Advertisement

Udupi; ರಾಮಮಂದಿರಕ್ಕೆ ಕಾಂಗ್ರೆಸ್‌ ವಿರೋಧ: ಶೋಭಾ ಕರಂದ್ಲಾಜೆ

10:51 PM Dec 31, 2023 | Team Udayavani |

ಉಡುಪಿ: ಕಾಂಗ್ರೆಸ್‌ ಕಳೆದ 70 ವರ್ಷಗಳಿಂದ ಅಯೋಧ್ಯೆಯ ವಿರುದ್ಧ ಹೋರಾಟ ಮಾಡಿತ್ತು. ಕಾಂಗ್ರೆಸ್‌ನ ಕಪಿಲ್‌ ಸಿಬಲ್‌ ಅಯೋಧ್ಯೆಯ ವಿರುದ್ಧ ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಆಗಬಾರದು ಎಂದು ಕಾಂಗ್ರೆಸ್‌ ಉದ್ದೇಶವಾಗಿತ್ತು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

Advertisement

ಇಂದ್ರಾಳಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ,ಅಲ್ಪಸಂಖ್ಯಾಕರಿಗೆ ನೋವಾಗಬಾರ ದೆಂದು ಕಾಂಗ್ರೆಸ್‌ ರಾಮ ಮಂದಿರದ ವಿರುದ್ಧ ನಿಲುವು ಹೊಂದಿತ್ತು. ಆದರೆ 2014ರ ಅನಂತರ ನ್ಯಾಯಾಲಯಕ್ಕೆ ರಾಮ ಮಂದಿರದ ಕುರಿತಾದ ಎಲ್ಲ ಮಾಹಿತಿಯನ್ನು ಒದಗಿಸಲಾಯಿತು. ನ್ಯಾಯಾಲಯದಲ್ಲಿ ಜಯ ಆಗಿದೆ. ಈಗ ಭವ್ಯವಾದ ಮಂದಿರ ನಿರ್ಮಾಣವಾಗುತ್ತಿದೆ ಎಂದರು.

ಬಿಜೆಪಿ, ವಿಶ್ವಹಿಂದೂ ಪರಿಷತ್‌ ಯಾವುದೇ ರಾಜಕೀಯವನ್ನು ಮನಸ್ಸಿನಲ್ಲಿಟ್ಟುಕೊಂಡಿಲ್ಲ. ರಾಮಮಂದಿರದ ಪ್ರತಿಷ್ಠಾಪನೆಯಲ್ಲಿ ಎಲ್ಲರೂ ಭಾಗವಹಿಸಬೇಕು, ಎಲ್ಲರೂ ರಾಮನ ದರ್ಶನ ಮಾಡಬೇಕು. ಇದು ನಮ್ಮ ಅಸ್ಮಿತೆಯ ಪ್ರಶ್ನೆ. ಕಾಂಗ್ರೆಸ್‌ನವರು ಗೈರಾದರೆ ದೇಶಕ್ಕೆ ಮತ್ತು ನಮ್ಮ ಶ್ರದ್ಧೆಗೆ ಮಾಡಿದ ಅವಮಾನವಾಗಲಿದೆ. ಕಾಂಗ್ರೆಸ್‌ ನಾಯಕರು ಬರುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ರಾಜ್ಯ ಸರಕಾರದ ವಿರುದ್ಧ ಹಲವಾರು ಮಂದಿ ಹೋರಾಟದ ಮೂಡ್‌ನ‌ಲ್ಲಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ದಮನ ನೀತಿಯ ಮೂಲಕ ಅವರ ಬಾಯಿ ಮುಚ್ಚಿಸುತ್ತಿದೆ ಎಂದು ಆರೋಪಿಸಿದರು.

ಹೋರಾಟಗಾರರ ಮಾತುಗಳನ್ನು ನಿಲ್ಲಿಸುವ ಕೆಲಸಕ್ಕೆ ಕೈ ಹಾಕಿದೆ. ಕನ್ನಡದ ಹೋರಾಟಗಾರರು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ತಪ್ಪು, ಸರಿಗಳು ಎಲ್ಲ ಸಂದರ್ಭಗಳಲ್ಲೂ ನಡೆಯುತ್ತವೆ. ಹೋರಾಟಗಾರರನ್ನು 15 ದಿನ ಬಂಧಿಸಿ ಜೈಲಿನಲ್ಲಿ ಇಡುವುದು ಖಂಡಿತವಾಗಿಯೂ ಸರಿಯಲ್ಲ, ಸರಕಾರ ಹೋರಾಟಗಾರಿಗೆ ಯಾಕೆ ಹೆದರುತ್ತಿದೆ? ರಾಜ್ಯ ಸರಕಾರ ಕನ್ನಡ ಹೋರಾಟಗಾರರ ನೆರವಿಗೆ ಧಾವಿಸಬೇಕು ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next