Advertisement
ಚಿಕ್ಕನಹಳ್ಳಿಯ ಷಣ್ಮುಗಂ ಅವರು ಕುಟುಂಬಸ್ಥರೊಂದಿಗೆ ಮೇ 13ರಂದು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು. ಬಳಿಕ ಕೃಷ್ಣಮಠದ ವಸಂತ ಮಂಟಪದ ಬಳಿ ತೊಟ್ಟಿಲು ಸೇವೆ ನಡೆಯುತ್ತಿದ್ದು, ದೇವರ ಆರತಿಯನ್ನು ಪಡೆಯುವಾಗ ಯಾರೋ ಕಳ್ಳರು ಷಣ್ಮುಗಂ ಅವರ ಹೆಂಡತಿಯ ವ್ಯಾನಿಟಿ ಬ್ಯಾಗ್‌ನ ಜಿಪ್ ತೆಗೆದು, ಅದರೊಳಗಿದ್ದ ಚಿನ್ನಾಭರಣ ಹಾಕಿದ್ದ ಬಾಕ್ಸ್ ಕಳವು ಮಾಡಿದ್ದಾರೆ ಎನ್ನಲಾಗಿದೆ. ಬಾಕ್ಸ್ ನಲ್ಲಿ 58 ಗ್ರಾಂ ತೂಕದ 2 ಬಳೆಗಳು, 16 ಗ್ರಾಂ ತೂಕದ 2 ಕಿವಿಯೊಲೆ, 13 ಗ್ರಾಂ ತೂಕದ ಮಗುವಿನ ಚಿಕ್ಕ ಬಳೆ, 20 ಗ್ರಾಂ ತೂಕದ ಪೆಂಡೆಂಟ್ ಇರುವ ಚಿನ್ನದ ಸರ, 48 ಗ್ರಾಂ ತೂಕದ ದೊಡ್ಡ ಚಿನ್ನದ ಸರ ಸಹಿತ ಒಟ್ಟು 155 ಗ್ರಾಂ ತೂಕದ ಚಿನ್ನಾಭರಣಗಳಿದ್ದವು. ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 6,30,000 ರೂ. ಆಗಿದೆ.
ಉಪ್ಪುಂದ : ಮನೆಯವರು ಬೇರೆ ಊರಿಗೆ ಹೋಗಿದ್ದ ಸಮಯದಲ್ಲಿ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ನಾವುಂದ ಗ್ರಾಮದ ಬಡಾಕೆರಿಯಲ್ಲಿ ಮೇ 12ರಂದು ನಡೆದಿದೆ. ನಾವುಂದ ಬಡಾಕೆರೆ ನಿವಾಸಿ ಬಿ.ಎಂ. ಯೂಸುಫ್ ವೈ. ಹಾಗೂ ಕುಟುಂಬದವರು ಮೇ 11ರಂದು ಮೈಸೂರಿಗೆ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದು, ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮೇ 12ರಂದು ಬಂದು ನೋಡಿದಾಗ ಬೆಡ್‌ರೂಂನಲ್ಲಿದ್ದ ಫ್ಲೈವುಡ್ ಕಪಾಟಿನ ಬಾಗಿಲನ್ನು ಮುರಿದು ಕಪಾಟಿನಲ್ಲಿದ್ದ 2 ಚಿನ್ನದ ಉಂಗುರ ಹಾಗೂ 5 ಸಾವಿರ ರೂ. ನಗದು ಹಣವನ್ನು ಕದ್ದೊಯ್ದಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
Advertisement