ಉಡುಪಿ: ಉಡುಪಿ ಜನತೆಯ ವಿಶೇಷ ಆಕರ್ಷಣೆಯಾಗಿರುವ ಉಡುಪಿ ಉತ್ಸವವು ಕಲ್ಸಂಕ ಬಳಿ ಇರುವ ರಾಯಲ್ ಗಾರ್ಡನ್‌ನಲ್ಲಿ ಆರಂಭವಾಗಿದೆ.
ಮಕ್ಕಳು, ಯುವಕರು ಮತ್ತು ಗೃಹಿಣಿಯರನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು ಈ ಉತ್ಸವ ವನ್ನು ಸಿದ್ಧಗೊಳಿಸಲಾಗಿದೆ.
ನೂರಕ್ಕೂ ಅಧಿಕ ಮಳಿಗೆಯಲ್ಲಿ ಬಣ್ಣಬಣ್ಣದ ಮೇಣದ ಬತ್ತಿ, ಸ್ಕೂಟರ್, ಬೈಕ್, ಕೈಗಡಿಯಾರ, ತಂಪು ಕನ್ನಡಕ, ಬ್ರಹತ್ ಪುಸ್ತಕ ಮಳಿಗೆ, ಒಂದು ಗ್ರಾಂ ಚಿನ್ನದ ಆಭರಣ , ರಾಜಸ್ಥಾನ ಹ್ಯಾಂಡ್ ಲೂಮ್ಸ್ ಬಟ್ಟೆ, ಬಳೆ ಅಂಗಡಿ, ಉತ್ತರ ಪ್ರದೇಶದ ಖಾದಿ ಬಟ್ಟೆ, ಫಿರೋಜ್‌ಬಾದ್‌ನ ಪಿಂಗಾಣಿ ಪಾತ್ರೆ, ಅಟೋಮೊಬೈಲ್ಸ್, ಚಪ್ಪಲಿ,ವ್ಯಾಯಾಮ ಸಾಮಾಗ್ರಿ,ಸೋಲಾರ್ ಲೈಟ್, ಮೈಸೂರ್ ಸ್ಯಾಂಡಲ್ ಸೋಪು, ಅಗರ್ ಬತ್ತಿ, ಲೋಬನ ಹುಡಿ, ದೂಪದ ಕಡ್ಡಿ , ಚಪಾತಿ ಮಾಡುವ, ತರಕಾರಿ ಕತ್ತರಿಸುವ ಯಂತ್ರ , ಸಂಜೀವಿನಿ ನೋವಿನ ಎಣ್ಣೆ , ಕಂಪ್ಯೂಟರ್ ಜಾತಕ, ಎಲ್ಲ ವರ್ಗದ ಜನರು ಬಳಸಬಲ್ಲ ಹೈಫ್ರಿಡಮ್ ಸೈಕಲ್, ಉತ್ತರ ಪ್ರದೇಶದ ಹ್ಯಾಂಡ್ ಲೂಮ್ಸ್ ಕಾಪೆìಟ್, ಕಾಲಿಗೆ ಮಸಾಜ್ ಮಾಡುವ ಮೀನು ,ಗೃಹಬಳಕೆ ಸಾಮಗ್ರಿಗಳು, ಎಲೆಕ್ಟ್ರಾನಿಕ್‌ಪರಿಕರ ಗಳು, ವಿವಿದ ರಾಜ್ಯದ ಬ್ಯಾಗ್,ಸಿದ್ಧ ಉಡುಪುಗಳು, ಆಲಂಕಾರಿಕ ಸಾಮಗ್ರಿಗಳು, ಕ್ಯಾಲೆಂಡರ್ ಫೋಟೋಗಳು ಇಲ್ಲಿವೆ.
ಭಾರತದ ಮಣ್ಣಿನ ಪಾತ್ರೆ
ಭಾರತ ದೇಶದ ಶುದ್ಧ ಆವೆ ಮಣ್ಣಿನಿಂದ ತಯಾರಿಸಿದ ಸೀಸ ರಹಿತ ಪರಿಸರ ಸ್ನೆàಹಿ ವಿಶಿಷ್ಟ ಮಣ್ಣಿನ ಉತ್ಪನ್ನಗಳಿಗೆ ಇಲ್ಲಿ ಭಾರಿ ಬೇಡಿಕೆ ಅನ್ನ, ಇಡ್ಲಿ, ಆಪಮ್ ತಯಾರಿಸುವ ಕುಕ್ಕರ್, ರೋಟಿ,ದೋಸೆ,ಚಪಾತಿ ಕಾಯಿಸುವ ನಾನ್‌ಸ್ಟಿಕ್ ತವಗಳು ಚಾ,ಕಾಫಿ,ಜೂಸ್,ನೀರು ಕುಡಿಯುವ ಗ್ಲಾಸ್‌ಗಳು, ಬಾಟಲ್‌ಗಳು, ಪದಾರ್ಥ, ಅಡುಗೆ, ತಿಂಡಿ ಮಾಡುವ ಪಾತ್ರೆಗಳು ಮತ್ತು ಇನ್ನಿತರ ಮನೆಬಳಕೆಯ ಸಾಮಾಗ್ರಿಗಳನ್ನು ಮಣ್ಣಿನಲ್ಲೆ ತಯಾರಿಸಲಾಗಿದೆ.