Advertisement

ಬಜೆಟ್ ನಿರೀಕ್ಷೆಗಳು : ಉಡುಪಿ ಜಿಲ್ಲೆಗೆ ಬೇಕಿದೆ ಸರಕಾರಿ ವೈದ್ಯ ಕಾಲೇಜು

12:42 AM Jan 28, 2021 | Team Udayavani |

ರಾಜ್ಯ ಬಜೆಟ್‌ಗೆ ಸರ್ವ ತಯಾರಿ ನಡೆಯುತ್ತಿದ್ದು, ಉಡುಪಿ ಜಿಲ್ಲೆಯ ಬೇಡಿಕೆಯ  ಪಟ್ಟಿಯೂ ಬೆಳೆಯುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಉಡುಪಿ ಜಿಲ್ಲೆಯ ನಿರೀಕ್ಷೆಗಳೂ ಬಹಳಷ್ಟಿವೆ.

  • ರೈತರ ಆಶಾಕಿರಣವಾಗಿದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಸ್ಥಗಿತದಿಂದ ಸಾವಿರಾರು ಮಂದಿ ಕೃಷಿಕರು ತೊಂದರೆಗೊಳಗಾಗಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಾದರೂ ಕಾರ್ಖಾನೆ ಪುನರಾರಂಭದ ನಿರೀಕ್ಷೆ ಈಡೇರಲಿದೆಯೇ? ಎಂಬ ಕಾತರಜಿಲ್ಲೆಯ ಜನರದ್ದು.
Advertisement

ತಲಾ ಆದಾಯ : 2,65,955 ರೂಪಾಯಿ

  • ಶೈಕ್ಷಣಿಕವಾಗಿ ಜಿಲ್ಲೆ ಮುಂದುವರಿದಿದ್ದರೂ ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜು ಇಲ್ಲ ಎಂಬ ಕೊರಗು ಹಲವಾರು ವರ್ಷಗಳಿಂದಲೂ ಕಾಡುತ್ತಲೇ ಇದೆ. ಕಳೆದ ಬಜೆಟ್‌ನಲ್ಲಿಯೂ ಈ ಬಗ್ಗೆ ನಿರೀಕ್ಷೆ ಇತ್ತಾದರೂ ಈಡೇರಿರ‌ಲಿಲ್ಲ.

ಕಳೆದ  ಬಜೆಟ್‌ನಲ್ಲಿ ಯೋಜನಾ ವೆಚ್ಚ  : 1.33%

  • ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ಮೀನುಗಾರಿಕಾ ನೀತಿ ರಚಿಸಿ ಮೀನುಗಾರರ ಬವಣೆ ನೀಗಿಸುವಂತೆ ಈಗಾಗಲೇ ಹಲವೆಡೆಗಳಿಂದ ಬೇಡಿಕೆ ವ್ಯಕ್ತವಾಗುತ್ತಿದೆ.

ಸಚಿವರ  ಸಂಖ್ಯೆ : 1

  • ಬೈಂದೂರು ಹಾಗೂ ಕೊಲ್ಲೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಕೋನದಿಂದ ಉಡಾನ್‌ ಯೋಜನೆಯಡಿ ಬೈಂದೂರಿನಲ್ಲೊಂದು ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಚಿಂತನೆಗಳೂ ನಡೆಯುತ್ತಿವೆ. ಈ ಬಗ್ಗೆ ಬಜೆಟ್‌ನಲ್ಲಿ ಅಧಿಕೃತವಾಗಿ ಪ್ರಕಟನೆಯಾದರೆ ಅಭಿವೃದ್ಧಿಯ ಆಶಾವಾದಕ್ಕೆ ಹೊಸ ಹುರುಪು ಬರಲಿದೆ.

ಮಾನವ ಅಭಿವೃದ್ಧಿ  ಸೂಚ್ಯಂಕ  ರ್‍ಯಾಂಕ್‌ : 12

  • ಪಡುಕೆರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹು ಕೋಟಿ  ವೆಚ್ಚದ ಮರೀನಾ ಯೋಜನೆ ಘೋಷಣೆಯ ಬಗ್ಗೆಯೂ ಈ ಬಾರಿಯ ಬಜೆಟ್‌ನಲ್ಲಿ ನಿರೀಕ್ಷೆ ಹೊಂದಲಾಗಿದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next