ಗೀತೆಯ ಇನ್ನೊಂದು ಸಂದೇಶವೆಂದರೆ ಭಗವಂತನಿಂದ ಸೃಷ್ಟವಾದ ಈ ಜಗತ್ತಿನಲ್ಲಿ ಅದರದ್ದೇ ಆದ ಶೈಲಿ/ರೀತಿ ಇದೆ. ಸಹಜವಾಗಿರುವುದೇ ಧರ್ಮ, ಅಸಹಜವಾಗಿರುವುದೇ ಅಧರ್ಮ. ಇದು ಹಿಂದೂ ಧರ್ಮದ ಮೇಲ್ಗಾರಿಕೆಯೂ ಹೌದು.
“ಸಹಜಂ ಕರ್ಮಕೌಂತೇಯ…’ ಎಂಬಂತೆ ಮನುಷ್ಯರು ಸಹಜವಾಗಿ ವರ್ತಿಸಬೇಕು. ಕಳ್ಳ ಕಳ್ಳನಂತೆ ವರ್ತಿಸಿದರೆ ಆಗುವುದಕ್ಕಿಂತ ಹೆಚ್ಚು ಹಾನಿ ಕಳ್ಳ ಸಂಭಾವಿತನಂತೆ ವರ್ತಿಸುವುದರಿಂದ ಆಗುತ್ತದೆ. ಭಗವಂತನಿಗೆ ದುಷ್ಟರ ಬಗ್ಗೆ ದ್ವೇಷವೇನೂ ಇಲ್ಲ. ಹುಲಿ ಮಾಂಸ ತಿಂದರೆ ತಪ್ಪಲ್ಲ. ಅದು ಅದಕ್ಕೆ ಸಹಜವೇ. ಹುಲಿಗೆ ಮಾಂಸವೇ ಸಾತ್ವಿಕ ಆಹಾರ. ಹುಲಿ ತಿನ್ನುವುದನ್ನು ಮನುಷ್ಯರು ತಿಂದರೆ ತಾಮಸ ಆಹಾರವಾಗುತ್ತದೆ.
ಮನುಷ್ಯರಿಗೆ ಸಾತ್ವಿಕ ಆಹಾರವೆಂದರೆ ಸಸ್ಯಾಹಾರ. ಸಸ್ಯಾಹಾರಕ್ಕೆ ತಕ್ಕಂತೆ ಶರೀರವನ್ನು ಹೊಂದಿದ ಪ್ರಾಣಿಗಳು ಸಸ್ಯಾಹಾರವನ್ನೇ ಸ್ವೀಕರಿಸುತ್ತವೆ. ಅಂತಹ ಪ್ರಾಣಿಗಳನ್ನು ಮನುಷ್ಯರು ದಾರಿತಪ್ಪಿಸದ ಹೊರತು ಅವು ದಾರಿ ತಪ್ಪುವುದಿಲ್ಲ. ಪೆಟ್ರೋಲ್ ಕಾರಿಗೆ ಪೆಟ್ರೋಲ್ ಹಾಕಿ ಓಡಿಸುವುದು ಸಹಜ, ಸೀಮೆ ಎಣ್ಣೆ ಹಾಕಿ ಓಡಿಸಿದರೆ ಅಸಹಜ ಮಾತ್ರವಲ್ಲ, ಸಮಸ್ಯೆ ಸೃಷ್ಟಿಯಾಗುತ್ತದೆ. ಎಲ್ಲ ವಾಹನ ಸವಾರರೂ ಅವರವರ ಟ್ರ್ಯಾಕ್‌ನಲ್ಲಿ ಕಾನೂನುಪ್ರಕಾರ ಹೋದರೆ ಅಪಘಾತಗಳು ಸಂಭವಿಸುವುದೇ ಇಲ್ಲ. ಇವೆಲ್ಲ ಉದಾಹರಣೆಗಳಲ್ಲಿ ಸ್ವಕರ್ಮದ ಮಹತ್ವವಿದೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811