಪ್ರಸಾದ್ ಮತ್ತು ಅವರ ತಂಡ ತಡಮಾಡದೆ ತುರ್ತು ಚಿಕಿತ್ಸೆ ಮಾಡಿಯೇ ಬಿಟ್ಟರು. ಆಶ್ಚರ್ಯವೆಂಬಂತೆ ಸುಮಾರು 9 ಸೆಂ . ಮೀ. ಉದ್ದದ ಜೀವಂತಹುಳು ಹೊರಬಂತು.
26 ವರ್ಷಗಳ ಅನುಭವದಲ್ಲಿ ಒಮ್ಮೆ ರೆಟಿನಾ ಹಿಂದಿನಿಂದ ಹಾಗೂ ಕಣ್ಣಿನ ಕುಣಿಕೆಯಿಂದ ಹದಿನೈದು ವರ್ಷಗಳ ಹಿಂದೆ ವಿಭಿನ್ನ ರೀತಿಯ ಹುಳವನ್ನು ತಾವೇ ಶಸ್ತ್ರ ಚಿಕಿತ್ಸೆನಡೆಸಿ ಹೊರತೆಗೆದ್ದಿದ್ದೆವು. ಆದರೆ ಭಾನುವಾರ ಹೊರತೆಗೆದ ಹುಳು ನೇತ್ರದ ಹೊರಪದರದಿಂದ ಹೊರತೆಗೆದ ಪ್ರಥಮ ಹುಳುವಾಗಿದೆ ಎಂದು ಡಾ. ಕೃಷ್ಣಪ್ರಸಾದ್ ತಿಳಿಸಿದ್ದಾರೆ. ಈ ಹುಳದ ಕುರಿತಾಗಿ ಮತ್ತಷ್ಟು ಅಧ್ಯಯನ ನಡೆಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಮಾಹಿತಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.