ಉಡುಪಿ : ಜಿಲ್ಲೆಯಲ್ಲಿ ಶುಕ್ರವಾರ 92 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ 2 ಮಂದಿ ಮೃತಪಟ್ಟಿದ್ದು, ಕೋವಿಡ್ ಸಕ್ರಿಯ ಪ್ರಕರಣ 1,260ಕ್ಕೆ ಇಳಿಕೆಯಾಗಿದೆ.
ಮೃತರ ಸಂಖ್ಯೆ 387ಕ್ಕೆ ಏರಿಕೆಯಾಗಿದೆ. ಉಡುಪಿಯಲ್ಲಿ 49, ಕುಂದಾಪುರದಲ್ಲಿ 24, ಕಾರ್ಕಳದಲ್ಲಿ 18, ಅನ್ಯಜಿಲ್ಲೆಯ ಒರ್ವ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.
ಗುಣಮುಖರಾಗಿ ಆಸ್ಪತ್ರೆಯಿಂದ 160 ಮಂದಿ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 65,901 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಜೂ.24ರಂದು 2,804 ಮಂದಿಯ ಗಂಟಲು ಮಾದರಿಯನ್ನು ಸಂಗ್ರಹಿಸಲಾಗಿದೆ.2,170 ಮಂದಿ ಮೊದಲ ಹಾಗೂ 754 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡರು.
ಇದನ್ನೂ ಓದಿ :ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ
ಬ್ಲ್ಯಾಕ್ ಫಂಗಸ್: ಹೊಸ ಪ್ರಕರವಿಲ್ಲ
ಉಡುಪಿ : ಜಿಲ್ಲೆಯಲ್ಲಿ ಶುಕ್ರವಾರ ಬ್ಲ್ಯಾಕ್ ಫಂಗಸ್ ಪತ್ತೆಯಾಗಿಲ್ಲ. ಹೊರ ಜಿಲ್ಲೆಯ ರೋಗಿಯೊಬ್ಬರು ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಜಿಲ್ಲೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಕ್ರಿಯ ಪ್ರಕರಣ 5ಕ್ಕೆ ಏರಿಯಾಗಿದೆ.