Advertisement

Udupi; ಜ. 26-31: ಅಷ್ಟಪವಿತ್ರ ನಾಗಮಂಡಲೋತ್ಸವ

11:00 PM Jan 23, 2024 | Team Udayavani |

ಉಡುಪಿ: ಕಿದಿಯೂರ್‌ ಹೊಟೇಲ್ಸ್‌ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ಜ. 26ರಿಂದ 31ರ ತನಕ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.

Advertisement

ಜ. 26ರ ಬೆಳಗ್ಗೆ 6ರಿಂದ ಜ. 27, ಜ. 28, 30ರ ಬೆಳಗ್ಗೆ 7ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಜ. 29ರ ಬೆಳಗ್ಗೆ 7.30ರಿಂದ ಮಹಾ ರುದ್ರಯಾಗ, ರಾತ್ರಿ 8ರಿಂದ ವಿವಿಧ ವೇದಿಕೆಗಳಲ್ಲಿ ವಾರಾಣಸಿಯಿಂದ ಆಗಮಿಸಿರುವ ಅರ್ಚಕ ವೃಂದದವರಿಂದ ಸಾಮೂಹಿಕ ಗಂಗಾರತಿ ಜರಗಲಿದೆ.

ಜ. 31: ನಾಗಮಂಡಲೋತ್ಸವ
ಜ.1ರ ಬೆಳಗ್ಗೆ 9.45ಕ್ಕೆ ಅಷ್ಟೋತ್ತರ ಶತಕಲಶಾಭಿಷೇಕ, 10ರಿಂದ ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ನಾಗದೇವರ ದರ್ಶನ, ಕಾಶೀ ವಾರಾಣಸಿಯಿಂದ ತರಿಸಲಾದ ಪವಿತ್ರ ಗಂಗಾಜಲ ಭಕ್ತರಿಗೆ ಸಂಪ್ರೋಕ್ಷಣೆ, ದಾರ ವಿತರಣೆ, ಪಲ್ಲಪೂಜೆ, ಸಂಜೆ 4.30ರಿಂದ ಹಾಲಿಟ್ಟು ಸೇವೆ, 5.30ರಿಂದ ಗಂಗಾರತಿ, 6.30ಕ್ಕೆ ಅಷ್ಟಪವಿತ್ರ ನಾಗಮಂಡಲೋತ್ಸವ ಆರಂಭಗೊಳ್ಳುವುದು.

ಧಾರ್ಮಿಕ ಸಭೆ
ಜ. 26ರಿಂದ 30ರ ತನಕ ಸಂಜೆ ಶ್ರೀವಿಶ್ವೇಶತೀರ್ಥ ವೇದಿಕೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಗೌರವಾಧ್ಯಕ್ಷ ಡಾ| ಜಿ. ಶಂಕರ್‌ ಪ್ರತೀದಿನ ಅಧ್ಯಕ್ಷತೆ ವಹಿಸಲಿದ್ದಾರೆ. ಜ. 26ರಂದು ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರಿಂದ ಆಶೀರ್ವಚನ, ಜೋತಿಷಿ ಕಬಿಯಾಡಿ ಜಯರಾಮ ಆಚಾರ್ಯರಿಂದ ಪ್ರಾಸ್ತಾವಿಕ ನುಡಿ, ಜ. 27ರ ಸಂಜೆ 7ರಿಂದ ನಡೆಯುವ ಸಭೆಯಲ್ಲಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಶ್ರೀ ಶೀರೂರು ಮಠದ ಶ್ರೀವೇದವರ್ಧನತೀರ್ಥ ಶ್ರೀಪಾದರಿಂದ ಆಶೀರ್ವಚನ, ಜೋತಿಷಿ ವಿ| ಶ್ರೀನಿವಾಸ ಭಟ್‌ ಕುತ್ಪಾಡಿ ಉಪನ್ಯಾಸ ನೀಡುವರು.

ಜ. 28ರಂದು ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಂದ ಆಶೀರ್ವಚನ, ಶತವಧಾನಿ ಡಾ| ವಿ| ರಮಾನಾಥ ಆಚಾರ್ಯರಿಂದ ಪ್ರವಚನ, ಜ. 29ರಂದು ಶ್ರೀ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಆಶೀರ್ವಚನ, ವಾಸ್ತುತಜ್ಞ ವಿ| ಸುಬ್ರಹ್ಮಣ್ಯ ಭಟ್‌ ಗುಂಡಿಬೈಲು ಅವರಿಂದ ಉಪನ್ಯಾಸ, ಜ. 30ರಂದು ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರಿಂದ ಆಶೀರ್ವಚನ, ಆಗಮ ಪಂಡಿತ ವಿ| ಪಂಜ ಭಾಸ್ಕರ್‌ ಭಟ್‌ ಅವರಿಂದ ಉಪನ್ಯಾಸ ನಡೆಯಲಿದೆ ಎಂದು ಸೇವಾಕರ್ತ ಕಿದಿಯೂರ್‌ ಹೊಟೇಲ್ಸ್‌ ಪ್ರೈ.ಲಿ.ನ ಎಂಡಿ ಭುವನೇಂದ್ರ ಕಿದಿಯೂರು ತಿಳಿಸಿದ್ದಾರೆ.

Advertisement

ಅನ್ನಸಂತರ್ಪಣೆ, ಸಾಂಸ್ಕೃತಿಕ ವೈಭವ
ಪ್ರತೀ ದಿನ ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ವೈಭವ ನಡೆಯಲಿದೆ. ಜ. 26ರ ರಾತ್ರಿ 8ರಿಂದ ನೃತ್ಯ-ಸಂಗೀತ ವೈಭವ, ಜ. 27ರ ರಾತ್ರಿ 9ರಿಂದ ಭಕ್ತಿ ಗಾನ ಸುಧೆ, ಜ. 28ರ ರಾತ್ರಿ 8ರಿಂದ ವರಾಹರೂಪಂ, ವ್ಹಾ ಪೊರ್ಲುಯಾ-ತುಳು, ಕನ್ನಡ, ದೇಶೀಯ ಜಾನಪದ ಸಂಗೀತ ಫ್ಯೂಷನ್‌, ಜ. 29ರ ರಾತ್ರಿ 8.30ರಿಂದ ಸಂಪೂರ್ಣ ಶ್ರೀಕೃಷ್ಣ ದರ್ಶನ-ನೃತ್ಯ ರೂಪಕ, ಜ. 30ರ ರಾತ್ರಿ 8.30ರಿಂದ “ಅಧ್ಯಕ್ಷೆರ್‌’ ತುಳು ನಗೆ ನಾಟಕ, ಜ. 31ರ ಬೆಳಗ್ಗೆ 10.30ರಿಂದ ವಿಶ್ವೇಶತೀರ್ಥ ವೇದಿಕೆಯಲ್ಲಿ ಶತವೀಣಾವಾದನ ವಿಶೇಷ, ಮಧ್ಯಾಹ್ನ 12.30ರಿಂದ ಸ್ಯಾಕ್ಸೊಫೋನ್ ವಾದನ, 3ರಿಂದ ಭಕ್ತಿ ರಸಾಯನ, ಶ್ರೀ ವಾಸುಕೀ ಮಂಟಪದಲ್ಲಿ ಬೆಳಗ್ಗೆ 10.30ರಿಂದ ಭಕ್ತಿ-ಭಾವ-ಜಾನಪದ ಸಂಗೀತ, ಮಧ್ಯಾಹ್ನ 1ರಿಂದ ಭಕ್ತಿ ಗಾನಾಮೃತ ಜರಗಲಿದೆ.

ಹೊರೆಕಾಣಿಕೆ ಮೆರವಣಿಗೆ
ಜ. 27ರ ಸಂಜೆ 4.30ರಿಂದ ನಾಗದೇವರಿಗೆ ನೂತನವಾಗಿ ನಿರ್ಮಿಸಿದ ರಜತ ಮಂಟಪ, ರಜತ ಕವಚ ಮತ್ತು ಸ್ವರ್ಣ ಲೇಪಿತ ಪ್ರಭಾವಳಿಯಲ್ಲಿ ರಜತ ಬಲಿ ಮೂರ್ತಿಯನ್ನು ಹಸುರುವಾಣಿ ಹೊರೆಕಾಣಿಕೆ ಸಹಿತ ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ತಂದು ಶ್ರೀ ನಾಗ ಸಾನ್ನಿಧ್ಯಕ್ಕೆ ಸಮರ್ಪಣೆಯಾಗಲಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next