Advertisement
ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರ ಬರುತ್ತದೆ. 8, 10, 362 ಮಹಿಳೆಯರು, 7,62,558 ಪುರುಷರು ಹಾಗೂ 38 ತೃತೀಯ ಲಿಂಗಿಯರು ಸೇರಿದಂತೆ 15,72,958 ಮತದಾರರಿದ್ದಾರೆ. ಇದರಲ್ಲಿ 536 ಶತಾಯುಷಿ ಮತದಾರರಾಗಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವೊಂದರಲ್ಲೇ 148 ಶತಾಯುಷಿಗಳಿದ್ದರೆ, ತರಿಕೆರೆಯಲ್ಲಿ 121 ಶತಾಯುಷಿಗಳಿದ್ದಾರೆ. ಕುಂದಾಪುರದಲ್ಲಿ 21, ಉಡುಪಿಯಲ್ಲಿ 71, ಕಾಪುವಿನಲ್ಲಿ 50, ಕಾರ್ಕಳದಲ್ಲಿ 36, ಶೃಂಗೇರಿಯಲ್ಲಿ 34 ಹಾಗೂ ಮೂಡಿಗೆರೆಯಲ್ಲಿ 55 ಶತಾಯುಷಿ ಮತದಾರರಿದ್ದಾರೆ.
Related Articles
ಕಾಪುವಿನ 4,235, ಕುಂದಾಪುರದ 3,916 ಯುವ ಮತದಾರರು ಹಾಗೂ ಚಿಕ್ಕಮಗಳೂರಿನ 3,796, ಶೃಂಗೇರಿಯ 3,346, ತರೀಕೆರೆಯ
2,919 ಹಾಗೂ ಮೂಡಿಗೆರೆಯ 2,692 ಯುವ ಮತದಾರರು ಸೇರಿದ್ದಾರೆ.
Advertisement
ಶೇ. 100 ಮತದಾನಕ್ಕೆ ಆದ್ಯತೆ 85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶವಿದೆ. ಯಾರಿಗೆ ಮತದಾನ ಕೇಂದ್ರಕ್ಕೆ ಬರಲು ಸಾಧ್ಯವಿದೆಯೋ ಅಂತವರು ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಿದರೆ ಉತ್ತಮ. ಯುವಮತದಾರರ ನೋಂದಣಿ ಚೆನ್ನಾಗಿ ಆಗಿದೆ. ಪ್ರತಿಶತ 100ರಷ್ಟು ಮತದಾನಕ್ಕೆ ಅರಿವು ಮೂಡಿಸುತ್ತಿದ್ದೇವೆ.
ಡಾ| ವಿದ್ಯಾಕುಮಾರಿ, ಚುನಾವಣಾಧಿಕಾರಿ,
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ 1,842 ಮತಗಟ್ಟೆ
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತದಾನವನ್ನು ವ್ಯವಸ್ಥಿತವಾಗಿ ನಡೆಸಲು ಕ್ಷೇತ್ರದಲ್ಲಿ 1,842 ಮತಗಟ್ಟೆ ಸ್ಥಾಪಿಸ
ಲಾಗುತ್ತದೆ. ಕುಂದಾಪುರದಲ್ಲಿ 222, ಉಡುಪಿಯಲ್ಲಿ 226, ಕಾಪುವಿನಲ್ಲಿ 209, ಕಾರ್ಕಳದಲ್ಲಿ 209, ಶೃಂಗೇರಿಯಲ್ಲಿ 256, ಮೂಡಿಗೆರೆಯಲ್ಲಿ 231, ಚಿಕ್ಕಮಗಳೂರಿನಲ್ಲಿ 261 ಹಾಗೂ ತರೀಕೆರೆಯಲ್ಲಿ 228 ಮತಗಟ್ಟೆ ಸ್ಥಾಪನೆ ಮಾಡಲಾಗುತ್ತದೆ.