Advertisement
ಜಿಲ್ಲೆಯಲ್ಲಿ ವಿವಿಧ ಪ್ರಕಾರದ ಕಳ್ಳತನ ಪ್ರಕರಣಗಳು ಹೆಚ್ಚಳ ಕಂಡುಬರುತ್ತಿದ್ದು ಈ ನಿಟ್ಟಿನಲ್ಲಿ ರೈಲ್ವೇ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸುವ ಕೆಲಸವಾಗಬೇಕು. ಅನ್ಯ ರಾಜ್ಯದಿಂದ ಹಲವಾರು ಮಂದಿ ಆಗಮಿಸುವ ಕಾರಣ ರೈಲ್ವೇ ಪೊಲೀಸರು ಬೀಟ್ ರೀತಿ ಕಾರ್ಯಾಚರಣೆ ಮಾಡಬೇಕು ಎಂದರು.
Related Articles
Advertisement
ಪ್ರವೇಶ ದ್ವಾರದಲ್ಲಿ ತಪಾಸಣೆ ಅಗತ್ಯ
ರೈಲ್ವೇ ನಿಲ್ದಾಣಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ದಾರಿಯಲ್ಲಿ ಸೂಕ್ತ ಭದ್ರತಾ ಸಿಬಂದಿ ಅಥವಾ ಪೊಲೀಸರನ್ನು ನಿಯೋಜಿಸಬೇಕು. ಕೆಮರಾಗಳನ್ನೇ ನಂಬಿಕೊಂಡು ಇರಬಾರದು ಎಂದು ಶಾಸಕರು ಎಚ್ಚರಿಕೆ ನೀಡಿದರು.
ಪಾರ್ಕಿಂಗ್ ಅನ್ನು ಕೂಡ ವ್ಯವಸ್ಥಿತವಾಗಿ ನಡೆಸುವ ಜತೆಗೆ ಈ ಭಾಗದಲ್ಲಿ ಸೂಕ್ತ ಇಂಟರ್‌ಲಾಕ್ ವ್ಯವಸ್ಥೆ ಮಾಡಲು ಶಾಸಕರು ಸೂಚಿಸಿದರು.
ಪ್ರವಾಸ ಮಾಹಿತಿ ಕೌಂಟರ್ ನಿರ್ಮಿಸಿ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಮಾಹಿತಿಗಳನ್ನೊಳಗೊಂಡ ವಿವರಗಳನ್ನು ಪ್ರವೇಶ ದ್ವಾರದಲ್ಲಿ ಅಳವಡಿಸಬೇಕು. ಪ್ಯಾಕೇಜ್ ಟೂರ್‌ಗಳ ಮಾಹಿತಿಗಳನ್ನು ಇದರಲ್ಲಿ ನಮೂದಿಸಬೇಕು. ಜತೆಗೆ ವಿವಿಧ ಎಸ್ಕಲೇಟರ್‌ಗೆ ಅಳವಡಿಸಿರುವ ಛಾವಣೆಯ ಹಿಂಭಾಗದಲ್ಲಿ ಕರಾವಳಿ ವಿವಿಧ ಸಂಸ್ಕೃತಿ ಸಾರುವ ಪೈಂಟಿಂಗ್‌ಗಳನ್ನು ಪ್ರದರ್ಶಿಸಬೇಕು. ರೈಲ್ವೇ ನಿಲ್ದಾಣದ ಒಟ್ಟು ಸೌಂದರ್ಯ ವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು.
ಕಸ ವಿಲೇವಾರಿ ಸಮಸ್ಯೆ
ರೈಲ್ವೇ ನಿಲ್ದಾಣದ ಕಸವನ್ನು ನಗರಸಭೆಯ ಮೂಲಕ ವಿಲೇವಾರಿ ಮಾಡಲಾಗುತ್ತಿದೆಯಾದರೂ ಅದರಲ್ಲಿ ಮಲ-ಮೂತ್ರಗಳು ಸಹಿತ ಎಲ್ಲವನ್ನೂ ಒಂದರಲ್ಲಿ ಹಾಕುವ ಕಾರಣ ಪ್ರತ್ಯೇಕಿಸಲು ತೊಂದರೆ ಉಂಟಾಗುತ್ತಿದೆ ಎಂದು ನಗರಸಭೆ ಅಧಿಕಾರಿ ತಿಳಿಸಿದರು. ಕಸವನ್ನು ಪ್ರತ್ಯೇಕಿಸಿ ನೀಡಿದರಷ್ಟೇ ವಿಲೇವಾರಿ ಮಾಡುವಂತೆ ನಗರಸಭೆಗೆ ಸೂಚನೆ ನೀಡಲಾಗುವುದು ಎಂದು ಶಾಸಕರು ರೈಲ್ವೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಉದಯವಾಣಿ ವರದಿಗೆ ಮೆಚ್ಚುಗೆ
ಉದಯವಾಣಿ ಪತ್ರಿಕೆಯು ಇಲ್ಲಿನ ಸಮಸ್ಯೆಗಳ ಬಗ್ಗೆ ನಿರಂತರ ವರದಿ ಪ್ರಕಟಿಸುವ ಮೂಲಕ ಅಧಿಕಾರಿಗಳ ಕಣ್ತೆರೆಸುವ ಕೆಲಸ ಮಾಡಿದೆ. ವರದಿಯಲ್ಲಿರುವ ಎಲ್ಲ ಅಂಶಗಳೂ ನೈಜತೆಯಿಂದ ಕೂಡಿವೆ. ಸಾಧ್ಯವಿರುವ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವಂತೆ ಸೂಚನೆ ನೀಡಿದ್ದೇನೆ. ಇನ್ನೊಂದು ಬಾರಿ ಇದೇ ರೀತಿ ದಿಢೀರ್ ಭೇಟಿ ನೀಡಿ ಇಲ್ಲಿನ ಕಾರ್ಯವೈಖರಿಗಳನ್ನು ಪರಿಶೀಲಿಸುವೆ. ಜಿಲ್ಲೆಯ ಕೇಂದ್ರ ನಿಲ್ದಾಣವಾದ ಇಲ್ಲಿ ಭದ್ರತೆ ಸಹಿತ ಮೂಲಸೌಕರ್ಯಗಳು ಇಲ್ಲದಿರುವುದು ಜಿಲ್ಲೆಗೂ ಮುಜುಗರ ತರುವಂತಿದೆ. ಈಗಾಗಲೇ ಅಮೃತ್ ಭಾರತ್ ಯೋಜನೆಯಡಿ ಈ ನಿಲ್ದಾಣ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಮನವರಿಕೆ ಮಾಡಲಾಗುವುದು ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು. ಉದಯವಾಣಿ ವರದಿಗೆ ಮೆಚ್ಚುಗೆ ಸುದಿನದಲ್ಲಿ ಪ್ರಕಟವಾದ ವರದಿಗಳನ್ನು ಉಲ್ಲೇಖೀಸುತ್ತಲೇ ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದರು.