ಕರ್ಮವೆಂದರೆ ಬಾಹ್ಯಕರ್ಮವಲ್ಲ, ಮಾನಸಿಕ ಕರ್ಮವೇ ನಿಜವಾದ ಕರ್ಮ ಎಂದು ಕೃಷ್ಣ ಹೇಳಿದ್ದಾನೆ. ಪ್ರಧಾನ ಕರ್ಮ ಭಕ್ತಿಯಾಗಿರಬೇಕು. ಉಳಿದದ್ದು ಇದಕ್ಕೆ ಪೂರಕವಾಗಿರಬೇಕು. ನಾನು ಎಂಬ ಇಗೋ, ನಾನೊಬ್ಬ ಸ್ಪೆಶಲ್ ಎಂಬ ಚಿಂತನೆ ಬಂದರೆ ಆತಂಕ, ದುಃಖ ಎಲ್ಲವೂ ಬರುತ್ತದೆ.
ನಾನು ಸಮಾಜದಲ್ಲಿ ಅತಿ ಚಿಕ್ಕವ ಎಂದು ತಿಳಿದರೆ ದುಃಖ, ಆತಂಕ ಇರುವುದಿಲ್ಲ. ಅದಕ್ಕಾಗಿ “ದಾಸೋಹಂ’ ಪರಿಕಲ್ಪನೆ ಬಂದಿರುವುದು. ಆದರೆ ದಾಸರಲ್ಲಿ “ಸ್ಪೆಶಲ್ ದಾಸ’ರೆಂಬ ಮಾನಸಿಕ ವೃತ್ತಿ ಬರಕೂಡದು.
ಆಂಜನೇಯನನ್ನು ರಾವಣ ಯಾರು ಎಂದು ಪ್ರಶ್ನಿಸಿದಾಗ “ಸುಗ್ರೀವನ ರಾಜ್ಯದಲ್ಲಿ ಕೊನೆಯ ವ್ಯಕ್ತಿ’ ಎಂದು ಹೇಳಿದ. ದೂತನನ್ನು ಕಳುಹಿಸುವಾಗ ಯಾರನ್ನು ಕಳುಹಿಸುವುದು? ಮುಖ್ಯರನ್ನಲ್ಲ. ನಾವು ಉನ್ನತ ಮಟ್ಟದವರೆಂದು ತಿಳಿದಾಗಲೇ ಸಮಸ್ಯೆ ಉಂಟಾಗುತ್ತದೆ. ಕೊನೆಯ ವ್ಯಕ್ತಿ ಎಂದು ತಿಳಿದಾಗ ಬೇಸರವಾಗುವ ಪ್ರಮೇಯವೇ ಇಲ್ಲ. ನಾವು ನಿರೀಕ್ಷೆಗಳನ್ನು ಇಟ್ಟುಕೊಂಡಾಗಲೇ ಈಡೇರದಾಗ ದುಃಖ ಬರುವುದು. ನಿರೀಕ್ಷೆಗಳಿರದಿದ್ದರೆ ದುಃಖವೇ ಇಲ್ಲ. ದೇವರ ಪ್ರೀತಿ ಸಿಕ್ಕಿದರೆ ಸಾಕೆಂಬ ಭಾವ ಬೇಕು. ಆತ್ಮಸಂತೋಷಕ್ಕಾಗಿ ಕರ್ಮಗಳನ್ನು ಮಾಡಿದರೆ ಆತಂಕಗಳಿಗೆ ಎಡೆ ಇರುವುದಿಲ್ಲ. ಫಲದ ಯೋಚನೆಯೇ ಎಲ್ಲ ಬಗೆಯ ದುಃಖಗಳಿಗೆ ಕಾರಣ. ಆತ್ಮಸಂತೋಷಕ್ಕಿಂತ ದೊಡ್ಡ ಫಲ ಇನ್ನಾವುದಿದೆ?
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811