Advertisement
ಇದು ಚಿತ್ರದುರ್ಗದ ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರ ಹೇಳಿಕೆ. ಶ್ರೀಕೃಷ್ಣ ಮಠದಲ್ಲಿ ಬುಧವಾರ ವಸಂತ ಸಂತ ಸಂದೇಶ ಮಾಲಿಕೆಯಲ್ಲಿ ಸಂದೇಶ ನೀಡಿದ ಅವರು ಈ ವಿಷಯವನ್ನು ನಾನು ಚಿತ್ರದುರ್ಗದಲ್ಲಿ ಹೇಳಿದರೂ ಉಡುಪಿ ಕಡೆಯ ಮಾಧ್ಯಮಗಳಲ್ಲಿ ಪ್ರಕಟವಾಗಲಿಲ್ಲ ಎಂದರು. ಬಸವಣ್ಣನವರು ಎಂಟನೇ ಶತಮಾನದಲ್ಲಿ ದೇವರನ್ನು ವಿರೋಧಿಸಲಿಲ್ಲ. ದೇವರು ಮತ್ತು ಭಕ್ತರ ನಡುವಿನ ಅಂತರವನ್ನು ವಿರೋಧಿಸಿದಾಗ, ಸಮಾನತೆ ಕಾಪಾಡಲು ಯತ್ನಿಸಿದಾಗ ವಿರೋಧ ವ್ಯಕ್ತವಾಯಿತು. ಅನುಭವ ಮಂಟಪದಲ್ಲಿ ಎಲ್ಲರನ್ನು ಸೇರಿಸಿದರು. ದಲಿತರಾದ ಮಾದಾರ ಚೆನ್ನಯ್ಯನವರೂ ಶ್ರೇಷ್ಠ ಸಂಸ್ಕಾರವನ್ನು ಪಡೆದು ಉನ್ನತ ಮಟ್ಟಕ್ಕೇರಿದರು. ಬಸವಣ್ಣ- ಮಾದಾರ ಚೆನ್ನಯ್ಯನವರು ಹುಟ್ಟು ಹಾಕಿದ ಚಳವಳಿ ಮತ್ತೆ ಬರಲಿಲ್ಲ. ಮತ್ತೆ ಅಂತರ ಸೃಷ್ಟಿಯಾಯಿತು. 1970ರಲ್ಲಿ ನಾನು ಹುಟ್ಟುವುದಕ್ಕೆ ಮುನ್ನವೇ ಪೇಜಾವರ ಶ್ರೀಗಳು ದಲಿತರ ಕಾಲನಿಗಳಲ್ಲಿ ಪಾದಯಾತ್ರೆ ಮಾಡಿದರು. ತಮ್ಮ ವಿಚಾರಗಳನ್ನು ಉಳಿಸಿಕೊಂಡು ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಯತ್ನಿಸಬೇಕಾದರೆ ಗಟ್ಟಿತನಬೇಕು ಎಂದರು.
ಈಗ ಅಲ್ಪಸಂಖ್ಯಾಕರೆಂದು ಕರೆಸಿಕೊಳ್ಳುವವರು ದೇಶದ ಯಾವುದೇ ಭಾಗದಲ್ಲಿಯಾದರೂ ಒಂದೇ ಆಗಿ
ಕಾಣಿಸಿಕೊಳ್ಳುತ್ತಾರೆ. ಆದರೆ ಹಿಂದೂ ಸಮಾಜದಲ್ಲಿ ಬೇರೆ ಬೇರೆ ಜಾತಿ ಯವರು ಬೇರೆ ಬೇರೆ ರಾಜ್ಯಗಳಲ್ಲಿ ಭಿನ್ನ ಭಿನ್ನವಾಗಿರುತ್ತಾರೆ. ಹಾಗಿದ್ದರೆ ಅಲ್ಪಸಂಖ್ಯಾಕರೆಂದರೆ ಯಾರು ಎಂದರು.
ಕೋಮುಸಾಮರಸ್ಯ- ಜಾತಿ ಸಾಮರಸ್ಯ ಪ್ರಗತಿಪರರು ಕೋಮು ಸಾಮ ರಸ್ಯದ ಹೆಸರಿನಲ್ಲಿ ಹಿಂದೂ ಧರ್ಮದವರಲ್ಲಿ ದ್ವೇಷದ ಬೀಜ ಬಿತ್ತುತ್ತಾರೆ. ನಾವು ಜಾತಿ ಸಾಮರಸ್ಯಕ್ಕೆ ಶ್ರಮಿಸುತ್ತ ಇದ್ದೇವೆ. ಒಂದೆಡೆ ಸಂಪ್ರದಾಯವಾದಿ ಗಳು ನಮ್ಮ ನಡೆಯನ್ನು ಟೀಕಿಸುತ್ತಾರೆ, ಇನ್ನೊಂದೆಡೆ ಪ್ರಗತಿಪರರು ರಾಜಕೀಯ ಎನ್ನುತ್ತಾರೆ. ನಾವು ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಜಾತಿಜಾತಿಗಳ ನಡುವೆ ಸಾಮರಸ್ಯ, ಸಮಾನತೆ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಶ್ರೀ ಪೇಜಾ ವರ ಶ್ರೀಗಳು ನುಡಿದರು. ಕಿರಿಯ ಶ್ರೀಗಳು ಆಶೀರ್ವಚನ ನೀಡಿದರು. ವಾಸುದೇವ ಭಟ್ ಕಾರ್ಯಕ್ರಮ ನಿರ್ವಹಿಸಿದರು.
Related Articles
ಅನೇಕ ಕ್ರಾಂತಿಪುರುಷರು, ದಾರ್ಶನಿಕರು ಕಾಲಕಾಲಕ್ಕೆ ಆಗಿ ಹೋಗಿದ್ದಾರೆ. ಇವರನ್ನು ಕಾಲವಾದ ಬಳಿಕ ದೇವರು, ಕ್ರಾಂತಿಪುರುಷರು, ದಾರ್ಶನಿಕರ ಸ್ಥಾನದಲ್ಲಿರಿಸಿ ಪೂಜಿಸುತ್ತೇವೆ. ಇರುವಾಗ ಮಾತ್ರ ವಿರೋಧಿಸುತ್ತೇವೆ, ಕನಿಷ್ಠ ಗೌರವ ಕೊಡುವುದೂ ಇಲ್ಲ. ಇದಕ್ಕೆ ಸ್ಪಷ್ಟ ನಿದರ್ಶನ ಪೇಜಾವರ ಶ್ರೀಗಳು. ಇವರಿಗೆ ಬಂದ ಟೀಕೆಗಳನ್ನು ನಾನು ನೋಡಿದ್ದೇನೆ.
ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ
Advertisement