Advertisement
ಮಣಿಪಾಲ ಕೆಎಂಸಿಯಲ್ಲಿ ಇದುವರೆಗೆ ಸಾಗರ ಹಾಗೂ ಆಸುಪಾಸಿನ ತಾಲೂಕುಗಳ ಸುಮಾರು 168 ಮಂದಿ ಶಂಕಿತ ಮಂಗನ ಕಾಯಿಲೆ ಪ್ರಕರಣಗಳಿಗಾಗಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. ಕುಮಟಾದ ಇಬ್ಬರು, ಹೊನ್ನಾವರದ ಓರ್ವರು ಸೇರಿದಂತೆ ಒಟ್ಟು 25 ಮಂದಿ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆಎಂಸಿ ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.
ಜಿಲ್ಲೆಯಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಉಣ್ಣಿ ನಿವಾರಕ ಡಿಎಂಪಿ ತೈಲ ವಿತರಣೆ ಸೇರಿದಂತೆ ವಿವಿಧ ನಿಯಂತ್ರಣ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳು ಆರೋಗ್ಯ ಇಲಾಖೆ ಜತೆ ಕೈ ಜೋಡಿಸಿವೆ.ಗುರುವಾರ ಕಮಲಶಿಲೆ ದೇವಸ್ಥಾನ ಮತ್ತು ಸಿದ್ದಾಪುರ ವಿಎಸ್‌ಎಸ್‌ಎನ್ ಬ್ಯಾಂಕ್ ವತಿಯಿಂದ ತಲಾ 25,000 ರೂ. ಮೌಲ್ಯದ ಡಿಎಂಪಿ ತೈಲವನ್ನು ವಿತರಿಸಲಾಯಿತು. ಹಲವೆಡೆ ಶಾಲೆಗಳಲ್ಲಿಯೂ ಜಾಗೃತಿ ಕಾರ್ಯಕ್ರಮ ಜರಗಿತು.