Advertisement
ನಾಸಿಕ್ ಡೋಲುಮೆರವಣಿಗೆಯಲ್ಲಿ ಸ್ಥಳೀಯ ಕಲಾತಂಡಗಳಷ್ಟೇ ಅಲ್ಲದೆ ಪುಣೆಯ ನಾಸಿಕ್ ಡೋಲು, 60-70 ಮಂದಿಯ ತಾಸೆ, ಪಂಢರಾಪುರದ ಭಜನ ತಂಡಗಳು ಭಾಗವಹಿಸಲಿವೆ. ಕೃಷ್ಣನ ಅವತಾರಕ್ಕೆ ಸಂಬಂಧಿಸಿದ 7ರಿಂದ 8 ಟ್ಯಾಬ್ಲೋಗಳು, ಗೀತೆಯ ನಾಣ್ಣುಡಿ ಇರುವ 3ರಿಂದ 4 ಟ್ಯಾಬ್ಲೋಗಳು, ವಿವಿಧ ಸರಕಾರಿ ಇಲಾಖೆಗಳ 4 ಟ್ಯಾಬ್ಲೋಗಳು ಇರಲಿವೆ.
ಕೇರಳ-ಭಾರತೀಯ ಶೈಲಿಯ ವಿವಿಧ ಮಾದರಿಯ ಚೆಂಡೆಗಳ ಸಹಿತ ಒಟ್ಟು 300ಕ್ಕೂ ಅಧಿಕ ಚೆಂಡೆ ಬಳಗ ಮೆರವಣಿಗೆಯಲ್ಲಿ ಗಮನ ಸೆಳೆಯಲಿವೆ. ಕುಣಿತ ಭಜನೆ, ಜನಪದ ಕಲೆ, ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, 50 ಮಂದಿಯ ತಂಡದ ಕೊರಗರ ಡೋಲು ಮೆರವಣಿಗೆಯಲ್ಲಿರಲಿವೆ. ಮಕ್ಕಳಿಂದ ಪಾರಾಯಣ
ಭಗವದ್ಗೀತೆಯ 18 ಅಧ್ಯಾಯದ ಫಲಕದೊಂದಿಗೆ ಕಿನ್ನಿಮೂಲ್ಕಿಯ ಸಂಸ್ಥೆಯೊಂದರ 40ರಿಂದ 50 ಮಂದಿ ಮಕ್ಕಳು ಪಾರಾಯಣ ಮಾಡಲಿದ್ದಾರೆ. 108 ಕೃಷ್ಣಭಕ್ತರಿಂದ ಭಜನೆ, ವೈವಿಧ್ಯಮಯ ಕೋಲಾಟ, ಕುಣಿತ ಭಜನೆ, ಬಳ್ಳಾರಿಯ ಕೋಲಾಟ, ಜನಪದ ಕಲಾ ಸಂಸ್ಕೃತಿ ಬಿಂಬಿಸುವ ಕಂಬಳದ ಜೀವಂತ ಕೋಣ, ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೋ, ಪರಶುರಾಮನ ಬೃಹತ್ ವಿಗ್ರಹ, ಹುಲಿಯ ಟ್ಯಾಬ್ಲೋ, ಚಿಲಿಪಿಲಿ ಗೊಂಬೆಗಳು, ಜನಪದ ಕಲೆಗಳು, ದರ್ಪಣ ಸಂಸ್ಥೆಯ 35 ಮಂದಿ ಮಹಿಳೆಯರ ಹುಲಿವೇಷ, ಕುರ್ಕಾಲಿನ 30 ಮಂದಿಯ ಹುಲಿವೇಷ, ಕೇರಳ ಶೈಲಿಯ ಧರ್ಮಾರ್ಥವಾಗಿ 70 ಚೆಂಡೆಗಳು, 70 ಮಂದಿಯ ಚೆಂಡೆ ಹಾಗೂ ವಯೋಲಿನ್ ಮೆರವಣಿಗೆಯಲ್ಲಿರಲಿದೆ.
Related Articles
ಮಧ್ವಗಾನ ಯಾನ, ಜೋಗಿ ಸಮಾಜದ ಕುಣಿತ ಭಜನೆ, ವಿಷ್ಣುಸಹಸ್ರನಾಮ ಶ್ಲೋಕಗಳು, ಕೋಟಿಗೀತ ಯಜ್ಞದ ಭೂಮಂಡಲ ಮಾಡಿ ಡಿಜಿಟಲ್ ಮೂಲಕ ತೋರಿಸುವ ವ್ಯವಸ್ಥೆ, ವಾದ್ಯ, ಬ್ಯಾಂಡ್‌ಸೆಟ್‌ಗಳು, ಸ್ಯಾಕೊÕಫೋನ್, ಕೇರಳ ಶೈಲಿಯ ಪಂಚವಾದ್ಯ, ಅಯೋಧ್ಯೆ ರಾಮಮಂದಿರದ ಟ್ಯಾಬ್ಲೋ, ಪೌರಾಣಿಕ ಸನ್ನಿವೇಶದ ಟ್ಯಾಬ್ಲೋ, ಕೆಮ್ಮುಂಡೇಲು ಹಿ.ಪ್ರಾ. ಶಾಲೆಯ “ಗರುಡನಲ್ಲಿ ಕೃಷ್ಣ’ ಕಲ್ಪನೆಯ ಮಕ್ಕಳಿಂದಲೇ ರಚಿಸಲ್ಪಟ್ಟ ಮೋಡದ ಮೇಲೆ ಕೃಷ್ಣ ಹೋಗುವಂತಹ ಟ್ಯಾಬ್ಲೋಗಳು ಜನರನ್ನು ರಂಜಿಸಲಿವೆ.
Advertisement