Advertisement
ಉಡುಪಿ ಡಿವೈಎಸ್‌ಪಿ ಪ್ರಭು ಡಿ.ಟಿ.ಮಾತನಾಡಿ, ಮೊಬೈಲ್ ಕಳವಾದರೆ ಅದನ್ನು ಪತ್ತೆಹಚ್ಚುವ ಅತ್ಯಾಧುನಿಕ ತಂತ್ರಜ್ಞಾನವನ್ನು ಇಲಾಖೆ ಅಭಿವೃದ್ಧಿಪಡಿಸಿದೆ. ಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ತಂತ್ರಜ್ಞಾನವನ್ನು ಬಳಸುವ ಬಗ್ಗೆ ಮಾಹಿತಿ ಇಲ್ಲದವರು ಸ್ಥಳೀಯ ಠಾಣೆಗೆ ಭೇಟಿ ನೀಡಿ, ಅಲ್ಲಿಯೂ ದೂರು ದಾಖಲಿಸಬಹುದು ಎಂದರು.ನಗರ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ್ ಸತಾರೆ, ಪಿಎಸ್‌ಐಗಳಾದ ಈರಣ್ಣ ಶಿರಗುಂಪಿ, ಭರತೇಶ್, ಪುನೀತ್, ಸಿಬಂದಿ ಚೇತನ್, ಬಶೀರ್, ವಿನಯ್ ಉಪಸ್ಥಿತರಿದ್ದರು.
ಮೊಬೈಲ್ ಕಳೆದುಕೊಂಡರೆ ಸಂತ್ರಸ್ತರು ಕೂಡಲೇ ಕೆಎಸ್‌ಪಿ ಆ್ಯಪ್ ಮೂಲಕ ಇ-ಲಾಸ್ ಅಪ್ಲಿಕೇಶ್‌ನಲ್ಲಿ ಪ್ರಕರಣ ದಾಖಲಿಸಬಹುದು. ಅನಂತರ ಪೊಲೀಸರು ಸಿಇಐಆರ್ ಪೋರ್ಟಲ್‌ನಲ್ಲಿ ಮೊಬೈಲ್‌ನ ಐಎಂಇಐ ಸಂಖ್ಯೆ, ಆಧಾರ್ ಕಾರ್ಡ್ ಮಾಹಿತಿ ಹಾಗೂ ಬದಲಿ ಸಂಖ್ಯೆಯನ್ನು ಅಪ್‌ಲೋಡ್ ಮಾಡುತ್ತಾರೆ. ಕಳವಾಗಿರುವ ಮೊಬೈಲ್ ಅನ್ನು ಬೇರೆ ಯಾರಾದರೂ ಸಿಮ್ ಹಾಕಿ ಬಳಕೆ ಮಾಡಿದರೆ ಸಂತ್ರಸ್ತರು ಹಾಗೂ ಪೊಲೀಸರಿಗೆ ಒಟಿಪಿ ಬರುತ್ತದೆ. ಹೀಗೆ ಆರೋಪಿಯನ್ನು ಪತ್ತೆ ಹಚ್ಚಿ ಮೊಬೈಲ್ ಫೋನ್‌ಗಳನ್ನು ಕದ್ದ ವ್ಯಕ್ತಿಯ ಲೊಕೇಷನ್ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಪೊಲೀಸರು ತಿಳಿಸಿದರು.