ಒಂದು ಕಡೆ ಭಗವತ್ಪರ ಸೇವೆಯನ್ನು ಕರ್ಮ ಎನ್ನುವುದು, ಇನ್ನೊಂದು ಕಡೆ “ನ ಹಿ ಕಶ್ಚಿತ್ ಕ್ಷಣಮಪಿ ಜಾತುತಿಷ್ಠತ್ಯಕರ್ಮಕೃತ್’ ಎನ್ನುವಂತೆ ಒಂದು ಕ್ಷಣವೂ ಕರ್ಮ ಮಾದೆ ಇರುವುದು ಸಾಧ್ಯವಿಲ್ಲ ಎನ್ನುವುದು ವಿರೋಧಾಭಾಸವಲ್ಲವೆ ಎಂಬ ಜಿಜ್ಞಾಸೆ ಬರುತ್ತದೆ. ಭಗವತ್ಪರವಾದ ಕರ್ಮವನ್ನೇ ನಿಜವಾದ ಕರ್ಮ.
ಉಳಿದಂತೆ ನಾವು ಮಾಡುವ ಇತರ ಕೆಲಸಗಳೆಲ್ಲವೂ ವ್ವಾವಹಾರಿಕವಾಗಿ ಪರಿಗಣಿತವಾದುದು. ಕರ್ಮ ಮಾಡದೆ ಇರುವುದು ಸಾಧ್ಯವೇ ಇಲ್ಲ. ಫಲತ್ಯಾಗದಿಂದ ಕರ್ಮವನ್ನು ನಡೆಸುವುದು ಸಾಧ್ಯ. ಶರೀರಧಾರಣೆಯೂ ಕರ್ಮ.
ಒಂದು ದೇಹವನ್ನು ಬಿಟ್ಟು ಇನ್ನೊಂದು ದೇಹ ಪ್ರವೇಶಿಸುವ ಮುನ್ನ ಲಿಂಗ ದೇಹದ ಆ ಯಾತ್ರೆಯೂ ಕರ್ಮವೆಂದೇ ಪರಿಗಣಿಸಲಾಗಿದೆ. ಕರ್ಮಫಲತ್ಯಾಗವೇ ಕರ್ಮದ ಬಂಧನದಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಮಾರ್ಗ. ಕರ್ಮಫಲತ್ಯಾಗವೆಂದರೆ ವೈಯಕ್ತಿಕ ಆಕಾಂಕ್ಷೆ ಇಲ್ಲದಿರುವುದು ಅಂದರೆ ಲೌಕಿಕ ಫಲತ್ಯಾಗ. ಲೋಕಕ್ಕೆ ಒಳಿತಾಗಲೆಂದು ಸನ್ಯಾಸಿಗಳು ಕರ್ಮವನ್ನು ಮಾಡಲೇಬೇಕು, ವೈಯಕ್ತಿಕ ಆಸೆಗಾಗಿ ಅಲ್ಲ. “ಎಲ್ಲವನ್ನೂ ಭಗವಂತನೇ ನಡೆಸುತ್ತಿದ್ದಾನೆ’ (ಕರ್ಮಣಿ ಅಕರ್ಮ ಯ ಪಶ್ಯೆàತ್) ಎಂಬ ಚಿಂತನೆಯೇ ಸನ್ಯಾಸದ ಲಕ್ಷಣ. ಸನ್ಯಾಸಿಗಳಿಗೆ ಕರ್ಮದ ಬಂಧನಗಳು ಕಡಿಮೆಯಾದರೆ ಗೃಹಸ್ಥರಿಗೆ ಜಾಸ್ತಿ ಇರುತ್ತದೆ. ಏಕೆಂದರೆ ಒಂದೊಂದು ಕಾಮ್ಯಕರ್ಮವೂ ಮತ್ತಷ್ಟು ಕರ್ಮಗಳನ್ನು ಸೃಷ್ಟಿಸುತ್ತದೆ. ಇದರಿಂದ ಮೋಕ್ಷ ಪಯಣ ವಿಳಂಬವಾಗುತ್ತದೆ.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811